ಮಾಗಡಿ: ನಾಡಪ್ರಭು ಕೆಂಪೇಗೌಡರ ಆರಾಧ್ಯ ದೈವ, ‘ಎರಡನೇ ತಿರುಪತಿ’ ಎಂದೇ ಖ್ಯಾತಿ ಪಡೆದಿರುವ ಮಾಗಡಿ ಐತಿಹಾಸಿಕ ರಂಗನಾಥಸ್ವಾಮಿ ರಥೋತ್ಸವ ಏಪ್ರಿಲ್ 1ರಂದು ಬುಧವಾರ ಅದ್ದೂರಿಯಾಗಿ ನಡೆಯಲಿದೆ.

ಉತ್ತರ ನಕ್ಷತ್ರದ ಅಭಿಜಿತ್ ಮುಹೂರ್ತದಲ್ಲಿ ಬೆಳಗ್ಗೆ 11:30ರಿಂದ 12:15ರೊಳಗೆ ರಥೋತ್ಸವಕ್ಕೆ ಅಧಿಕೃತ ಚಾಲನೆ ಸಿಗಲಿದೆ. ದೇವರಿಗೆ ರಾಜಪೋಷಾಕಿನ ಅಲಂಕಾರ ರಥೋತ್ಸವ ದಿನದಂದು ರಂಗನಾಥಸ್ವಾಮಿಗೆ ವಿಶೇಷ ಆಭರಣಗಳ ಅಲಂಕಾರ ಮಾಡಲಾಗುವುದು.

ಬೆಂಗಳೂರು ದಕ್ಷಿಣ ಜಿಲ್ಲೆ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತರಿಗಾಗಿ ಕುಡಿಯುವ ನೀರು, ಆರೋಗ್ಯ ಸೇವೆ ಹಾಗೂ ಸುಗಮ ದರ್ಶನಕ್ಕಾಗಿ ವಿಶೇಷ ಸಾಲುಗಳ ವ್ಯವಸ್ಥೆಯನ್ನು ತಾಲ್ಲೂಕು ಆಡಳಿತ ಮಾಡಿಕೊಂಡಿದೆ.

ಅರವಂಟಿಕೆ (ಅನ್ನಸಂತರ್ಪಣೆ): ಕೆಂಪೇಗೌಡರ ಕಾಲದಿಂದಲೂ ನಡೆದು ಬಂದಿರುವ 'ಅರವಂಟಿಕೆ' ಸಂಪ್ರದಾಯ ಇಂದಿಗೂ ಜೀವಂತವಾಗಿದೆ. ವಿವಿಧ ಸಮುದಾಯದವರು ರಥೋತ್ಸವ ದಿನದಂದು ಭಕ್ತರಿಗೆ ಅದ್ದೂರಿ ಊಟದ ವ್ಯವಸ್ಥೆ ಮಾಡಲಿದ್ದಾರೆ ಎಂದರು.

ವಿಜಯನಗರದ ಅರಸರು ಹಾಗೂ ಮೈಸೂರು ಒಡೆಯರ ಕಾಲದಲ್ಲಿ ಅಭಿವೃದ್ಧಿ ಕಂಡ ಈ ದೇವಾಲಯಕ್ಕೆ ಸರ್ಕಾರ ಈಗಾಗಲೇ ₹5ಕೋಟಿ ಅನುದಾನ ಮೀಸಲಿಟ್ಟಿದೆ.

ಉತ್ಸವಗಳು ಆರಂಭ: ರಥೋತ್ಸವ ಅಂಗವಾಗಿ ಮಾ.27ರಿಂದ 31ರವರೆಗೆ ಹಂಸವಾಹನ, ಶೇಷವಾಹನ, ಗರುಡೋತ್ಸವ ಹಾಗೂ ವೈರಮುಡಿ ಉತ್ಸವ ಜರುಗಲಿದೆ. ಮಾ.31ರಂದು ಸಂಜೆ ಗಜೇಂದ್ರ ಮೋಕ್ಷ ಮತ್ತು ಕಲ್ಯಾಣೋತ್ಸವ ನಡೆಯಲಿದೆ.

ರಥೋತ್ಸವದ ನಂತರ ವಿಶೇಷತೆ: ರಥೋತ್ಸವ ಮುಗಿದ ನಂತರವೂ ಏಪ್ರಿಲ್ 6ರವರೆಗೆ ಸರಣಿ ಉತ್ಸವ ಮುಂದುವರಿಯಲಿದೆ. ಏ.2ರಂದು ಸೂರಮಂಡಲೋತ್ಸವ, ಡೋಲೋತ್ಸವ ಮತ್ತು ಅಶ್ವವಾಹನೋತ್ಸವ, 3 ರಂದು ತೀರ್ಥಸ್ನಾನ, ತೆಪ್ಪೋತ್ಸವ ಹಾಗೂ ಧ್ವಜ ಅವರೋಹಣ, 4ರಂದು ಹನುಮಂತೋತ್ಸವ, ಆನೆ ಉತ್ಸವ ಮತ್ತು ವಿಶೇಷ ಪುಷ್ಪಯಾಗ ಸೇವೆ, 6ರಂದು ಶೇಷವಾಹನೋತ್ಸವ, ದ್ವಾದಶಾರಾಧನೆ ಮತ್ತು ಶಯನೋತ್ಸವದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-14-82986411

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.