ಮಾಗಡಿ: ಕಳರಿಪಯಟ್ಟು ಎಲ್ಲ ಕಲೆಗಳಿಗೆ ತಾಯಿ ಕಲೆಯಾಗಿದ್ದು, ಮಕ್ಕಳ ಭವಿಷ್ಯದಲ್ಲಿ ಸಪ್ತ ಚಕ್ರಗಳನ್ನು ಸಮಸ್ಥಿತಿಯಲ್ಲಿಟ್ಟುಕೊಳ್ಳಲು ಇದು ಸಹಕಾರಿ. ಈ ಕಲೆಯನ್ನು ಮೈಗೂಡಿಸಿಕೊಂಡರೆ ಬದುಕಿನ ಎಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನಾದರೂ ಎದುರಿಸಲು ಮನಸ್ಸು ಸದೃಢವಾಗುತ್ತದೆ ಎಂದು ಕೇರಳಂನ ಯೋಗ ಕಳರಿ ಶಿಕ್ಷಕ ಎಸ್.ಕೆ. ರಾಜೇಶ್ ತಿಳಿಸಿದರು.

ಮಾಗಡಿ-ಬೆಂಗಳೂರು ಮುಖ್ಯರಸ್ತೆಯ ತಿಪ್ಪಗೊಂಡನಹಳ್ಳಿ ಸಮೀಪದ ವಿವೇಕ ಭಾರತಿ ಪ್ರಗತಿ ಕೇಂದ್ರದಲ್ಲಿ ಯೋಗಶ್ರೀ ಗುರುಕುಲದಿಂದ ನಡೆದ ‘ಯೋಗ ಬಿಗ್ ಬಾಸ್’ ಬೇಸಿಗೆ ಶಿಬಿರದಲ್ಲಿ ಮಾತನಾಡಿದರು.

ಕೇರಳದ ಪ್ರಸಿದ್ಧ ಸಮರ ಕಲೆಗಳಲ್ಲಿ ಒಂದಾದ ಕಳರಿ ವಿದ್ಯೆ ಮೂರು ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಇದು ದೇಹದ ಶಕ್ತಿ, ಚುರುಕುತನ, ಧೈರ್ಯ ಮತ್ತು ಆತ್ಮರಕ್ಷಣೆ ಕಲಿಸುತ್ತದೆ. ಈ ವಿದ್ಯೆಯಲ್ಲಿ ಕೇವಲ ಕೈ ಯುದ್ಧ ಮಾತ್ರವಲ್ಲದೆ ಕತ್ತಿ, ಗುರಾಣಿ, ಭಲ್ಲೆ ಮೊದಲಾದ ಆಯುಧಗಳ ಬಳಕೆ ಕಲಿಸಲಾಗುತ್ತದೆ. ಯೋಗ, ಧ್ಯಾನ ಮತ್ತು ಉಸಿರಾಟದ ಅಭ್ಯಾಸಗಳೂ ಇದರಲ್ಲಿ ಅಡಕವಾಗಿವೆ ಎಂದು ವಿವರಿಸಿದರು.

ವಿದ್ಯಾರ್ಥಿಗಳು ಮೊದಲು ದೇಹವನ್ನು ಬಲಿಷ್ಠವಾಗಿಸಲು ವಿವಿಧ ವ್ಯಾಯಾಮಗಳನ್ನು ಕರಗತ ಮಾಡಿಕೊಳ್ಳುತ್ತಾರೆ. ಆನಂತರ ಹಂತ ಹಂತವಾಗಿ ಯುದ್ಧಕಲೆಗಳನ್ನು ಕಲಿಯುತ್ತಾರೆ. ಈ ವಿದ್ಯೆ ಕೇವಲ ಹೋರಾಟಕ್ಕೆ ಸೀಮಿತವಾಗಿರದೆ ಶಿಸ್ತು, ಆತ್ಮವಿಶ್ವಾಸ ಮತ್ತು ಮನೋನಿಗ್ರಹ ಬೆಳೆಸಲು ಪೂರಕವಾಗಿದೆ ಎಂದು ಮಾಹಿತಿ ನೀಡಿದರು.

ವಿವೇಕ ಭಾರತಿ ಪ್ರಗತಿ ಕೇಂದ್ರದ ಸಂಸ್ಥಾಪಕ ವಿ. ವಿಜಯ್ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಮಕ್ಕಳ ಮುಂದಿನ ಜೀವನಕ್ಕೆ ಅಗತ್ಯವಿರುವ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಸಮಗ್ರವಾಗಿ ಕಲಿಯುತ್ತಿದ್ದಾರೆ ಎಂದು ವಿವರಿಸಿದರು.

ಯೋಗಶ್ರೀ ಗುರುಕುಲದ ಯೋಗ ಶಿಕ್ಷಕ ಮಲ್ಲಣ್ಣ, ಯೋಗ ಶಿಕ್ಷಕಿಯರಾದ ಪವಿತ್ರ, ವಾಣಿಶ್ರೀ, ಸುಜಾತ ಹಿರೇಮಠ್ ಹಾಗೂ ರೂಪೇಶ್ ಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.