ಶನಿವಾರ, ಜುಲೈ 24, 2021
25 °C

ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿರುವ ತಾಲ್ಲೂಕಿನ ಎಲ್ಲಾ 3,104 ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ರೋಟರಿ ಕ್ಲಬ್ ವತಿಯಿಂದ ಮಾಸ್ಕ್ ನೀಡಲಾಯಿತು.

ಪಟ್ಟಣದ ಬಿಇಒ ಕಚೇರಿಗೆ ಆಗಮಿಸಿದ ರೋಟರಿ ಬೆಂಗಳೂರು ಜೆ.ಪಿ. ನಗರ ಘಟಕ, ರೋಟರಿ ಬೆಂಗಳೂರು ಲಾಲ್‌ಬಾಗ್ ಘಟಕ, ರೋಟರಿ ಸಂಸ್ಥೆ ಚನ್ನಪಟ್ಟಣ ಘಟಕದ ಪದಾಧಿಕಾರಿಗಳು ತಾಲ್ಲೂಕಿನ 17 ಪರೀಕ್ಷಾ ಕೇಂದ್ರಗಳ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಉಚಿತವಾಗಿ ಎನ್-95 ಮಾಸ್ಕ್‌ಗಳನ್ನು ಬಿಇಒ ನಾಗರಾಜು ಅವರಿಗೆ ಹಸ್ತಾಂತರಿಸಿದರು.

ರೋಟರಿ ಜೆ.ಪಿ. ನಗರ ಸಂಸ್ಥೆಯ ಅಧ್ಯಕ್ಷ ಎಚ್.ಆರ್. ಕುಮಾರಸ್ವಾಮಿ ಮಾತನಾಡಿ, ರೋಟರಿ ಸಂಸ್ಥೆಯು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಬಡವರು, ನಿರ್ಗತಿಕರು ಸೇರಿದಂತೆ ಹಲವರಿಗೆ ಸಹಾಯಹಸ್ತ ಚಾಚುತ್ತಾ ಬಂದಿದೆ. ಬಹುಮುಖ್ಯವಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದರು.

ರೋಟರಿ ಲಾಲ್‌ಬಾಗ್ ಸಂಸ್ಥೆ ಅಧ್ಯಕ್ಷ ಎಸ್. ಗೌತಮ್, ರೋಟರಿ ಚನ್ನಪಟ್ಟಣ ಸಂಸ್ಥೆ ಅಧ್ಯಕ್ಷ ಬಿ.ಎಂ. ನಾಗೇಶ್, ತಾಲ್ಲೂಕಿನ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿಗಳಾದ ಯೋಗೇಶ್ ಚಕ್ಕೆರೆ, ಶಿಕ್ಷಣ ಸಂಯೋಜಕ ಗಂಗಾಧರಮೂರ್ತಿ, ತಮ್ಮಣ್ಣ, ರಾಜಲಕ್ಷ್ಮಿ, ಟಿಪಿಇಒ ಶಿವಣ್ಣ, ರೋಟರಿ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.