ಮುನ್ನೆಚ್ಚರಿಕಾ ಕ್ರಮ
ಹೆಚ್ಚು ನೀರು ಕುಡಿಯಬೇಕು ಬಾಯಾರಿಕೆ ಇಲ್ಲದಿದ್ದರೂ ನಿಯಮಿತವಾಗಿ ನೀರು, ಎಳನೀರು, ಮಜ್ಜಿಗೆ ಅಥವಾ ಹಣ್ಣಿನ ರಸ ಸೇವನೆ. ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ನೇರ ಬಿಸಿಲಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆ ಧರಿಸುವುದು. ಅತಿಯಾದ ಮಸಾಲೆ ಪದಾರ್ಥ ಹೊರತುಪಡಿಸಿ, ತಂಪಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸುವುದು. ಜ್ವರ ಅಥವಾ ತಲೆನೋವು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.