ಮಾಗಡಿ: ಬಿಡಿಸಿಸಿ ಬ್ಯಾಂಕ್ ಹಗರಣ ಕುರಿತು ಚಕ್ರಬಾವಿಯಲ್ಲಿ ಶನಿವಾರ ಕರೆಯಲಾಗಿದ್ದ ಬಹಿರಂಗ ಸಭೆ ಕೊನೆಯ ಕ್ಷಣದಲ್ಲಿ ರದ್ದಾಯಿತು.

ಬಹಿರಂಗ ಸಭೆ ನಡೆಸದಂತೆ ತಹಸಿಲ್ದಾರ್ ನಿಷೇಧಾಜ್ಞೆ ಜಾರಿ ಮಾಡಿದ ಕಾರಣ ಪೊಲೀಸರು ಸಭೆ ನಡೆಸಲು ಅವಕಾಶ ನೀಡಲಿಲ್ಲ. ಚಕ್ರಬಾವಿಗೆ ಬಂದ ಹಾಲಿ ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತು ಮಾಜಿ ಶಾಸಕ ಎ.ಮಂಜುನಾಥ್ ಅವರನ್ನು ಪೊಲೀಸರು ಮಾರ್ಗಮಧ್ಯದಲ್ಲೇ ತಡೆದು ವಾಪಸ್ ಕಳಿಸಿದರು.

ಬಿಡಿಸಿಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನನಲ್ಲಿ ಭಾರಿ ಕುತೂಹಲ ಕೆರಳಿಸಿರುವ ಮಾಜಿ ಮತ್ತು ಹಾಲಿ ಶಾಸಕರ ನಡುವಿನ ಸಂಘರ್ಷ ಶನಿವಾರ ಯಾವುದೇ ಹೊಸ ತಿರುವು ಪಡೆಯಲಿಲ್ಲ.

ಶಾಸಕ ಬಾಲಕೃಷ್ಣ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್ ವಿರುದ್ಧ ಮಾಜಿ ಶಾಸಕ ಎ.ಮಂಜುನಾಥ್ ಮಾಡಿದ ಆರೋಪ ಕುರಿತು ಬಹಿರಂಗವಾಗಿ ಚರ್ಚಿಸಲು ಚಕ್ರಬಾವಿಯಲ್ಲಿ ಬಹಿರಂಗ ಸಭೆ ಕರೆಯಲಾಗಿತ್ತು. ಚಕ್ರಬಾವಿ ವಿಎಸ್ಎಸ್ಎನ್ ಕಚೇರಿಯಲ್ಲಿ ಬಹಿರಂಗ ಸಭೆ ನಡೆಯಲು ಸ್ಥಳ ಮತ್ತು ಸಮಯ ನಿಗದಿ ಮಾಡಲಾಗಿತ್ತು.

ಶುಕ್ರವಾರ ರಾತ್ರಿ ತಹಶೀಲ್ದಾರ್ ಶರತ್ ಕುಮಾರ್ 144 ಸೆಕ್ಷನ್ ಅಡಿ ಸಭೆಯ ನಡೆಯಬೇಕಾಗಿದ್ದ ಸ್ಥಳದ 200 ಮೀಟರ್ ಸುತ್ತಲೂ ನಿಷೇಧಾಜ್ಞೆ ಜಾರಿ ಮಾಡಿದರು.

ಸಭೆ ಮಾಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಇಲಾಖೆ ಮಾಜಿ ಶಾಸಕ ಎ. ಮಂಜುನಾಥ್ ಅವರಿಗೆ ನೋಟಿಸ್ ನೀಡಿದ್ದರು.

‘ಚಕ್ರಬಾವಿ ಸಭೆಗೆ ನಾನು ಮತ್ತು ನನ್ನ ಸಹೋದರ ಬರುತ್ತವೆ. ನಿಷೇಧಾಜ್ಞೆ ಕಾರಣ ಯಾವ ಕಾರ್ಯಕರ್ತರೂ ಅಲ್ಲಿಗೆ ಬರುವುದು ಬೇಡ. ಜಾಲತಾಣಗಳಲ್ಲಿ ಸಭೆಯನ್ನು ವೀಕ್ಷಿಸಿ’ ಎಂದು ಶಾಸಕ ಬಾಲಕೃಷ್ಣ ಶುಕ್ರವಾರ ರಾತ್ರಿ ಜಾಲತಾಣಗಳಲ್ಲಿ ಸಂದೇಶ ರವಾನಿಸಿದ್ದರು.

‘ನಾನು ಕೂಡ ಶನಿವಾರ ಬೆಳಗ್ಗೆ 10.30ಕ್ಕೆ ನನ್ನ ಕಚೇರಿಯಿಂದ ಒಬ್ಬನೇ ಚಕ್ರಬಾವಿಗೆ ಬರುತ್ತೇನೆ’ ಎಂದು ಮಾಜಿ ಶಾಸಕ ಮಂಜುನಾಥ್ ಕೂಡ ರಾತ್ರಿಯೇ ಮಾಹಿತಿ ನೀಡಿದ್ದರು.

ಮಂಜುನಾಥ್ ಶನಿವಾರ ಬೆಳಗ್ಗೆ ಕಲ್ಯಾಗೇಟ್ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾರ್ಯಕರ್ತರನ್ನು ಭೇಟಿಯಾಗಲು ಜೆಡಿಎಸ್ ಕಚೇರಿಗೆ ಬಂದರು. ಆಗ ಪೊಲೀಸರು, ‘ನಿಷೇಧಾಜ್ಞೆ ಇದೆ ಯಾವುದೇ ಕಾರಣಕ್ಕೂ ಚಕ್ರಬಾವಿ ಬಹಿರಂಗ ಸಭೆಗೆ ಹೋಗಲು ಅವಕಾಶ ಕೊಡುವುದಿಲ್ಲ’ ಎಂದು ತಿಳಿಸಿದರು.

ಅವರನ್ನು ಚಕ್ರಬಾವಿಗೆ ಹೋಗದಂತೆ ತಡೆಯಲು ಜೆಡಿಎಸ್ ಕಚೇರಿ ಗೇಟ್ ಬಳಿ ಪೊಲೀಸ್ ವಾಹನ ಹಾಗೂ ವ್ಯಾನ್ ಅಡ್ಡ ನಿಲ್ಲಿಸಿದರು. ‘ಶಾಸಕ ಬಾಲಕೃಷ್ಣ ಚಕ್ರಬಾವಿಗೆ ಹೋಗುತ್ತಿದ್ದಾರೆ. ನಾನು ಹೋಗದಿದ್ದರೆ ಹೇಡಿಯಾಗುತ್ತೇನೆ. ನನಗೆ ಹೋಗಲು ಬಿಡಿ’ ಎಂದು ಪೊಲೀಸರಿಗೆ ಅವರು ಮನವಿ ಮಾಡಿದರು. ಪೊಲೀಸರು ಈ ಮನವಿಯನ್ನು ಪುರಸ್ಕರಿಸಲಿಲ್ಲ.

ಇದರಿಂದ ಪೊಲೀಸರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಜೆಡಿಎಸ್ ಕಾರ್ಯಕರ್ತರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.

‘ಚಕ್ರಬಾವಿಗೆ ಹೊರಟಿದ್ದ ಬಾಲಕೃಷ್ಣ ಅವರನ್ನು ಹಲಸಬೆಲೆ ಗೇಟ್ ಬಳಿ ತಡೆದಿದ್ದೇವೆ. ಬಹಿರಂಗ ಸಭೆಗೆ ಹೋಗಲು ಅವರಿಗೂ ಅವಕಾಶ ಕೊಡುವುದಿಲ್ಲ. ತಾವು ಹೋಗಬೇಡಿ’ ಎಂದು ಡಿವೈಎಸ್ಪಿ ರವಿ ಮನವಿ ಮಾಡಿದ ನಂತರ ಚಕ್ರಬಾವಿಗೆ ಹೋಗುವ ನಿರ್ಧಾರದಿಂದ ಹಿಂದೆ ಸರಿದರು.

ಚಕ್ರಬಾವಿಯಲ್ಲಿ ನಿಷೇದಾಜ್ಞೆ ಹಿನ್ನೆಲೆಯಲ್ಲಿ ಹಲಸಬೆಲೆ ಗೇಟ್ನಲ್ಲೇ ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ಅವರ ಸಹೋದರ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ್ ಅವರನ್ನು ಪೊಲೀಸರು ತಡೆದರು. ಚಕ್ರಭಾವಿ ಗ್ರಾಮದಲ್ಲಿ ನಿಷೇದಾಜ್ಞೆ ಇದೆ ಯಾವುದೇ ಬಹಿರಂಗ ಚರ್ಚೆ ಮಾಡುವಂತಿಲ್ಲ ಎಂದು ತಾಕೀತು ಮಾಡಿದರು.

ನಮ್ಮ ಬಗ್ಗೆ ಅಪಪ್ರಚಾರ ಮಾಡ್ತಿರೋ ಮಾಜಿ ಶಾಸಕರ ವಿರುದ್ಧ ಕ್ರಮ ಆಗಬೇಕು. ಪ್ರತಿನಿತ್ಯ ಆರೋಪ ಮಾಡಿ, ವೈಯಕ್ತಿಕ ನಿಂದನೆ ಮಾಡುವುದು ನಿಲ್ಲಬೇಕು. ಈ ಬಗ್ಗೆ ಪೊಲೀಸರ ಸೂಕ್ತ ಕ್ರಮಕೈಗೊಳ್ಳಬೇಕು ಇಲ್ಲ ಬಹಿರಂಗ ಚರ್ಚೆಗೆ ಅವಕಾಶ ಕೊಡಿ’ ಎಂದ ಬಾಲಕೃಷ್ಣ ಅವರು ಪೊಲೀಸರನ್ನು ಕೇಳಿದರು.

ಮಾಜಿ ಶಾಸಕರಿಗೆ ನೋಟೀಸ್ ನೀಡುವುದಾಗಿ ಡಿವೈಎಸ್ಪಿ ರವಿ ಭರವಸೆ ಬಳಿಕ ಬಾಲಕೃಷ್ಣ ಹಾಗೂ ಸಹೋದರ ಅಶೋಕ್ ಮಾಗಡಿಗೆ ಮರಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-14-1765064941

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.