ಮ್ಯಾಕ್ಸಿ ಕ್ಯಾಬ್‌ ಡಿಕ್ಕಿ: ಬಾಲಕ ಸಾವು

ಮಂಗಳವಾರ, ಜೂಲೈ 16, 2019
23 °C

ಮ್ಯಾಕ್ಸಿ ಕ್ಯಾಬ್‌ ಡಿಕ್ಕಿ: ಬಾಲಕ ಸಾವು

Published:
Updated:
Prajavani

ಕುದೂರು(ಮಾಗಡಿ): ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಗಾರ್ಮೆಂಟ್ಸ್ ಮ್ಯಾಕ್ಸಿ ಕ್ಯಾಬ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ರಾಷ್ಟ್ರೀಯ ಹೆದ್ದಾರಿ 75ರ ಮರೂರು ಹ್ಯಾಂಡ್‌ಪೋಸ್ಟ್ ಬಳಿ ಸರ್ವಿಸ್ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಮೃತ ಬಾಲಕ ಆಂಜನೇಯಸ್ವಾಮಿ ದೇವಾಲಯದ ಅರ್ಚಕ ಸೂರ್ಯನಾರಾಯಣ ಅವರ ಪುತ್ರ ಶಶಾಂಕ್(16) ಎಂದು ಗುರುತಿಸಲಾಗಿದೆ.

ಚಿಕ್ಕಪ್ಪ ಸಂಪತ್ ಶ್ರೀವತ್ಸ ಅವರೊಂದಿಗೆ ಶಶಾಂಕ್‌ ಆಂಜನೇಯಸ್ವಾಮಿ ಪೂಜೆಗೆ ಮನೆಯಿಂದ ಸ್ಕೂಟಿಯಲ್ಲಿ ತೆರಳುತ್ತಿದ್ದರು. ರಸ್ತೆ ಬದಿಯ ಗಿಡದಲ್ಲಿದ್ದ ಹೂವು ಕಿತ್ತು ತರಲು ಅವರ ಚಿಕ್ಕಪ್ಪ ಸ್ಕೂಟಿ ನಿಲ್ಲಿಸಿ ಹೋಗಿದ್ದರು. ರಸ್ತ ಬದಿ ನಿಂತಿದ್ದ ಶಶಾಂಕ್‌ಗೆ ಎದುರಿನಿಂದ ಬಂದ ಮ್ಯಾಕ್ಸಿ ಕ್ಯಾಬ್ ಡಿಕ್ಕಿ ಹೊಡೆದಿದೆ.

ಶಶಾಂಕ್‌ ಮೇಲುಕೋಟೆ ಸಂಸ್ಕೃತ ಪಾಠ ಶಾಲೆಯಲ್ಲಿ ವೇದ ಅಧ್ಯಯನ ಕಲಿಯುತ್ತಿದ್ದ. ರಜೆ ಇದ್ದ ಕಾರಣ ಗ್ರಾಮಕ್ಕೆ ಬಂದಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !