ಮಾಗಡಿ: ಪಟ್ಟಣದಲ್ಲಿ ಕುಂಟುತ್ತಾ ಸಾಗುತ್ತಿರುವ ಕೆ-ಶಿಪ್ ಚತುಷ್ಪಥ ಕಾಮಗಾರಿಯಿಂದಾಗಿ ಸಾರ್ವಜನಿಕರು ಮತ್ತು ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಅವೈಜ್ಞಾನಿಕ ಚರಂಡಿ ವ್ಯವಸ್ಥೆ ಹಾಗೂ ವಿಪರೀತ ದೂಳಿನಿಂದಾಗಿ ಜನರು, ವಾಹನ ಸವಾರರು ಪರದಾಡುತ್ತಿದ್ದಾರೆ.

ಜೆಡಿಎಸ್ ಕಚೇರಿಯ ಮುಂಭಾಗ ಹಾಗೂ ಮಾರುತಿ ಮೋಹನ್ ಚಿತ್ರಮಂದಿರ ಮುಂಭಾಗ ಸರಿಯಾಗಿ ಚರಂಡಿ ಸಂಪರ್ಕ ಇಲ್ಲದೆ ಕೊಳಚೆ ನೀರು ರಸ್ತೆ ತುಂಬಾ ಹರಿಯುತ್ತಿದೆ. ಇದರಿಂದ ಹೊರಹೊಮ್ಮುವ ಅಸಾಧ್ಯ ದುರ್ವಾಸನೆಯಿಂದ ಮಾಗಡಿ-ಬೆಂಗಳೂರು ಮುಖ್ಯರಸ್ತೆ ಸಂಚಾರ ಎಂದರೆ ಬೆದರುವಂತಾಗಿದೆ.

ಮಾಗಡಿ ಮಾರ್ಗವಾಗಿ ಬೆಂಗಳೂರಿನಿಂದ ಕುಣಿಗಲ್, ಹಾಸನ, ಮಂಗಳೂರು, ಹುಲಿಯೂರುದುರ್ಗ, ಮದ್ದೂರು ಹಾಗೂ ಮೈಸೂರಿಗೆ ಸಾವಿರಾರು ವಾಹನ ಸಂಚರಿಸುತ್ತವೆ. ಅದರಲ್ಲೂ ವಾರಾಂತ್ಯ, ರಜಾ ದಿನಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ. ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ತಾಸುಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಶೀಘ್ರ ಕಾಮಗಾರಿ ಮುಗಿಸಿ ಚರಂಡಿ ವ್ಯವಸ್ಥೆ ಸರಿಪಡಿಸಬೇಕು. ಇಲ್ಲವಾದರೆ ಕೆ-ಶಿಪ್ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಜಯ ಕುಮಾರ್ ಎಚ್ಚರಿಸಿದ್ದಾರೆ.

ಸಾರ್ವಜನಿಕರಿಗೆ ತೊಂದರೆ

ಕಳೆದ ಎಂಟು ವರ್ಷಗಳಿಂದಲೂ ಕೂಡ ರಸ್ತೆ ಕಾಮಗಾರಿ ಪೂರ್ಣ ಮಾಡದೇ ಚರಂಡಿ ಸಂಪರ್ಕ ಜೊತೆಗೆ ನೀರಿನ ಸಂಪರ್ಕದ ಪೈಪ್ ಕಡಿತ ಮಾಡಿರುವ ಕೆ-ಶೀಪ್ ಅಧಿಕಾರಿಗಳು ಸಾಕಷ್ಟು ನಿರ್ಲಕ್ಷ ಮಾಡುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿದರು ಕೂಡ ಚರಂಡಿ ಸಂಪರ್ಕ ಪೂರ್ಣ ಮಾಡಿಲ್ಲ ಮತ್ತು ಟಿಸಿಯನ್ನು ಕೂಡ ತೆರವು ಮಾಡದೆ ನಿರ್ಲಕ್ಷ ಮಾಡಿದ್ದಾರೆ ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ.

ಎಂ.ಎನ್.ಮಂಜುನಾಥ್, ಪುರಸಭೆ ಮಾಜಿ ಸದಸ್ಯರು ಮಾಗಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.