ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಲಸ ಮಾಡಲು ಮನಸಿಲ್ಲದಿದ್ದರೆ ಹೊರಡಿ: ಅಧಿಕಾರಿಗಳಿಗೆ ಶಾಸಕ ಇಕ್ಬಾಲ್ ಎಚ್ಚರಿಕೆ

Published 23 ಆಗಸ್ಟ್ 2024, 7:14 IST
Last Updated 23 ಆಗಸ್ಟ್ 2024, 7:14 IST
ಅಕ್ಷರ ಗಾತ್ರ

ಹಾರೋಹಳ್ಳಿ: ಸಾರ್ವಜನಿಕರ ಕೆಲಸ ಮಾಡಬೇಕು. ಅದು ಆಗದಿದ್ದರೆ ಕೆಲಸ ಬಿಟ್ಟು ಹೊರಡಿ ಎಂದು ಶಾಸಕ ಇಕ್ಬಾಲ್ ಹುಸೇನ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಹಾರೋಹಳ್ಳಿಯ ತಾಲ್ಲೂಕು ಕಚೇರಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್‌ ಆಗಿ ಆದೇಶ ನೀಡಿದ ಅವರು, ‘ಕಚೇರಿಗಳಲ್ಲಿ ವ್ಯಾಪಾರ ನಡೆಸಿದ್ದೀರಿ... ಹಣ ನೀಡದ ಜನರ ಕೆಲಸ ಮಾಡಲು ಹಿಂದೇಟು ಹಾಕುತ್ತೀರಿ... ನಿಮಗೆ ಕೆಲಸ ಮಾಡಿ ಎಂದು ಹೇಳಲು ಯಾರು ಬರಬೇಕು. ಸಾರ್ವಜನಿಕರ ಕೆಲಸಗಳು ಆಗದಿದ್ದರೆ ನಾನು ಸಹಿಸುವುದಿಲ್ಲ. ಜನ ಸಂಪರ್ಕ ಸಭೆಗೆ ಮಾಹಿತಿ ಇಲ್ಲದೆ ಬರಬೇಡಿ ಎಂದು ತರಾಟೆ ತೆಗೆದುಕೊಂಡರು.

ಬೆಳಗುಳಿ ಗ್ರಾಮಸ್ಥರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ನಾವು ಆಶ್ರಯ ಯೋಜನೆಗೆ ಮೀಸಲಿರಿಸಿದ್ದ ಜಾಗವನ್ನು ಬೇರೆಯವರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದೀರಿ. ಎಲ್ಲವೂ ಗೊತ್ತಿದೆ. ಇದು ಹೀಗೆಯೇ ಮುಂದುವರಿದರೆ ಎಲ್ಲರಿಗೂ ತಕ್ಕ ಪಾಠ ಕಳಿಸಬೇಕಾಗುತ್ತದೆ ಎಂದು ಸಭೆಯುದ್ಧಕ್ಕೂ ಅಧಿಕಾರಿಗಳ ಬೆವರಿಳಿಸಿದರು.

ಟಿ. ಹೊಸಹಳ್ಳಿ ಅಂಬೇಡ್ಕರ ಭವನಕ್ಕೆ ಜಾಗ ಕೇಳಿದ್ದಾರೆ. ಕುಡಿಯುವ ನೀರಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಮನವಿ ಮಾಡಿದ್ದಾರೆ. ರಾವುತನಹಳ್ಳಿ ಕೆರೆ ದುರಸ್ಥಿಗೆ ವಿನಂತಿಸಿದ್ದಾರೆ... ಮಲ್ಲೇನಹಳ್ಳಿ ಕೆರೆ ಒತ್ತುವರಿ ತೆರವುಗೊಳಿಸಲು ಕೇಳಿಕೊಂಡಿದ್ದಾರೆ. ಈ ಎಲ್ಲಾ ಕೆಲಸಗಳು ಆದಷ್ಟು ಬೇಗ ಪೂರ್ಣಗೊಳ್ಳಬೇಕು ಎಂದು ಸೂಚಿಸಿದರು. 

ಸಭೆಯಲ್ಲಿ ತಹಶೀಲ್ದಾರ್ ಆರ್. ಶಿವಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ವೇತಾ ಬಾಯಿ, ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT