ಮಾಗಡಿ: ಜಗತ್ತಿನ ಕತ್ತಲೆ ಹೋಗಲಾಡಿಸಲು ಜ್ಞಾನದ ಜ್ಯೋತಿಯಾಗಿ ಬಂದ ರೇವಣಸಿದ್ದೇಶ್ವರ ತತ್ವ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿ ಎಂದು ಜಡೇದೇವರಮಠದ ಪೀಠಾಧ್ಯಕ್ಷ ಇಮ್ಮಡಿ ಬಸವರಾಜ ಸ್ವಾಮೀಜಿ ಹೇಳಿದರು.

ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿ ರೇವಣ್ಣ ಸಿದ್ದೇಶ್ವರಸ್ವಾಮಿ ರಥೋತ್ಸವ ಪ್ರಯುಕ್ತ ರೇವಣ್ಣಸಿದ್ದೇಶ್ವರ ಒಕ್ಕಲು ಮನೆತನದವರಿಗೆ ಏರ್ಪಡಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಶಿವಶರಣರ ಮತ್ತು ಸಂತರ ಪಾತ್ರ ಅನನ್ಯ. ಅಂತಹ ಮಹಾನ್ ಚೇತನಗಳಲ್ಲಿ ಒಬ್ಬರಾದ, ಭಕ್ತಿ ಮಾರ್ಗದ ದಾರಿದೀಪ ರೇವಣಸಿದ್ದೇಶ್ವರರ ಜೀವನ ಮತ್ತು ಸಂದೇಶ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ ಎಂದರು.

ಸಿದ್ಧ ಪರಂಪರೆ ಪ್ರಮುಖರಾದ ರೇವಣಸಿದ್ದೇಶ್ವರರು ಕೇವಲ ಒಂದು ಜಾತಿಗೆ ಸೀಮಿತವಾಗದೆ ಮನುಕುಲದ ಉದ್ದಾರಕ್ಕಾಗಿ ಭಕ್ತಿ ಮಾರ್ಗವನ್ನು ಬೋಧಿಸಿದವರು. ‘ಕಾಯಕವೇ ಕೈಲಾಸ’ ಎಂಬ ತತ್ವದಂತೆ ನಿಷ್ಠೆಯಿಂದ ಮಾಡುವ ಕೆಲಸವೇ ದೇವರೆಂದು ಸಾರಿದವರು. ಇವರ ಪವಾಡ ಮತ್ತು ಭಕ್ತರ ಮೇಲಿರುವ ಕರುಣೆ ಇಂದಿಗೂ ಕೋಟಿಗಟ್ಟಲೆ ಭಕ್ತರನ್ನು ಆಕರ್ಷಿಸುತ್ತಿದೆ. ರೇವಣಸಿದ್ದೇಶ್ವರರ ಭಕ್ತಿ ಮಾರ್ಗ ಸರಳ ಮತ್ತು ಸಮಾನತೆಯ ಮೇಲೆ ನಿಂತಿದೆ ಎಂದರು.

ರೇವಣ ಸಿದ್ದೇಶ್ವರರ ತತ್ವ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿ. ಅವರ ಭಕ್ತಿ ಮಾರ್ಗದಲ್ಲಿ ನಡೆಯುವುದು ಅಂದರೆ ಶಾಂತಿ, ಸಹನೆ ಮತ್ತು ಸತ್ಯದ ಹಾದಿಯಲ್ಲಿ ನಡೆಯುವುದು ಎಂದರ್ಥ ಎಂದು ಶ್ರೀಗಳು ನುಡಿದರು.

ಅವ್ವೇರಹಳ್ಳಿ ಬೆಟ್ಟದ ಮೇಲಿರುವ ರೇವಣಸಿದ್ದೇಶ್ವರ ತೇರು ಎಳೆಯುವ ಸಮಯಕ್ಕೆ ರೇವಣಸಿದ್ದೇಶ್ವರರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರಿಗೆ ಮಜ್ಜಿಗೆ, ಪಾನಕ, ಕೊಸಂಬರಿ ಹಾಗೂ ಪ್ರಸಾದ ವಿತರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-14-2122680374

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.