ಮಾಗಡಿ: ಸೆ.18 ರಂದು ಬುಧವಾರ ಮಾಗಡಿ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಅಧ್ಯಕ್ಷ ಸ್ಥಾನ ಕಳೆದುಕೊಳ್ಳ ಆತಂಕ ಎದುರಾಗಿದೆ ಎಂದು ಜೆಡಿಎಸ್ ಮೂಲಕಗಳಿಂದ ತಿಳಿದು ಬಂದಿದೆ.
ಜೆಡಿಎಸ್‌ನ ಕೆಲ ಸದಸ್ಯರು ಮಾಜಿ ಶಾಸಕ ಎ.ಮಂಜುನಾಥ್ ಅವರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಮಾತುಗಳು ಜೆಡಿಎಸ್ ಕಾರ್ಯಕರ್ತರಿಂದ ಕೇಳಿ ಬರುತ್ತಿದ್ದು, ಕಾಂಗ್ರೆಸ್ ವಶವಾಗಲಿದೆಯಾ ಮಾಗಡಿ ಪುರಸಭೆ ಎನ್ನುವ ಅನುಮಾನ ಮೂಡುವಂತೆ ಮಾಡಿದೆ.
ಒಟ್ಟು 23 ಸದಸ್ಯ ಬಲ ಹೊಂದಿರುವ ಮಾಗಡಿ ಪುರಸಭೆ ಜೆಡಿಎಸ್ 12 ಸದಸ್ಯರು, ಬಿಜೆಪಿ ಒಬ್ಬರು ಹಾಗೂ ಕಾಂಗ್ರೆಸ್ 10 ಸದಸ್ಯರನ್ನು ಒಳಗೊಂಡಿದ್ದು, ಜೆಡಿಎಸ್ ಪುರಸಭೆ ಸದಸ್ಯ ಮಾಜಿ ಉಪಾಧ್ಯಕ್ಷ ರಹಮತ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರಿಂದ ಜೆಡಿಎಸ್ ಸಂಖ್ಯೆ 11 ಕ್ಕೆ ಇಳಿದಿದೆ. ಬಿಜೆಪಿ ಸದಸ್ಯರು ಹಾಗೂ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರ ಮತ ಸೇರಿ 13 ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್‌ನಲ್ಲಿ 10 ಸದಸ್ಯರ ಜೊತೆ ಜೆಡಿಎಸ್ ಒಬ್ಬ ಸದಸ್ಯ ಹಾಗೂ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಮತ ಸೇರಿ ಕಾಂಗ್ರೆಸ್ 12 ಸ್ಥಾನವಾಗಿದ್ದು, ಅಧ್ಯಕ್ಷ ಗಾದಿ ಪಡೆಯಲು ಕಾಂಗ್ರೆಸ್ ಗೆ ಒಂದು ಮತ ಹೆಚ್ಚುವಾರಿಯಾಗಿ ಬೇಕಾಗಿದ್ದು ಈಗ ಜೆಡಿಎಸ್ ನ ಕೆಲ ಸದಸ್ಯರು ಮಾಜಿ ಶಾಸಕರ ಸಂಪರ್ಕಕ್ಕೆ ಸಿಗದೆ ಪೋನ್ ಸ್ವೀಚ್ ಆಫ್ ಮಾಡಿಕೊಡಿರುವುದು ಜೆಡಿಎಸ್ ನಲ್ಲಿ ಅಂತಕ ಮೂಡಿಸಿದೆ.
ಮಾಜಿ ಶಾಸಕ ಎ.ಮಂಜುನಾಥ್ ಅವರು ಸೋಮವಾರ ಪಟ್ಟಣದ ಜೆಡಿಎಸ್ ಕಚೇರಿಗೆ ಬಂದು ಪುರಸಭೆ ಅಧ್ಯಕ್ಷ ಚುನಾವಣೆ ಹಿನ್ನಲೆಯಲ್ಲಿ ಪೂರ್ವಭಾವಿ ಸಭೆ ನಡೆಸಿದ್ದಾರೆ. ಕೆಲ ಸದಸ್ಯರನ್ನು ಚುನಾವಣೆ ಹಿನ್ನಲೆಯಲ್ಲಿ ಪ್ರವಾಸಕ್ಕೆ ಕಳುಹಿಸಿಕೊಡಲಾಗಿದ್ದು, ಕೆಲ ಜೆಡಿಎಸ್ ಸದಸ್ಯರು ಪ್ರವಾಸಕ್ಕೆ ಗೈರಾಗುವ ಮೂಲಕ ಜೆಡಿಎಸ್ ಪಕ್ಷಕ್ಕೆ ಸೆಡ್ಡು ಹೊಡೆಯುವ ಸಾಧ್ಯತೆ ಚುನಾವಣೆ ದಿನದಂದು ತಿಳಿಯಲಿದೆ.
ವಿಫ್ ಜಾರಿ : ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದಿಂದ ಜೆಡಿಎಸ್ ನ ಎಲ್ಲಾ ಸದಸ್ಯರಿಗೂ ವಿಫ್ ಜಾರಿ ಮಾಡಲಾಗಿದ್ದು, ವಿಫ್ ಉಲ್ಲಂಘನೆ ಮಾಡಿದ ಸದಸ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದ್ದಾರೆ. ಇತ್ತ ಕಾಂಗ್ರೆಸ್ ಸದಸ್ಯರು ಶತಾಯ-ಗತಾಯ ಈ ಬಾರಿ ಕಾಂಗ್ರೆಸ್ ಪಕ್ಷ ಪುರಸಭೆ ಅಧಿಕಾರ ಹಿಡಿಯಲು ರಣ ತಂತ್ರ ರೂಪಿಸಿದ್ದು ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆ ಎಂಬುದು ಕಾದುನೋಡಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.