ಗುರುವಾರ , ನವೆಂಬರ್ 14, 2019
18 °C

ಶಾಲೆ–ಕಾಲೇಜಿಗೆ ರಜೆ: ಬಸ್ ಸಂಚಾರ ಅನುಮಾನ

Published:
Updated:

ರಾಮನಗರ: ಬಂದ್‌ ಕರೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲೆ–ಕಾಲೇಜಿಗೆ ಗುರುವಾರವೂ ರಜೆ ನೀಡಿ ಜಿಲ್ಲಾಧಿಕಾರಿ ಅರ್ಚನಾ ಆದೇಶ ಹೊರಡಿಸಿದ್ದಾರೆ.

ಗುರುವಾರ ಮುಂಜಾನೆಯಿಂದಲೇ ಬಂದ್‌ ಆರಂಭವಾಗುವ ಸಾಧ್ಯತೆ ಇದೆ. ಇದರಿಂದಾಗಿ ಸಾರ್ವಜನಿಕ ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳುವುದಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಈಗಾಗಲೇ ಆದೇಶ ಹೊರಡಿಸಿದ್ದು, ಗುರುವಾರ ಬಾರ್‌ಗಳು ಸಹ ಬಂದ್‌ ಆಗಿರಲಿವೆ.

ಪ್ರತಿಕ್ರಿಯಿಸಿ (+)