ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧಿ, ಮಾಸ್ಕ್‌ ಪೂರೈಕೆ

Last Updated 31 ಮೇ 2021, 2:24 IST
ಅಕ್ಷರ ಗಾತ್ರ

ಚನ್ನಪಟ್ಟಣ: ಪಟ್ಟಣದ ಕೋವಿಡ್ ಕೇರ್ ಕ್ಲಿನಿಕ್ ಸಂಸ್ಥೆಯ ಪದಾಧಿಕಾರಿಗಳು ಆಯುಷ್ ಇಲಾಖೆ ಸಹಕಾರದೊಂದಿಗೆ ನಿರ್ಗತಿಕರು, ಕಡು ಬಡವರು, ಕೂಲಿ ಕಾರ್ಮಿಕರು ಹಾಗೂ ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಇಮ್ಯುನಿಟಿ ಬೂಸ್ಟ್, ಅರಾಕ್ ಇ ಅಜೀಬ್ ಔಷಧಿ ಮತ್ತು ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು.

ಸಂಸ್ಥೆಯ ಅಧ್ಯಕ್ಷ ಸೈಯದ್ ಇಸಾಕಿ ಮಾತನಾಡಿ, ಲಾಕ್‌ಡೌನ್‌ನಿಂದ ನಗರ ಪ್ರದೇಶದಲ್ಲಿ ಒಪ್ಪತ್ತಿನ ಊಟಕ್ಕೂ ಪರದಾಡುತ್ತಿರುವ ನಿರ್ಗತಿಕರು, ಕಡು ಬಡವರು, ಕೂಲಿ ಕಾರ್ಮಿಕರು, ಅವಶ್ಯಕತೆಯುಳ್ಳ ಕುಟುಂಬಗಳು ಮತ್ತು ಕೋವಿಡ್ ಸೋಂಕಿಗೆ ಒಳಗಾದವರಿಗೆ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ ಎಂದರು.

ಕೋವಿಡ್‌ ಸೋಂಕಿಗೆ ಒಳಗಾಗಿ ಹೋಂ ಕ್ವಾರಂಟೈನ್‌ನಲ್ಲಿ ಇರುವವರಿಗೆ, ವೈದ್ಯರು ಮತ್ತು ಪೊಲೀಸರಿಗೆ ನಮ್ಮ ಸಂಸ್ಥೆಯಿಂದ ಕೋವಿಡ್ ವೈದ್ಯಕೀಯ ಕಿಟ್ ಮತ್ತು ಅಗತ್ಯವುಳ್ಳವರಿಗೆ ಕಡಿಮೆ ದರದಲ್ಲಿ ಆಮ್ಲಜನಕ, ಪಿಪಿಇ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದುತಿಳಿಸಿದರು.

ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ ವ್ಯಕ್ತಿಗಳ ಶವಗಳನ್ನು ನಮ್ಮ ಸಂಸ್ಥೆಯ ತಂಡ ಸರ್ಕಾರದ ಮಾರ್ಗಸೂಚಿಯಂತೆ ಆಸ್ಪತ್ರೆಯಿಂದ ತಂದು ಶವ ಸಂಸ್ಕಾರ ಮಾಡುತ್ತಾ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಅಗತ್ಯವುಳ್ಳವರು ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಸಂಸ್ಥೆಯ ಪ್ರಮುಖರಾದ ಡಾ.ಸಲ್ಮಾ ಬಾನು, ಸಂಸ್ಥೆಯಲ್ಲಿ 13 ಮಂದಿ ಸಮಾನ ಮನಸ್ಕರಿದ್ದು ಯಾವುದೇ ಪಕ್ಷ, ಜಾತಿ, ಧರ್ಮ ಎನ್ನದೇ ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ಹಿರಿಯ ಫಾರ್ಮಸಿಸ್ಟ್ ಸಾದಿಕ್ ವಾರ್, ಸಂಸ್ಥೆಯ ಪದಾಧಿಕಾರಿಗಳಾದ ಸೈಯದ್ ಜಾವಿದ್, ಸೈಯದ್ ಕುಂದ್ ಮಿರಿ, ಎಂಜಿನಿಯರ್ ಸಾದಿಕ್, ನಗರಸಭಾ ಸದಸ್ಯ ಮತೀನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT