ಮಾಗಡಿ: ಪಟ್ಟಣದ ತಟವಾಳು ಮುಖ್ಯರಸ್ತೆಯಲ್ಲಿರುವ ಸ್ಮಶಾನ ಈಗ ತ್ಯಾಜ್ಯ ಸುರಿಯುವ ಕೇಂದ್ರವಾಗಿ ಮಾರ್ಪಟ್ಟಿದೆ.

ರಸ್ತೆ ಕಾಮಗಾರಿ ವೇಳೆ ಹೊರಬಂದ ಮಣ್ಣು, ಕಲ್ಲು ಹಾಗೂ ಚರಂಡಿಯ ಹೂಳನ್ನು ಸ್ಮಶಾನ ಆವರಣಕ್ಕೆ ಸುರಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣದ ಕೆಲ ವಾರ್ಡ್ಗಳಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಸಂದರ್ಭದಲ್ಲಿ ಸಂಗ್ರಹವಾದ ಕಸ ಹಾಗೂ ಸಿಮೆಂಟ್ ಮಿಶ್ರಿತ ಕಟ್ಟಡ ತ್ಯಾಜ್ಯವನ್ನು ನಿಯಮಾನುಸಾರ ಗುತ್ತಿಗೆದಾರರು ವಿಲೇವಾರಿ ಮಾಡುವ ಬದಲು, ನೇರವಾಗಿ ಸ್ಮಶಾನ ಆವರಣಕ್ಕೆ ತಂದು ಸುರಿದಿದ್ದಾರೆ. ಇದರಿಂದಾಗಿ ಅಂತ್ಯಸಂಸ್ಕಾರಕ್ಕೆ ಬರುವ ಜನರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಪುರಸಭೆ ಮಾಜಿ ಸದಸ್ಯ ಡೇರಿ ಶಿವಕುಮಾರ್ ಪ್ರತಿಕ್ರಿಯಿಸಿ, ಸ್ಮಶಾನ ಮುಂಭಾಗ ಮತ್ತು ಚಿತಾಗಾರದ ಪಕ್ಕದಲ್ಲಿ ರಸ್ತೆ ಮಣ್ಣು ಹಾಗೂ ಚರಂಡಿ ತ್ಯಾಜ್ಯ ತಂದು ಹಾಕುತ್ತಿರುವುದು ಸರಿಯಲ್ಲ. ಅಂದಾಜು ಐದು ಎಕರೆ ವಿಸ್ತೀರ್ಣದ ಈ ಜಾಗವನ್ನು ಪುರಸಭೆಯೇ ನಿರ್ವಹಣೆ ಮಾಡುತ್ತಿದ್ದರೂ, ಅಧಿಕಾರಿಗಳು ಮತ್ತು ಎಂಜಿನಿಯರ್ಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಈಗಾಗಲೇ ಸಂಬಂಧಪಟ್ಟ ಎಂಜಿನಿಯರ್ ಹಾಗೂ ಅಧಿಕಾರಿಗಳಿಗೆ ಫೋನ್ ಮಾಡಿ ದೂರು ನೀಡಿದ್ದೇನೆ. ಕೂಡಲೇ ತ್ಯಾಜ್ಯ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಾಗಡಿ ಯೋಜನಾ ಪ್ರಾಧಿಕಾರದಿಂದ ವಿದ್ಯುತ್ ಚಿತಾಗಾರ ನಿರ್ಮಿಸಲಾಗಿದೆ. ಸ್ಮಶಾನದಲ್ಲಿ ಈಗಲೂ ಹಲವು ಸಮುದಾಯದವರು ಹೂಳುವುದಿಂದ ಸ್ಮಶಾನದಲ್ಲಿ ಬೇಡವಾದ ಮಣ್ಣು ಹಾಕಿ ತೊಂದರೆ ನೀಡುವುದು ಎಷ್ಟರ ಮಟ್ಟಿಗೆ ಸರಿ? ಕೂಡಲೇ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಯಾವ ಗುತ್ತಿದಾರರು ಈ ರೀತಿ ಕೆಲಸ ಮಾಡಿದ್ದಾರೆ ಎಂದು ಗುರುತಿಸಿ ಅವರಿಂದಲೇ ಮಣ್ಣು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.ಮಾಗಡಿ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎನ್.ಮಂಜುನಾಥ್ ಪ್ರತಿಕ್ರಿಯಿಸಿ, ‘ನಾನು ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲಾಗಿದೆ. ಪುರಸಭೆಯವರು ಸ್ಮಶಾನವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಬೇಡವಾದ ಮಣ್ಣುಗಳನ್ನು ಎಲ್ಲೆಂದರಲ್ಲಿ ಸುರಿದು ಸ್ಮಶಾನಕ್ಕೆ ಹೋಗದ ರೀತಿ ಮಾಡಿರುವುದು ಸರಿಯಲ್ಲ. ಕೂಡಲೇ ಸ್ಮಶಾನದ ಮಣ್ಣು ತೆರವುಗೊಳಿಸಿ. ಇಲ್ಲವಾದರೆ ಪುರಸಭೆ ವಿರುದ್ಧ ಪ್ರತಿಭಟಿಸಲಾಗುವುದು’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-14-1856208411

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.