ಮಾಗಡಿ: ಪಟ್ಟಣದ ಪುರಸಭೆ ಕಾರ್ಯಾಲಯದ ಮುಂಭಾಗದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಸಮೀಪ ಪೌರಕಾಮಿರ್ಕರಿಗೆ ವಿಶ್ರಾಂತಿ ಗೃಹ ಹಾಗೂ ಶೌಚಗೃಹ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿದೆ.

ಅಂಬೇಡ್ಕರ್ ಪ್ರತಿಮೆ ಸಮೀಪ ಶೌಚಾಲಯ ನಿರ್ಮಿಸಿದರೆ, ಅವರಿಗೆ ಅವಮಾನ ಮಾಡಿದಂತೆ, ಹೀಗಾಗಿ ಕಾಮಗಾರಿಯಯನ್ನು ಸ್ಥಗಿತಗೊಳಿಸಿ, ಯೋಜನೆಯನ್ನು ಬೇರೆಡೆ ಸ್ಥಳಾಂತರಗೊಳಿಸಬೇಕೆಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ, ದಲಿತ ಸಂಘರ್ಷ ಸಮಿತಿ, ನಿಸರ್ಗ ಟ್ರಸ್ಟ್ ಪುರಸಭೆಗೆ ಮನವಿ ಪತ್ರ ಸಲ್ಲಿಉವ ಮೂಲಕ ಒತ್ತಾಯಿಸಿದೆ.

ಪೌರಕಾರ್ಮಿಕರಿಗೆ ಬೇರೆಡೆಯಿರುವ ಪುರಸಭೆ ಜಾಗದಲ್ಲಿ ಸುಸಜ್ಜಿತ ವಿಶ್ರಾಂತಿ ಗೃಹ ಹಾಗೂ ಶೌಚಾಲಯ ನಿರ್ಮಿಸಿಕೊಡಲಿ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಈ ಪ್ರದೇಶದಲ್ಲಿ ಬೇಡ. ಶೌಚಾಲಯ ನಿರ್ಮಾಣಕ್ಕೆ ಯೋಜನೆ ರೂಪಿಸಿ, ನಕ್ಷೆ ಅನುಮೋದಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು. ಕಾಮಗಾರಿ ಮುಂದುವರಿಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.

ದೇಶಕ್ಕೆ ಸಂವಿಧಾನ ನೀಡಿದ ಮಹಾಪುರುಷನ ಪ್ರತಿಮೆಯ ಕೇವಲ 22 ಅಡಿ ಅಂತರದಲ್ಲಿ ಶೌಚಗೃಹ ನಿರ್ಮಿಸುವುದ ಸರಿಯಲ್ಲ. ಇದರಿಂದ ಈ ಜಾಗದಲ್ಲಿ ಗಲೀಜು ಉಂಟಾಗಲಿದ್ದು, ದುರ್ವಾಸನೆ ಬರಲಿದೆ. ಪ್ರತಿಮೆ ಬಳಿಗೆ ಮೂಗು ಮುಚ್ಚಿಕೊಂಡು ಬರಬೇಕಾಗುತ್ತದೆ. ಈ ಸಮಸ್ಯೆಯನ್ನು ಅರ್ಥಮಾಡಿಸಿದರೂ ಪುರಸಭೆಯಿಂದ ಕಾಮಗಾರಿ ಮುಂದುವರೆಸಿರುವುದು ಸರಿಯಲ್ಲ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ಆಕ್ಷೇಪಿಸಿದರು.

ಇಷ್ಟೇಲ್ಲ ನಡೆಯುತ್ತಿದ್ದರೂ ಶಾಸಕರು ಮೌನವಹಿಸಿರುವುದು ಸರಿಯಲ್ಲ. ಅಧಿಕಾರಿಗಳು ಪರಸ್ಪರ ಬೆರಳು ತೋರುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.

ಮಹಾತ್ಮರ ಪ್ರತಿಮೆ ಪಕ್ಕದಲ್ಲಿ ಅವರ ಸಾಧನೆ ಬಿಂಬಿಸುವ ಗ್ರಂಥಾಲಯ, ಸಸಿಗಳನ್ನು ನೆಟ್ಟು ಉದ್ಯಾನವನ ಮಾಡುವುದು ಅಥವಾ ವಿಶ್ರಾಂತಿ ಆಸನ ಅಳವಡಿಸುವುದು ಸೂಕ್ತ. ಅದನ್ನು ಬಿಟ್ಟು ಪ್ರತಿಮೆಯ ಪಕ್ಕದಲ್ಲೇ ಶೌಚಾಲಯ ನಿರ್ಮಿಸುತ್ತಿರುವುದು ಸರಿಯಲ್ಲ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದೂರಾಯನಹಳ್ಳಿ ಕೃಷ್ಣ ಹೇಳಿದರು.

ಕೌನ್ಸಿಲ್ನಲ್ಲಿ ನಿರ್ಣಯ ಕೈಗೊಳ್ಳದೆ ತರಾತುರಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಗುಂಡಿ ತೆಗೆಯುತ್ತಿರುವುದು ಖಂಡನೀಯ ಎಂದು ತಾ.ಪಂ.ಮಾಜಿ ಸದಸ್ಯ ಹಾಗೂ ದಲಿತ ಮುಖಂಡ ಸಿ.ಜಯರಾಂ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ವಾಯು ಸೇನೆಯ ನಿವೃತ್ತ ಅಧಿಕಾರಿ ಶಿವಲಿಂಗಯ್ಯ, ಗೋಪಿ, ರೈತ ಮುಖಂಡ ಶಿವಲಿಂಗಯ್ಯ, ಎನ್ಎಸ್ ಆನಂದ್, ಸಯ್ಯದ್, ದೊಡ್ಡಿ ಗೋಪಿ ರಮೇಶ್, ಹೇಮಂತ್, ರಾಮಣ್ಣ, ಮೋಹನ್, ಜೀವಿಕ ಗಂಗಹನುಮಯ್ಯ ಉಪಸ್ಥಿತರಿದ್ದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-14-1011885106

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.