ಮಾಗಡಿ: ಬೆಂಗಳೂರಿ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ, ಆರ್ಒಸಿಎಫ್ ಸಂಸ್ಥೆ ಹಾಗೂ ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಸಹಯೋಗದಲ್ಲಿ ತಾಲ್ಲೂಕಿನ ಬಿರಾವರದಲ್ಲಿ ಶುಕ್ರವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಸಂಘದ ಮಹಿಳೆಯರು ಭೂಮಿ ಸಂಸ್ಥೆಯ ವಿಶ್ವಾಸ್ ಯೋಜನೆಯಡಿ ತಯಾರಿಸಿರುವ 15ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಶ್ರಕ್ ಗ್ಲೋಬಲ್ ನೆಟ್ವರ್ಕ್ ಕಂಪನಿ ಸಹಾಯಕ ವ್ಯವಸ್ಥಾಪಕ ಆರ್. ರಾಕೇಶ್ ಹಾಗೂ ಇತರ ಗಣ್ಯರು ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಅವರು, ‘ಮಹಿಳೆಯರು ತುಂಬಾ ಪರಿಶ್ರಮವಹಿಸಿ ಪರಿಶುದ್ಧವಾದ ಉತ್ಪನ್ನಗಳನ್ನುತಯಾರಿಸಿದ್ದೀರಿ. ಗುಣಮಟ್ಟದ ಈ ಉತ್ಪನ್ನಗಳಿಗೆ ಹೆಚ್ಚಿನ ಜನರಿಗೆ ತಲುಪಲಿ. ನಮ್ಮ ಕಂಪನಿಯ ಸಿಎಸ್ಆರ್ ನಿಧಿಯಡಿ ಭೂಮಿ ಸಂಸ್ಥೆ ವಿಶ್ವಾಸ್ ಯೋಜನೆ ಅನುಷ್ಠಾನಗೊಳಿಸಿದೆ. ಮುಂದೆ ಕಂಪನಿಯಿಂದಲೂ ಉತ್ಪನ್ನ ಖರೀದಿಸಲಾಗುವುದು’ ಎಂದು ಭರವಸೆ ನೀಡಿದರು.

ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಜ್ಯೋತಿ ಬತುಳ ಮಾತನಾಡಿ, ‘ನಿಮ್ಮೆಲ್ಲರ ಉತ್ಸಾಹ, ಶ್ರಮ, ಸಾಧನೆಗೆ ಹೋಲಿಸಿದರೆ ನಮ್ಮ ಸಿಎಸ್ಆರ್ ನಿಧಿ ಬಹಳ ಕಡಿಮೆಯೇ. ನಿಮ್ಮ ಸಾಧನೆ ಹೀಗೆ ಮುಂದುವರಿಯಲಿ’ ಎಂದು ಶುಭ ಕೋರಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಭೂಮಿ ಸಂಸ್ಥೆಯ ಯೋಜನಾ ನಿರ್ದೇಶಕ ರವಿ ಕೆ. ‘ಎಲ್ಲಾ ಉತ್ಪನ್ನಗಳನ್ನು ‘ಭೂಮಿಜಾ’ ಬ್ರ್ಯಾಂಡ್ನಡಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ’ ಎಂದರು.

ಯೋಜನಾ ಫಲಾನುಭವಿ ಚೆನ್ನಾದೇವಿ, ಅಗ್ರಹಾರದ ಕಾಂತಲಕ್ಷ್ಮಿ ಹಾಗೂ ಕಳ್ಳಿಪಾಳ್ಯದ ಶಾರದಮ್ಮ ಅವರು ನಾಲ್ಕು ವರ್ಷದ ವಿಶ್ವಾಸ್ ಯೋಜನೆಯಿಂದ ಆಗಿರುವ ಅನುಕೂಲದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಕಂಪನಿಯ ಪ್ರೊಗ್ರಾಮ್ ಮ್ಯಾನೇಜರ್ ಪಂಕಜ್ ಮೆಹ್ತಾ ಮಾತನಾಡಿದರು.

ಭೂಮಿ ಸಂಸ್ಥೆ ನಿರ್ದೇಶಕಿಯರಾದ ಗೀತಾರಾಣಿ, ಶ್ವೇತಾ ಮತ್ತು ಆರ್ಒಸಿಎಫ್ ಸಂಸ್ಥೆಯ ಕವಿತಾ ಇದ್ದರು.

ಸಂಪನ್ಮೂಲ ಕೇಂದ್ರ ಉದ್ಘಾಟನೆ: ಕಾರ್ಯಕ್ರಮಕ್ಕೆ ಮುನ್ನ ಬಿರವಾರದ ಅಶೋಕ್ ಅವರ ತೋಟದಲ್ಲಿ ಸ್ಥಾಪಿಸಿರುವ ಸಮುದಾಯ ಸಂಪನ್ಮೂಲ ಕೇಂದ್ರವನ್ನು ಕಂಪನಿ ಅಧಿಕಾರಿಗಳು ಉದ್ಘಾಟಿಸಿದರು. ಮಹಿಳಾ ಸ್ವಸಹಾಯ ಸಂಘದ ಕಸ್ತೂರಿ ಅವರು, ಸಂಪನ್ಮೂಲ ಕೇಂದ್ರದಲ್ಲಿ ಉತ್ಪನ್ನಗಳ ತಯಾರಿಕಾ ಯಂತ್ರಗಳನ್ನು ಪರಿಚಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-14-1361378197

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.