ಮಾಗಡಿ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ರಾಷ್ಟ್ರೀಯ ಬಾಯಿ ಆರೋಗ್ಯ ದಿನಾಚರಣೆ ಪ್ರಯುಕ್ತ ದಂತ ಮತ್ತು ಬಾಯಿ ಉಚಿತ ತಪಾಸಣಾ ಶಿಬಿರ ನಡೆಯಿತು.

ಶಾಸಕ ಎಚ್.ಸಿ. ಬಾಲಕೃಷ್ಣ, ಪ್ರತಿಯೊಬ್ಬರು ಹಲ್ಲು ಮತ್ತು ಬಾಯಿಯ ಆರೋಗ್ಯ ಕಾಪಾಡಿಕೊಳ್ಳಬೇಕು. ಹಲ್ಲು,ಬಾಯಿ ಚೆನ್ನಾಗಿದ್ದರೆ ನೋಡಲು ಸುಂದರವಾಗಿ ಕಾಣುತ್ತಾರೆ. ಅವರ ಆರೋಗ್ಯವೂ ಚೆನ್ನಾಗಿರುತ್ತದೆ ಎಂದರು.

ಎಚ್ಪಿವಿ, ಎಚ್ಐವಿ. ಹಾಗೂ ಟಿಬಿ(ಕ್ಷಯ) ರೋಗಗಳು ಹೆಚ್ಚಾಗುತ್ತಿದೆ. ರೋಗಿಗಳು ಕೂಡಲೆ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ರೋಗ ತಡೆಗಟ್ಟಬಹುದು ಎಂದು ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ಥನ, ಗರ್ಭಕೋಶದ ಕ್ಯಾನ್ಸರ್ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಆಶಾ ಕಾರ್ಯಕರ್ತೆರಿಂದ ಪ್ರತಿ ಮನೆ ಸರ್ವೇ ಮಾಡಿಸಿ, ಕ್ಯಾನ್ಸರ್ ಪೀಡಿತ ರೋಗಿಗಳನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಗೆ ಒಳಪಡಿಸಿದರೆ ಕ್ಯಾನ್ಸರ್ ನಿವಾರಣೆಗೆ ಮಾಡಬಹುದು. ಇದಕ್ಕೆ ಬೇಕಾದ ವ್ಯಾಕ್ಸಿನ್ಗಳನ್ನು ರೋಗಿಗಳಿಗೆ ಕೊಡಬೇಕು. ಹೆಚ್ಚಿನ ವ್ಯಾಕ್ಸಿನ್ ಬೇಕಾದಲ್ಲಿ ನನ್ನ ಸ್ವಂತ ಹಣದಿಂದಲೇ ವ್ಯಾಕ್ಸಿನ್ ಕೊಡಿಸಲು ಆರ್ಥಿಕ ಸಹಕಾರ ನೀಡುತ್ತೇನೆ’ ಎಂದರು.

ಇದೇ ವೇಳೆ ಟಿಬಿ ರೋಗಿಗಳಿಗೆ ಪೌಷ್ಠಿ ಆಹಾರದ ಕಿಟ್ ವಿತರಿಸಲಾಯಿತು.

ಡಿಎಚ್ಓ ಡಾ.ಪದ್ಮಾವತಿ, ಡಾ.ರಾಜು, ಡಾ.ಮುರಳಿ, ಡಾ.ಮಂಜುಳಾ, ಟಿಎಚ್ಓ ಡಾ.ರಾಮಚಂದ್ರ, ಮುಖ್ಯ ವೈದ್ಯಾಧಿಕಾರಿ ಹರ್ಷವರ್ಧನ್ ಆಸ್ಪತ್ರೆಯಲ್ಲಿನ ಸೇವೆ, ಶಿಬಿರಗಳು, ಚಿಕಿತ್ಸೆ, ತಡೆಗಟ್ಟುವಿಕೆ ಕುರಿತು ಮಾತನಾಡಿದರು. ಡಾ.ಬಾವ ಶಿವಕುಮಾರ್, ಹಿರಿಯ ನಿರೀಕ್ಷಣಾಧಿಕಾರಿ ಶಿವಸ್ವಾಮಿ, ಭಾಗ್ಯ, ಭರತ್, ಮಹಮದ್ ಇಸ್ಲಾಂ, ಮಾನಸ, ಗುಣಶೇಖರ್, ತುಕಾರಾಂ, ರಾಜೇಂದ್ರ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-14-242196515

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.