ಮಾಗಡಿ: ಪಟ್ಟಣದ ಹಿಂದೂ ರುದ್ರಭೂಮಿ ಆವರಣದಲ್ಲಿ ಸುರಿಯಲಾಗಿದ್ದ ರಸ್ತೆ ಕಾಮಗಾರಿಯ ಸಿಮೆಂಟ್ ಮಿಶ್ರಿತ ಮಣ್ಣು ಹಾಗೂ ಚರಂಡಿ ತ್ಯಾಜ್ಯವನ್ನು ಪುರಸಭೆ ಸಿಬ್ಬಂದಿ ಗುರುವಾರ ಬೆಳಗ್ಗೆ ಯಂತ್ರಗಳ ನೆರವಿನಿಂದ ತೆರವುಗೊಳಿಸಿದ್ದಾರೆ.

ಪಟ್ಟಣದ ತಟವಾಳು ಮುಖ್ಯರಸ್ತೆಯಲ್ಲಿರುವ ಮಸಣದ ಜಾಗದಲ್ಲಿ ರಸ್ತೆ ರಿಪೇರಿ ಕಾಮಗಾರಿಯ ಸಿಮೆಂಟ್ ಮಿಶ್ರಿತ ಮಣ್ಣು ಮತ್ತು ಚರಂಡಿಯ ತ್ಯಾಜ್ಯವನ್ನು ಬೇಕಾಬಿಟ್ಟಿ ಸುರಿಯಲಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಮಸಣದ ಆವರಣದಲ್ಲಿ ಮಣ್ಣು ಮತ್ತು ಕಸ ಸುರಿಯುತ್ತಿರುವ ಬಗ್ಗೆ ಗುರುವಾರ ‘ಪ್ರಜಾವಾಣಿ’ಯಲ್ಲಿ ‘ತ್ಯಾಜ್ಯ ಸುರಿವ ಸ್ಥಳವಾದ ಸ್ಮಶಾನ’ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.

ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾದ ಪುರಸಭೆಯ ಅಧಿಕಾರಿಗಳು ಸ್ಥಳಕ್ಕೆ ಜೆಸಿಬಿ ಯಂತ್ರಗಳನ್ನು ಕಳುಹಿಸಿ ಸ್ಮಶಾನದ ದ್ವಾರದ ಬಳಿ ಇದ್ದ ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಿದ್ದಾರೆ.

ಅಧಿಕಾರಿಗಳ ಈ ಕ್ಷಿಪ್ರ ಕ್ರಮಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಅಧಿಕಾರಿಗಳು ಮತ್ತು ಸಾರ್ವಜನಿಕರು ಸ್ಮಶಾನದಲ್ಲಿ ಸ್ವಚ್ಛತೆ ಕಾಪಾಡಲು ಗಮನ ಹರಿಸಲಿ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

‘ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬರುವ ಸಾರ್ವಜನಿಕರ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಸ್ಮಶಾನದ ಒಳಭಾಗದ ಹಳ್ಳ ಮುಚ್ಚಲು ರಸ್ತೆ ಕಾಮಗಾರಿಯ ಮಣ್ಣನ್ನು ಬಳಸಲಾಗುತ್ತಿತ್ತು. ಟ್ರ್ಯಾಕ್ಟರ್ಗಳು ಮಣ್ಣು ಸುರಿಯುವಾಗ ಮುಖ್ಯದ್ವಾರದ ಬಳಿ ರಾಶಿ ಹಾಕಿದ್ದವು. ಈಗ ಅದನ್ನು ತೆಗೆಯಲಾಗಿದೆ. ಸಾರ್ವಜನಿಕರಿಗೆ ತೊಂದರೆ ನೀಡುವ ಉದ್ದೇಶ ನಮಗಿಲ್ಲ’ ಎಂದು ಪುರಸಭೆ ಮಾಜಿ ಸದಸ್ಯ ರೂಪೇಶ್ ಕುಮಾರ್ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-14-924637819

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.