ಮಾಗಡಿ: ತಾಲ್ಲೂಕಿನ ಚಕ್ರಬಾವಿ ವಿಎಸ್ಎಸ್ಎನ್ ಸಹಕಾರಿ ಸಂಘದಲ್ಲಿ ಏಪ್ರಿಲ್ 25ರಂದು ನಿಗದಿಯಾಗಿರುವ ಬಹಿರಂಗ ಚರ್ಚೆಗೆ ಮೊದಲು ಪ್ರಸ್ತುತ ಶಾಸಕರ ವಿರುದ್ಧ ತಾವು ಮಾಡಿರುವ ಆರೋಪಗಳ ದಾಖಲಾತಿ ಪರಿಶೀಲಿಸಬೇಕು. ನಂತರ ಚರ್ಚೆ ನಡೆಸೋಣ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಮಾಡಿರುವ ₹600ಕೋಟಿ ಹಗರಣ, ಕುದೂರು ಬಿಡಿಸಿಸಿ ಬ್ಯಾಂಕ್ನಲ್ಲಿ ನಕಲಿ ಚಿನ್ನ, ತಾವರೆಕೆರೆಯಲ್ಲಿ ಸುಳ್ಳು ದಾಖಲಾತಿ ಮಾಡಿಸಿಕೊಂಡು ಶಾಸಕರ ಪತ್ನಿ ಹೆಸರಿನಲ್ಲಿ ಜಮೀನು ನೋಂದಣಿ ಮಾಡಿಸಿಕೊಂಡಿರುವುದು ಸೇರಿದಂತೆ ಎಲ್ಲ ಆರೋಪಗಳಿಗೆ ತಾವು ಬದ್ಧರಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

‘ಶಾಸಕರು ಮಾಧ್ಯಮಗಳ ಜೊತೆ ಬಹಿರಂಗ ಚರ್ಚೆಗೆ ತಮ್ಮ ಬಳಿ ದಾಖಲೆ ಇಲ್ಲ. ಮಾಜಿ ಶಾಸಕರೇ ದಾಖಲೆ ತರಲಿ ಎಂದು ಹೇಳಿಕೆ ನೀಡಿದ್ದಾರೆ. ಈ ಎಲ್ಲ ಆರೋಪಗಳ ದಾಖಲಾತಿಯನ್ನು ಮಾಧ್ಯಮಗಳ ಮುಖಾಂತರ ಅಥವಾ ರಿಜಿಸ್ಟರ್ ಪೋಸ್ಟ್ ಮುಖಾಂತರ ಕಳುಹಿಸಿಕೊಡುತ್ತೇನೆ. ಶಾಸಕರು ಅದನ್ನು ಪರಿಶೀಲಿಸಿ ಆರೋಪ ಸರಿ ಇಲ್ಲ ಎಂದು ತಿಳಿಸಲಿ. ನಂತರ ಬಹಿರಂಗ ಸಭೆಗೆ ನಾನೇ ಬರುತ್ತೇನೆ’ ಎಂದು ಸವಾಲು ಹಾಕಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನಡೆಸುವ ಸಭೆಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ‘ಶಾಸಕರಿಗೆ ನಾನು ಸವಾಲು ಹಾಕಿದ್ದೇನೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಅಲ್ಲ. ನಾನು ಬಾಲಕೃಷ್ಣ ಅವರಿಗೆ ಮಾತ್ರ ಉತ್ತರ ಕೊಡುತ್ತೇನೆ. ಚಕ್ರಬಾವಿ ಬದಲಿಗೆ ಮಾಗಡಿ ತಾಲ್ಲೂಕು ಕಚೇರಿ ಆವರಣದಲ್ಲಿ ಶಾಸಕರೇ ಬಹಿರಂಗ ಸಭೆ ಕರೆಯಲಿ. ನಾನು ಅಲ್ಲಿಗೆ ಬರಲು ಸಿದ್ಧನಿದ್ದೇನೆ’ ಎಂದರು.

ತಾಲ್ಲೂಕಿನ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ತಮ್ಮ ಬಳಿ ದಾಖಲೆಗಳಿವೆ. ಈ ಬಗ್ಗೆ ಈಗಾಗಲೇ ಪೋಸ್ಟ್ ಮೂಲಕ ಶಾಸಕರಿಗೆ ದಾಖಲೆ ರವಾನಿಸಲಾಗಿದೆ. ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ, ಲೋಕಾಯುಕ್ತ ತನಿಖೆ ಹಾಗೂ ಹೌಸ್ ಕಮಿಟಿ ರಚನೆಯಾಗಿರುವ ಬಗ್ಗೆ ಉಲ್ಲೇಖಿಸಿದರು. ಸಿದ್ದರಾಮಯ್ಯ ಅವರ ಸರ್ಕಾರದಲ್ಲೇ ಈ ಬಗ್ಗೆ ವರದಿಗಳಾಗಿವೆ. ಸತ್ಯ ಏನೆಂಬುದು ಜನರಿಗೆ ತಿಳಿಯಲಿ ಎಂದರು.

‘ರಾಜಕೀಯ ಕರ್ಮಭೂಮಿಯಾಗಿರುವ ಮಾಗಡಿ ವಿಧಾನಸಭೆ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಈಗಾಗಲೇ ನಮ್ಮ ವಿರೋಧಿಗಳು ಬಿಡದಿಯಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ ಮತ್ತು ಮಾಗಡಿಯಲ್ಲಿಯೂ ಸಕ್ರಿಯರಾಗುತ್ತಿದ್ದಾರೆ. ಅವರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ನಾನು ಮಾಗಡಿಯಲ್ಲೇ ಸ್ಪರ್ಧೆ ಮಾಡುತ್ತೇನೆ. ಸೋಲು-ಗೆಲವು ಜನರೇ ತೀರ್ಮಾನಿಸುತ್ತಾರೆ’ ಎಂದು ಉತ್ತರಿಸಿದರು.

ನೆಲಮಂಗಲ ಶಾಸಕ ಶ್ರೀನಿವಾಸ್ ಅವರು ಅತುರವಾಗಿ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸಿದ್ದಾರೆ. ಈಗ ಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದೆ ಎಂದರು.

ಈ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರುಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-14-757860710

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.