ಮಾಗಡಿ: ತಾಲ್ಲೂಕಿನ ಜನಸಾಮಾನ್ಯರ ಆಶಾಕಿರಣವಾಗಿರುವ ಮಾಗಡಿ ಸರ್ಕಾರಿ ಆಸ್ಪತ್ರೆಯು ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಸಾಕ್ಷಿಯಾಗಿದೆ. ಸುಮಾರು ₹3.72 ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆಯನ್ನು ನವೀಕರಣಗೊಳಿಸಲಾಗಿದೆ. ರೋಗಿಗಳಿಗೆ ಉತ್ತಮ ಪರಿಸರ ಕಲ್ಪಿಸುವ ಪ್ರಯತ್ನ ಮಾಡಲಾಗಿದೆ. ನವೀಕೃತ ಕಟ್ಟಡ ಮತ್ತು ಸುಧಾರಿತ ವ್ಯವಸ್ಥೆ ಹಿಂದೆ ಪಾಳುಬಿದ್ದ ಬಂಗಲೆಯಂತಿದ್ದ ಆಸ್ಪತ್ರೆ ಈಗ ಬಣ್ಣಗಳಿಂದ ಕಂಗೊಳಿಸುತ್ತಿದೆ.

ವಾರ್ಡ್ಗಳು ಮತ್ತು ಕೊಠಡಿಗಳು ಸುಸಜ್ಜಿತವಾಗಿವೆ. ಪ್ರತಿ ವಿಭಾಗಕ್ಕೂ ನಾಮಫಲಕಗಳನ್ನು ಅಳವಡಿಸಲಾಗಿದೆ. ಇದರಿಂದ ಚಿಕಿತ್ಸೆಗೆ ಬರುವ ರೋಗಿಗಳು ಗೊಂದಲವಿಲ್ಲದೆ ತಮಗೆ ಬೇಕಾದ ವಿಭಾಗಗಳಿಗೆ ತೆರಳಲು ಅನುಕೂಲವಾಗಿದೆ. ಪ್ರತಿದಿನ ಸುಮಾರು 600ಕ್ಕೂ ಹೆಚ್ಚು ರೋಗಿಗಳು ಇಲ್ಲಿ ತಪಾಸಣೆ ಮತ್ತು ಚಿಕಿತ್ಸೆ ಪಡೆಯುತ್ತಿರುವುದು ಆಸ್ಪತ್ರೆಯ ಮೇಲಿರುವ ನಂಬಿಕೆಗೆ ಸಾಕ್ಷಿಯಾಗಿದೆ.

ಸ್ಕ್ಯಾನಿಂಗ್ ಸೌಲಭ್ಯ ಲಭ್ಯ, ಅರಿವಳಿಕೆ ವೈದ್ಯರ ಕೊರತೆ: ಕಳೆದ ಮೂರು ತಿಂಗಳಿನಿಂದ ಸ್ಕ್ಯಾನಿಂಗ್ ವೈದ್ಯರಿಲ್ಲದೆ ಗರ್ಭಿಣಿಯರು ಪಡುತ್ತಿದ್ದ ಸಂಕಟಕ್ಕೆ ಈಗ ತೆರೆ ಬಿದ್ದಿದೆ. ಹೊಸ ವೈದ್ಯರ ನೇಮಕದಿಂದ ಸ್ಕ್ಯಾನಿಂಗ್ ಸೌಲಭ್ಯ ಪುನರಾರಂಭವಾಗಿದೆ. ಆದರೆ, ಅರಿವಳಿಕೆ (ಅನಸ್ತೇಶಿಯಾ) ವೈದ್ಯರ ಕೊರತೆ ಆಸ್ಪತ್ರೆಯನ್ನು ತೀವ್ರವಾಗಿ ಕಾಡುತ್ತಿದೆ. ವಿಶೇಷವಾಗಿ ಗರ್ಭಿಣಿಯರಿಗೆ ತುರ್ತು ಸಿಜೇರಿಯನ್ ಮಾಡುವ ಸಂದರ್ಭದಲ್ಲಿ ಇವರ ಉಪಸ್ಥಿತಿ ಕಡ್ಡಾಯ. ಈ ಕೊರತೆಯಿಂದಾಗಿ ಹೆರಿಗೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ನೀರು ಮತ್ತು ಮೂಲಸೌಕರ್ಯದ ಬೇಡಿಕೆ: ಆಸ್ಪತ್ರೆಯಲ್ಲಿ ಸದ್ಯ ಒಂದೇ ಒಂದು ಬೋರ್ವೆಲ್ ಇದೆ. ಇದು ಕೆಟ್ಟುಹೋದರೆ ಪರ್ಯಾಯ ವ್ಯವಸ್ಥೆಯಿಲ್ಲ. ಆದ್ದರಿಂದ ಮಂಚನಬೆಲೆ ನೀರು ಸರಬರಾಜು ಮತ್ತು ದೊಡ್ಡ ಮಟ್ಟದ ಸಂಪ್ ವ್ಯವಸ್ಥೆ ಮಾಡಬೇಕೆಂದು ವೈದ್ಯರು ಮನವಿ ಮಾಡಿದ್ದಾರೆ. ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಬಗ್ಗೆ ಭರವಸೆ ನೀಡಿದ್ದಾರೆ. ಅಲ್ಲದೆ, ನರ್ಸ್ಗಳಿಗಾಗಿ ಆಸ್ಪತ್ರೆ ಹಿಂಭಾಗದಲ್ಲಿ 10 ಕೊಠಡಿಗಳ ವಿಶ್ರಾಂತಿ ಗೃಹ ನಿರ್ಮಿಸುವುದು ತುರ್ತುಅಗತ್ಯವಾಗಿದೆ.

ಹೆಚ್ಚುವರಿ ಎಂಬಿಬಿಎಸ್ ವೈದ್ಯರ ಅಗತ್ಯ: ಆಸ್ಪತ್ರೆ ಆಡಳಿತಾಧಿಕಾರಿ ಡಾ.ಹರ್ಷವರ್ಧನ್ ಅವರ ಪ್ರಕಾರ, ರಾತ್ರಿ ಸಮಯದಲ್ಲಿ ಕಾರ್ಯನಿರ್ವಹಿಸಲು ಹೆಚ್ಚಿನ ಎಂಬಿಬಿಎಸ್ ವೈದ್ಯರ ನೇಮಕವಾದರೆ ಹಿರಿಯ ನುರಿತ ವೈದ್ಯರು ಬೆಳಿಗ್ಗೆ ಲಭ್ಯವಿರುತ್ತಾರೆ. ಇದರಿಂದ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗಲಿದೆ. ಪ್ರಸ್ತುತ ಎರಡು ಕೊಠಡಿಗಳ ದುರಸ್ತಿ ನಡೆಯುತ್ತಿರುವುದರಿಂದ 100 ಹಾಸಿಗೆಗಳ ಸಾಮರ್ಥ್ಯ 65ಕ್ಕೆ ಇಳಿದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260321-15-472125393

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.