ಜೇನು

ಮಾಗಡಿ: ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈಚೆಗೆ ವಿಶ್ವ ಜೇನು ದಿನಾಚರಣೆ ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.

ರೈತರು ಆಧುನಿಕ ಕೃಷಿ ತಂತ್ರಜ್ಞಾನ ಹಾಗೂ ಜೇನು ಸಾಕಾಣಿಕೆ ಉಪಕಸುಬಾಗಿ ಅಳವಡಿಸಿಕೊಳ್ಳುವ ಮೂಲಕ ತಮ್ಮ ಆದಾಯ ಹೇಗೆ ದ್ವಿಗುಣಗೊಳಿಸಿಕೊಳ್ಳಬಹುದು ಎಂಬ ಬಗ್ಗೆ ಕಾರ್ಯಕ್ರಮದಲ್ಲಿ ಸುದೀರ್ಘ ಚರ್ಚೆ ಮತ್ತು ಪ್ರಾತ್ಯಕ್ಷಿಕೆ ನಡೆಯಿತು.

ಜೇನು ಸಾಕಾಣಿಕೆ ಮತ್ತು ಮೌಲ್ಯವರ್ಧನೆಗೆ ಒತ್ತು: ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಕೇಂದ್ರದ ಮುಖ್ಯಸ್ಥರಾದ ಡಾ.ಶ್ವೇತ ಬಿ.ಎಸ್., ರೈತರು ತಮ್ಮ ದೈನಂದಿನ ಕೃಷಿ ಚಟುವಟಿಕೆ ಜೊತೆಗೆ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಕಡಿಮೆ ವೆಚ್ಚದ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೇಂದ್ರದ ಸಸ್ಯಸಂರಕ್ಷಣಾ ವಿಜ್ಞಾನಿ ಡಾ.ತಾರಿಣಿ ಕೆ.ಬಿ.ಮಾತನಾಡಿ, ವಿಶ್ವದ ಶೇ70ರಷ್ಟು ಪ್ರಮುಖ ಬೆಳೆಗಳು ಜೇನು ನೊಣಗಳ ಪರಾಗಸ್ಪರ್ಶದಿಂದಲೇ ಇಳುವರಿ ನೀಡುತ್ತವೆ ಎಂದರು.

ಜೇನು ನೊಣಗಳ ವಿವಿಧ ಪ್ರಭೇದ, ಅವುಗಳ ಜೀವನ ಚರಿತ್ರೆ ಮತ್ತು ಕುಟುಂಬ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ ಅವರು, ಜೇನು ಪೆಟ್ಟಿಗೆಗೆ ಜೇನು ಕುಟುಂಬವನ್ನು ವರ್ಗಾಯಿಸುವುದು ಹಾಗೂ ವೈಜ್ಞಾನಿಕವಾಗಿ ಜೇನುತುಪ್ಪ ತೆಗೆಯುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮನವರಿಕೆ ಮಾಡಿಕೊಟ್ಟರು.

ಗೃಹ ವಿಜ್ಞಾನಿ ಡಾ.ಅನಿತಾ ಎಸ್.ಮಾತನಾಡಿ, ಜೇನುತುಪ್ಪದ ಔಷಧೀಯ ಗುಣ ಪಟ್ಟಿ ಮಾಡುತ್ತಾ, ಜೇನುತುಪ್ಪ ಕೇವಲ ಸಿಹಿಗೆ ಪರ್ಯಾಯವಲ್ಲ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುವ ಶೀತ-ಕೆಮ್ಮಿಗೆ ನೈಸರ್ಗಿಕ ಪರಿಹಾರ ನೀಡುವ ಹಾಗೂ ಹೃದಯದ ಆರೋಗ್ಯ ಕಾಪಾಡುವ ಅದ್ಭುತ ಆಹಾರವಾಗಿದೆ. ರೈತರು ಜೇನು ಸಂಸ್ಕರಣೆ, ಬ್ರಾಂಡಿಂಗ್ ಮತ್ತು ನೇರ ಮಾರುಕಟ್ಟೆ ಪ್ರಕ್ರಿಯೆ ಕಲಿತುಕೊಳ್ಳಬೇಕು ಎಂದು ತಿಳಿಸಿದರು.

ಡಾ.ಸೌಜನ್ಯ ಎಸ್., ಆಧುನಿಕ ಜೇನುಕೃಷಿ ಪಿತಾಮಹ ಆ್ಯಂಟೋನ್ ಜಾನಾ ಅವರ ಜನ್ಮದಿನದ ಸವಿನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳು ಜೇನುತುಪ್ಪ ತೆಗೆಯುವ ಸಮಯವಾಗಿದೆ. ಇದು ಸಮೃದ್ಧಿ ಸಂಕೇತ ಎಂದರು.

ಪ್ರಗತಿಪರ ಕೃಷಿಕ ಡಾ.ರಾಮಚಂದ್ರಯ್ಯ ಮಾತನಾಡಿ, ರಾಸಾಯನಿಕ ಮುಕ್ತ ಕೃಷಿ ಮತ್ತು ಬೆಳೆ ಪರಿವರ್ತನೆಯಿಂದ ಹೆಚ್ಚಿನ ಆದಾಯ ಗಳಿಸುವಂತೆ ರೈತರಿಗೆ ಕಿವಿಮಾತು ಹೇಳಿದರು.

ಡಾ.ಸುನೀಲ್ ಜೋಶಿ,ಡಾ.ಜಗದೀಶ್, ಡಾ.ಮಧು ಟಿ.ಎನ್ ವಿಜ್ಞಾನಿಗಳು ಸಮತೋಲಿತ ಗೊಬ್ಬರ ಮತ್ತು ವಿಜ್ಞಾನಾಧಾರಿತ ಪೋಷಕಾಂಶ ಬಳಕೆ ಬಗ್ಗೆ ಅರಿವು ಮೂಡಿಸಿದರು.

ತೋಟಗಾರಿಕಾ ವಿಜ್ಞಾನಿ ಡಾ.ದೀಪಾ ಪೂಜಾರ ಮಾತನಾಡಿ, ಮಾವಿನ ಬೆಳೆಯಲ್ಲಿ ಸವರಿಕೆ ಮಾಡುವುದರಿಂದ ಸಮಗ್ರ ನಿರ್ವಹಣೆ ಮತ್ತು ಉತ್ತಮ ಗುಣಮಟ್ಟದ ಇಳುವರಿ ಪಡೆಯುವ ವಿಧಾನವನ್ನು ವಿವರಿಸಿದರು.

ಕೇಂದ್ರದ ವಿಜ್ಞಾನಿ ಡಾ.ಪ್ರಮೋದ್ ಜಿ.ಮಾತನಾಡಿ, ಹೆಚ್ಚು ಇಳುವರಿ ನೀಡುವ ಸುಧಾರಿತ ತಳಿಗಳ ಪರಿಚಯ, ಬೀಜ, ಮಣ್ಣು ಮತ್ತು ನೀರು ಸಂರಕ್ಷಣೆ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ತರಬೇತಿ ಹಾಗೂ ದಿನಾಚರಣೆ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ 20ಕ್ಕೂ ಹೆಚ್ಚು ಪ್ರಗತಿಪರ ರೈತರು ಮತ್ತು ಮಹಿಳೆಯರು ಭಾಗವಹಿಸಿ ತಾಂತ್ರಿಕ ಮಾಹಿತಿ ಹಾಗೂ ಮಾರ್ಗದರ್ಶನ ಪಡೆದುಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-14-840934566

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.