ಮಾಗಡಿ: ಜಾನಪದ ಕಲಾವಿದೆ ಮಾರಕ್ಕ ಸಣ್ಣಚಿತ್ತಪ್ಪ ಅವರ 100ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಮುಖರು ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಜುಂಜಪ್ಪನ ಕಾವ್ಯ, ಕಾವಲ್ಲಮ್ಮನ ಕಾವ್ಯ, ಸಿದ್ದನಕುಂಟೆ ಸಿದ್ದಯ್ಯ ಹಾಗೂ ಹೆಂಜಾರಿ ಸಿದ್ದಯ್ಯನ ಕಥನ ಕಾವ್ಯದ ಸೊಲ್ಲುಗಳನ್ನು ಹಾಡಿ ಗಮನ ಸೆಳೆದರು.

ತಾಲ್ಲೂಕು ಫೋಟೊಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಅಧ್ಯಕ್ಷ ನಾಗರಾಜು, ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ತಾಲ್ಲೂಕು ಶಾಖೆ ಅಧ್ಯಕ್ಷ ಎಂ.ಆರ್.ಮಂಜುನಾಥ್ ನೇತೃತ್ವದಲ್ಲಿ ಮಾರಕ್ಕ ಮನೆಗೆ ತೆರಳಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಮಾರಕ್ಕ, ‘ಇತ್ತೀಚಿನ ದಿನಗಳಲ್ಲಿ ಮೂಲ ಜಾನಪದ ಕಲಾವಿದರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಸಾಮಾಜಿಕ ಜಾಲ ತಾಣಗಳಮೂಲಕ ಅಲ್ಪಸ್ವಲ್ಪ ತಿಳಿದವರು ಪ್ರಚಾರ ಪ್ರಿಯರಾಗಲು ಆತುರಪಡುತ್ತಿದ್ದಾರೆ. ಜನಪ್ರಿಯರಾಗಲು ಮೂಲ ಜಾನಪದ ಪದಗಳು, ಕಲೆ ಹಾಗೂ ಕಥನ ಕಾವ್ಯ ಬಳಸುತ್ತಿದ್ದಾರೆ. ಕಲೆ ಉಳಿಸುವ ಬದಲು ಕಲೆಯ ಹಾದಿ ತಪ್ಪಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಜನಪದ ಕಲೆ ಮತ್ತು ಕಥನ ಕಾವ್ಯಗಳು ಗತಕಾಲದ ವೈಭವವನ್ನು ಮರಳಿ ಪಡೆಯಬೇಕು. ಇಂದಿನ ಮಕ್ಕಳಿಗೆ ಕಲಿಸಿಕೊಡುವ ಮೂಲಕ ಜನಪದ ರಸಬಳ್ಳಿಗೆ ನೀರೆರೆದು ಪೋಷಿಸುವ ಕೆಲಸವಾಗಬೇಕು ಎಂದು ಹೇಳಿದರು.

ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಉಪಾಧ್ಯಕ್ಷರಾದ ಲೋಕೇಶ್, ಅಂದಾನಿ, ಪ್ರಧಾನ ಕಾರ್ಯದರ್ಶಿ ಜಿ.ವೆಂಕಟೇಶ್, ಕಾರ್ಯದರ್ಶಿ ತೇಜೇಶ್, ಕಲಾವಿದರಾದ ಚಿತ್ತಮ್ಮ ಮಾರಣ್ಣ, ರೇಖಾ ಗೋಪಾಲಕೃಷ್ಣ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-14-301437511

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.