ಮಾಗಡಿ: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಲ್ಲೂಕು ಕೇಂದ್ರದ ಜಿಕೆಬಿಎಂಎಸ್ ಶಾಲೆಯಲ್ಲಿ ನಡೆದ ಚುನಾವಣೆಗೆ ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಚುನಾವಣಾಧಿಕಾರಿ ಬಿ.ಇ.ಒ ರಾಜೇಗೌಡ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು. ಇದೇ ವೇಳೆ ಉಪಾಧ್ಯಕ್ಷರಾಗಿ ದೇವರಾಜು, ಕಮಲಮ್ಮ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೆ.ವಿ. ರವಿಶಂಕರ್ ಮತ್ತು ಖಜಾಂಚಿಯಾಗಿ ಚಿಕ್ಕಗಂಗಮ್ಮ ಸಹ ಅವಿರೋಧ ಆಯ್ಕೆಯಾದರು.

ಎನ್ಪಿಎಸ್ಗೆ ತಡೆ, ಒಪಿಎಸ್ ಜಾರಿಗೆ ಒತ್ತು, ಗುರುಭವನ ಪೂರ್ಣ, ವರ್ಗಾವಣೆಯಾಗಿರುವ 45 ಮಂದಿ ಶಿಕ್ಷಕರಿಗೆ ಒಂದೇ ಬಾರಿಗೆ ಎಲ್ಟಿಎಸ್ ನೀಡುವ ಜೊತೆಗೆ, ಬಾಕಿ ಉಳಿದಿರುವ ₹3 ಕೋಟಿ ಮೆಡಿಕಲ್ ಬಿಲ್ ಅನ್ನು ಶೀಘ್ರದಲ್ಲೇ ಶಿಕ್ಷಕರಿಗೆ ತಲುಪಿಸಲಾಗುವುದು ಎಂದು ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.

ಬಿ.ಎನ್. ಜಯರಾಮು, ಹನುಮಯ್ಯ, ಕೆ.ಟಿ. ರಂಗಸ್ವಾಮಿ, ಮಳ್ಳೂರು ಲೋಕೇಶ್, ಬಸವರಾಜು, ಕವಿತಾ, ಶ್ರೀನಿವಾಸ್, ಕೃಷ್ಣ, ಬಸವರಾಜು, ನಿರ್ದೇಶಕರಾದ ಶ್ರೀನಿವಾಸ್, ಶಿವಸಂದ್ರ ಶಿವರಾಮಯ್ಯ, ನರಸಿಂಹಮೂರ್ತಿ, ಸಿ. ಪ್ರಕಾಶ್ , ಸಂಘದ ಎಸ್.ಆರ್. ಮಂಜುಳಾ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-14-445619419

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.