ಮಾಗಡಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಯಾದವ ಸಂಘದ ವತಿಯಿಂದ ಬುಧವಾರ ಶ್ರೀಕೃಷ್ಣ ಜಯಂತಿ ಆಚರಿಸಲಾಯಿತು.
ತಹಶೀಲ್ದಾರ್ ಸುರೇಂದ್ರಮೂರ್ತಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಗೊಲ್ಲ ಅಭಿವೃದ್ಧಿ ನಿಗಮ ಆರಂಭಿಸಿ, ತಾಲ್ಲೂಕು ಕೇಂದ್ರದಲ್ಲಿ ಸಮುದಾಯ ಭವನ ಕಟ್ಟಿಸಿಕೊಡಬೇಕು. ಗೊಲ್ಲ ಜನಾಂಗದ ಕುಲಶಾಸ್ತ್ರ ಅಧ್ಯಯನ ಮಾಡಬೇಕು. ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕು ಎಂದು ಸಂಘದ ಮುಖಂಡರು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಯಾದವ ಗೊಲ್ಲರ ಸಂಘದ ಮುಖಂಡರಾದ ಪುಟ್ಟರಾಜ್ ಯಾದವ್, ಮಾರುತಿ ಯಾದವ್, ಹೋರಾಟಗಾರರಾದ ಸಿ.ಜಯರಾಮ್, ಕಲ್ಕೆರೆ ಶಿವಣ್ಣ, ತೋಟದ ಮನೆ ಗಿರೀಶ್, ಬ್ಯಾಲಕೆರೆ ಚಿಕ್ಕರಾಜು, ಶ್ರೀಕೃಷ್ಣ ಜನ್ಮಾಷ್ಟಮಿ ಬಗ್ಗೆ ಮಾತನಾಡಿದರು.
ಕನ್ನಡ ಪರಹೋರಾಟಗಾರ ಮಾ.ರಾ.ಬಸವರಾಜು, ಧನಂಜಯಯಾದವ್, ಹನುಮಂತಯ್ಯ, ಅಪ್ಪಾಜಿ ಗೌಡ, ನಿವೃತ್ತ ಶಿಕ್ಷಕ ಕರಲಮಂಗಲದ ನಾರಾಯಣ್, ಮರಲಗೊಂಡಲದ ವೆಂಕಟೇಶ್, ಬಾಚೇನಹಟ್ಟಿ ಗ್ರಾಮಪಂಚಾಯಿತಿ ಸದಸ್ಯರಾದ ಶಿವಮೂರ್ತಿ, ಅಶೋಕ್, ಪ್ರಸನ್ನ, ಯಕ್ಷಗಾನ ಕಲಾವಿದ ಎ.ಎಂ.ನಾಗರಾಜ್, ಉಮೇಶ್, ತಗ್ಗಿಕುಪ್ಪೆ ಗ್ರಾಮಪಂಚಾಯಿತಿ ಅಧ್ಯಕ್ಷ ರಾಜಣ್ಣ,ಕೆಂಚಪ್ಪ, ಬಸವೇನಹಳ್ಳಿ ಚಿಕ್ಕಣ್ಣ, ಮಾನಗಲ್ ಮಹಾಲಕ್ಷ್ಮಮ್ಮಶ್ರೀನಿವಾಸ್, ಕಂದಾಯ ಅಧಿಕಾರಿ ನಟರಾಜ್ ಮಧು, ಶಿರಸ್ಥೇದಾರ್ ರಶ್ಮಿ, ಬಾಚೇನಹಟ್ಟಿ ಹನುಮರಂಗಯ್ಯ, ಮರಲಗೊಂಡಲಸುರೇಶ್, ಪ್ರಸನ್ನ ಕುಮಾರ್, ಬಿಎಂಟಿಸಿ ನಾಗರಾಜ್ ಯಾದವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.