ಮಾಗಡಿ: ಇಲ್ಲಿಯ ವಿದ್ಯಾನಗರದ ಕಲ್ಯಾಣಗೇಟ್ ಗ್ರಾಮದೇವತೆ ಹಾಗೂ ಕೋಟೆ ಮಾರಮ್ಮ ಆರಾಧನಾ ಮಹೋತ್ಸವ ಮತ್ತು ‘ನಮ್ಮೂರ ಹಬ್ಬ’ ಮೇ 12 ಮತ್ತು 13ರಂದು ನಡೆಯಲಿದೆ.

ಮಂಗಳವಾರ ಸಂಜೆ 4ಕ್ಕೆ ಗ್ರಾಮದೇವತೆ ಹಾಗೂ ಕೋಟೆ ಮಾರಮ್ಮ ಉತ್ಸವ ಮೂರ್ತಿಗಳನ್ನು ಕಲ್ಯಾಣಗೇಟ್ ವಿನಾಯಕ ದೇವಸ್ಥಾನದಿಂದ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ತರಲಾಗುವುದು. ನಂತರ ವಿದ್ಯಾನಗರದ ಮುನೇಶ್ವರ ದೇವಸ್ಥಾನದ ಮುಂಭಾಗ ಪ್ರತಿಷ್ಠಾಪಿಸಲಾಗುವುದು.

ಬುಧವಾರ ಮಧ್ಯಾಹ್ನ ಗ್ರಾಮದ ಬೀದಿಗಳಲ್ಲಿ ದೇವಿಯರ ಮೆರವಣಿಗೆ ಸಾಗಲಿದ್ದು, ದೇವಿಯರಿಗೆ 'ಮಡಲಕ್ಕಿ' ತುಂಬುವ ಕಾರ್ಯಕ್ರಮ ನಡೆಯಲಿದ್ದು. ಮೆರವಣಿಗೆಯ ನಂತರ ದೇವಿಯರನ್ನು ಮೂಲಸ್ಥಾನಕ್ಕೆ ಸೇರಿಸುವ ಮೂಲಕ ಉತ್ಸವಕ್ಕೆ ತೆರೆ ಬೀಳಲಿದೆ.

ಆರತಿ ಸ್ಪರ್ಧೆ: ಮಂಗಳವಾರ ಸಂಜೆ ನಡೆಯುವ ಆರತಿ ಕಾರ್ಯಕ್ರಮದಲ್ಲಿ ವಿಭಿನ್ನ ಹಾಗೂ ಆಕರ್ಷಕವಾಗಿ ಆರತಿ ತರುವವರಿಗೆ ಬಹುಮಾನ ನೀಡಲಾಗುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-14-812027557

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.