ಗುರುವಾರ , ಮೇ 26, 2022
28 °C

ಕನಕಪುರ: ಬೋನ್‌ಗೆ ಬಿದ್ದ ಚಿರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಗ್ರಾಮಕ್ಕೆ ನುಗ್ಗಿ ಕುರಿ, ಕೋಳಿ, ಮೇಕೆಯನ್ನು ಹೊತ್ತೊಯ್ಯುತ್ತಿದ್ದ ಚಿರತೆಯನ್ನು ಸಾತನೂರು ಹೋಬಳಿ ವೆಂಕಟರಾಯನದೊಡ್ಡಿ ಸಮೀಪ ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ.

ಸುಮಾರು 6 ವರ್ಷದ ಗಂಡು ಚಿರತೆ ಸೆರೆಯಾಗಿದೆ. ಒಂದು ತಿಂಗಳಿನಿಂದ ವೆಂಕಟರಾಯನದೊಡ್ಡಿ, ಕುರುಬಳ್ಳಿ ಮತ್ತು ಬುಕ್ಕಸಾಗರ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಸಾಕು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿತ್ತು. 

ಸಾರ್ವಜನಿಕರ ಒತ್ತಡಕ್ಕೆ ಮಣಿದ ಅರಣ್ಯ ಅಧಿಕಾರಿಗಳು ಬುಕ್ಕಸಾಗರ ಮತ್ತು ವೆಂಕಟರಾಯನದೊಡ್ಡಿ ಮಧ್ಯದಲ್ಲಿನ ಕೋಳಿ ಫಾರಂ ಬಳಿ ಮೂರು ದಿನಗಳ ಹಿಂದೆ ಚಿರತೆಯನ್ನು ಸೆರೆಹಿಡಿಯಲು ಬೋನ್‌ ಇಟ್ಟಿದ್ದರು.

ಸೋಮವಾರ ಬೆಳಿಗ್ಗೆ ಬೋನಿನಲ್ಲಿದ್ದ ಪ್ರಾಣಿಯನ್ನು ತಿನ್ನಲು ಬಂದ ಚಿರತೆ ಬೋನಿನಲ್ಲಿ ಸೆರೆಯಾಗಿತ್ತು. ಅರಣ್ಯ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುತ್ತತ್ತಿ ವಲಯ ಅರಣ್ಯದಲ್ಲಿನ ಹೈರಾ ಅರಣ್ಯಕ್ಕೆ ಸಂಜೆ ವೇಳೆಗೆ ಬಿಟ್ಟಿರುವುದಾಗಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು