ತಾಲ್ಲೂಕಿನ ಮರಲಗೊಂಡಲ ಗ್ರಾಮದ ನಿವಾಸಿ ರೈತ ಉಮೇಶ್ ಜಮೀನಿನಲ್ಲಿ ಗೆಣಸು ಬೆಳೆದಿದ್ದು ಕಾಡು ಹಂದಿಗಳು ಬೆಳೆ ನಾಶ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬೆಳೆ ಸುತ್ತ ವಿದ್ಯುತ್ ತಂತಿ ಅಳವಡಿಸಿದ್ದ. ಈ ತಂತಿ ಸ್ಪರ್ಶಿಸಿ ಶನಿವಾರ ರಾತ್ರಿ 4 ವರ್ಷದ ಚಿರತೆ ಮೃತಪಟ್ಟಿದೆ. ಭಯಗೊಂಡ ರೈತ, ಮೃತ ಚಿರತೆಯನ್ನು ಜಮೀನಿನಲ್ಲಿ ಗುಂಡಿ ತೆಗೆದು ಮುಚ್ಚಿದ್ದಾನೆ, ಭಾನುವಾರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದು, ಪೊಲೀಸರು ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.