ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ ಕಳ್ಳತನ ಪ್ರಕರಣ: ಕಳ್ಳರ ಶೋಧಕ್ಕೆ ತಂಡ ರಚನೆ

Published : 24 ಸೆಪ್ಟೆಂಬರ್ 2024, 16:28 IST
Last Updated : 24 ಸೆಪ್ಟೆಂಬರ್ 2024, 16:28 IST
ಫಾಲೋ ಮಾಡಿ
Comments

ಮಾಗಡಿ: ಇಲ್ಲಿನ ವಾಸವಾಂಭ ಗಿರವಿ ಮತ್ತು ಬಟ್ಟೆ ಅಂಗಡಿ ಮಾಲೀಕರಾದ ವೇಣುಗೋಪಾಲ್ ಗುಪ್ತಾ ಅವರ ಮನೆಯಲ್ಲಿ ಭಾನುವಾರ ರಾತ್ರಿ ಹಣ, 4 ಕೆಜಿ ಚಿನ್ನ ಮತ್ತು ವಜ್ರದ ಒಡವೆಗಳ ಕಳ್ಳತನವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ನಾಲ್ಕು ತಂಡಗಳನ್ನು ರಚನೆ ಮಾಡಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಈಗಾಗಲೇ ಕಳ್ಳತನವಾದ ಮನೆಯಲ್ಲಿ ಸಾಕ್ಷಿಗಳನ್ನು ಪಡೆಯಲಾಗಿದ್ದು, ಪಟ್ಟಣದ ಪ್ರಮುಖ ರಸ್ತೆಗಳ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಲಾಗುತ್ತಿದೆ. ಮಾಗಡಿಗೆ ಬಂದಿರುವ ವಾಹನಗಳ ಪತ್ತೆಗೆ ಲೊಕೇಶನ್ ಟವರ್ ಗಳನ್ನು ಪರಿಶೀಲಿಸಲಾಗುತ್ತಿದೆ. ಮಾಗಡಿ, ತಾವರೆಕೆರೆ, ಕುದೂರು ಸೇರಿ ನಾಲ್ಕು ತಂಡಗಳನ್ನಾಗಿ ಮಾಡಿಕೊಂಡು ತನಿಖೆ ಚುರುಕುಗಳಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT