ಮಾಗಡಿ: ತಾಲ್ಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಕೃಷಿ ಜಮೀನುಗಳಲ್ಲಿಯ ಪಂಪ್ಸೆಟ್ ಹಾಗೂ ಬೋರ್ವೆಲ್ ಕೇಬಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗ್ರಾಮಸ್ಥರು ಮಂಗಳವಾರ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ತಾಲ್ಲೂಕಿನ ಬೆಳಗವಾಡಿ ಗ್ರಾಮದ ತಿಮ್ಮೇಗೌಡ(35) ಮತ್ತು ಗಂಗಯ್ಯ(43) ಬಂಧಿತರು.

ಇಬ್ಬರೂ ಕುಣಿಗಲ್ ತಾಲ್ಲೂಕಿನ ಚೌಡನಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಟಯ್ಯನಪಾಳ್ಯದ ಬಳಿ ಮಂಗಳವಾರ ಬೆಳಗ್ಗೆ ಬೋರ್ವೆಲ್ ಕೇಬಲ್ ಕಳ್ಳತನ ಮಾಡಿ ಬೈಕ್ನಲ್ಲಿ ಹೊರಟಿದ್ದರು.

ಬೈಕ್ನಲ್ಲಿ ಪೆಟ್ರೋಲ್ ಖಾಲಿಯಾದ ಕಾರಣ ರಸ್ತೆ ಪಕ್ಕದ ಬೇಲಿಗೆ ಕಳ್ಳತನ ಮಾಡಿದ ಕೇಬಲ್ ಹಾಕುವ ವೇಳೆ ಅನುಮಾನಗೊಂಡ ಗ್ರಾಮಸ್ಥರು ತಡೆದು ತಪಾಸಣೆ ನಡೆಸಿದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ಸಿಕ್ಕಿಬಿದ್ದ ಕಳ್ಳರನ್ನು ಮರಕ್ಕೆ ಕಟ್ಟಿ ಹಾಕಿ ಸರಿಯಾಗಿ ಥಳಿಸಿದ್ದಾರೆ. ನಂತರ ವಿಷಯವನ್ನು ಪೊಲೀಸರಿಗೆ ತಿಳಿಸಿದರು.

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಹುಲಿಯೂರುದುರ್ಗ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಳ್ಳತನ ನಡೆದ ಸ್ಥಳ ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವುದರಿಂದ ಆರೋಪಿಗಳನ್ನು ಮಾಗಡಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಮಾಗಡಿ ಪೊಲೀಸರು ಆರೋಪಿಗಳನ್ನು ಕಳ್ಳತನ ನಡೆದ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿ, ತನಿಖೆ ಕೈಗೊಂಡಿದ್ದಾರೆ.

ಮದ್ಯ ಕಳ್ಳತನ

ಮದ್ಯ ವ್ಯಸನಿಗಳಾದ ಇಬ್ಬರೂ ಆರೋಪಿಗಳು ಕುಡಿಯುವ ಚಟಕ್ಕೆ ಹಣ ಸಿಗದ ಕಾರಣ ಕೇಬಲ್ ಕಳ್ಳತನಕ್ಕೆ ಇಳಿದಿದ್ದಾರೆ. ಗಂಗಯ್ಯ ಎಂಬಾತನಿಗೆ ಸ್ವಂತ ಜಮೀನು ಇದ್ದರೂ ಕುಡಿಯುವ ಚಟಕ್ಕಾಗಿ ಹಣ ಹೊಂದಿಸಲು ಈ ಕೃತ್ಯಕ್ಕೆ ಇಳಿದಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.