ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಯಾತ್ರೆ 3ನೇ ದಿನ: ಡಿಕೆಶಿ ಮೌನ, ಮೈಸೂರಿಗರ ಜೊತೆ ಸಿದ್ದರಾಮಯ್ಯ ಹೆಜ್ಜೆ

Last Updated 11 ಜನವರಿ 2022, 19:31 IST
ಅಕ್ಷರ ಗಾತ್ರ

ರಾಮನಗರ: ಮೇಕೆದಾಟು ಪಾದಯಾತ್ರೆಯ ಮೂರನೇ ದಿನವಾದ ಮಂಗಳವಾರ ಮೈಸೂರು ಭಾಗದ ಸಾವಿರಾರು ಜನರು ಪಾಲ್ಗೊಂಡಿದ್ದು, ತವರೂರಿನ ಕಾರ್ಯಕರ್ತರ ಜೊತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉತ್ಸಾಹದಿಂದ ಹೆಜ್ಜೆ ಹಾಕಿದರು.

ಪಾದಯಾತ್ರೆಯ ಮೊದಲ ದಿನವಾದ ಭಾನುವಾರ ಅನಾರೋಗ್ಯದ ಕಾರಣ ಅರ್ಧಕ್ಕೆ ವಾಪಸ್ ಆಗಿದ್ದ ಸಿದ್ದರಾಮಯ್ಯ ಸೋಮವಾರ ಇಲ್ಲಿ ಕಾಣಿಸಿಕೊಳ್ಳಲಿಲ್ಲ. ಮಂಗಳವಾರ ಬೆಳಿಗ್ಗೆ ಕನಕಪುರಕ್ಕೆ ಬಂದ ಅವರು ಸುದ್ದಿಗೋಷ್ಠಿ ನಡೆಸಿ ನಡಿಗೆ ಆರಂಭಿಸುವ ಹೊತ್ತಿಗೆ ಬೆಳಿಗ್ಗೆ 11 ಆಗಿತ್ತು. ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ನಗರದಲ್ಲಿ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು. ಅದಾಗಲೇ ಸೂರ್ಯ ನೆತ್ತಿ ಮೇಲೆ ಬಂದಿದ್ದು, ಕನಕಪುರ ಹೊರವಲಯದಿಂದ ಇಬ್ಬರೂ ಬೆವರು ಒರೆಸಿಕೊಳ್ಳುತ್ತಲೇ ಹೆಜ್ಜೆ ಹಾಕಿದರು.

ಪಾದಯಾತ್ರೆ ವೇಳೆ ಕಾರ್ಯಕರ್ತರ ನೂಗುನುಗ್ಗಲು ಏರ್ಪಟ್ಟಿದ್ದು, ಸಂಸದ ಡಿ.ಕೆ. ಸುರೇಶ್ ತಾವೇ ದಾರಿ ಮಾಡಿಕೊಡಲು ಮುಂದಾದರು. ಈ ವೇಳೆ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್ ಅಡ್ಡ ಬಂದರು. ಇದರಿಂದ ಸಿಟ್ಟಿಗೆದ್ದ ಸುರೇಶ್‌ ಅವರ ಕತ್ತಿನ ಪಟ್ಟಿ ಎಳೆದು ಪಕ್ಕಕ್ಕೆ ಸರಿಸಿ, ಅಡ್ಡ ಬರಬೇಡ ಎಂಬ ಎಚ್ಚರಿಕೆಯನ್ನೂ ನೀಡಿದರು.

ಮಂಗಳವಾರ ಹಿಂದಿನ ದಿನಕ್ಕಿಂತ ಹೆಚ್ಚು ಸಂಖ್ಯೆಯ ಜನರು ಸೇರಿದ್ದರು. ಕನಕಪುರ ವೃತ್ತದಲ್ಲಿ ಜನಸಾಗರವೇ ನೆರೆದಿದ್ದು, ನಾಯಕರಿಗೆ ಕ್ರೇನ್‌ ಮೂಲಕ ಸೇಬಿನ ಹಾರ ಹಾಕಲು ಪೈಪೋಟಿ ನಡೆಯಿತು. ಮಧ್ಯಾಹ್ನ 3ರ ಸುಮಾರಿಗೆ 8 ಕಿ.ಮೀ. ದೂರ ಕ್ರಮಿಸಿ ಗಾಣಾಳು ಗ್ರಾಮಕ್ಕೆ ಬಂದ ಸಿದ್ದರಾಮಯ್ಯ, ಡಿಕೆಶಿ ಅಲ್ಲಿ ಮುದ್ದೆ ಸವಿದು ಕೆಲ ಕಾಲ ನಿದ್ದೆಯ ಮೊರೆ ಹೋದರು. ಕನಕಪುರ ತಾಲ್ಲೂಕಿನ ಗಡಿಗ್ರಾಮ ಚಿಕ್ಕೇನಹಳ್ಳಿಯಲ್ಲಿ ದಿನದ ಪಾದಯಾತ್ರೆ ಮುಕ್ತಾಯ ಆಗುವ ಹೊತ್ತಿಗೆ ರಾತ್ರಿ 10 ಆಗಿತ್ತು. ದಣಿದು ಬಂದ ಸಾವಿರಾರು ಮಂದಿಗೆ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ಬುಧವಾರ ಇಲ್ಲಿಂದ ರಾಮನಗರ ಪಟ್ಟಣದವರೆಗೆ ಪಾದಯಾತ್ರೆ ಮುಂದುವರಿಯಲಿದೆ.

ಮೈಸೂರು ಭಾಗದ ಕಾಂಗ್ರೆಸ್ ಶಾಸಕರು, ಮುಖಂಡರು ಪಾದಯಾತ್ರೆಗೆ ಸಾಥ್‌ ನೀಡಿದರು. ಕಿಕ್ಕಿರಿದ ಜನರ ನಡುವೆ ಕೋವಿಡ್ ನಿಯಮ ಪಾಲನೆ ಮರೀಚಿಕೆಯಾಗಿಯೇ ಉಳಿದುಹೋಯಿತು. ಕಾರ್ಯಕರ್ತರು ಪಾದಯಾತ್ರೆಗೆ ಜೋಡೆತ್ತು, ಮೇಕೆಯನ್ನೂ ಕರೆತಂದಿದ್ದರು. ಪಾದಯಾತ್ರೆಯಲ್ಲಿ ಶಾಲೆ–ಕಾಲೇಜು ವಿದ್ಯಾರ್ಥಿಗಳೂ ಕಾಣಿಸಿಕೊಂಡಿದ್ದು, ಡಿಕೆಶಿ ಜೊತೆ ಸೆಲ್ಫಿ ತೆಗೆಸಿಕೊಂಡರು. ಕನಕಪುರ–ರಾಮನಗರ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ ಆಗಿತ್ತು.

ಅದಾಗಲೇ ಸೂರ್ಯ ನೆತ್ತಿ ಮೇಲೆ ಬಂದಿದ್ದು, ಕನಕಪುರ ಹೊರವಲಯದಿಂದ ಇಬ್ಬರೂ ಬೆವರು ಒರೆಸಿಕೊಳ್ಳುತ್ತಲೇ ಹೆಜ್ಜೆ ಹಾಕಿದರು.ಪಾದಯಾತ್ರೆ ವೇಳೆ ಕಾರ್ಯಕರ್ತರ ನೂಗುನುಗ್ಗಲು ಏರ್ಪಟ್ಟಿದ್ದು, ಸಂಸದಡಿ.ಕೆ. ಸುರೇಶ್ ತಾವೇ ದಾರಿ ಮಾಡಿ
ಕೊಡಲು ಮುಂದಾದರು. ಈ ವೇಳೆ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್‌ ನಲಪಾಡ್ ಅಡ್ಡ ಬಂದರು. ಇದರಿಂದ ಸಿಟ್ಟಿಗೆದ್ದ ಸುರೇಶ್‌ ಅವರ ಕತ್ತಿನ ಪಟ್ಟಿ ಎಳೆದು ಪಕ್ಕಕ್ಕೆ ಸರಿಸಿ, ಅಡ್ಡ ಬರಬೇಡ ಎಂಬ ಎಚ್ಚರಿಕೆಯನ್ನೂ ನೀಡಿದರು.

ಮಂಗಳವಾರ ಹಿಂದಿನ ದಿನಕ್ಕಿಂತ ಹೆಚ್ಚು ಸಂಖ್ಯೆಯ ಜನರು ಸೇರಿದ್ದರು. ಕನಕಪುರ ವೃತ್ತದಲ್ಲಿ ಜನಸಾಗರವೇ ನೆರೆದಿದ್ದು, ನಾಯಕರಿಗೆ ಕ್ರೇನ್‌ ಮೂಲಕ ಸೇಬಿನ ಹಾರ ಹಾಕಲು ಪೈಪೋಟಿ ನಡೆಯಿತು. ಮಧ್ಯಾಹ್ನ 3ರ ಸುಮಾರಿಗೆ 8 ಕಿ.ಮೀ. ದೂರ ಕ್ರಮಿಸಿ ಗಾಣಾಳು ಗ್ರಾಮಕ್ಕೆ ಬಂದ ಸಿದ್ದರಾಮಯ್ಯ, ಡಿಕೆಶಿ ಅಲ್ಲಿ ಮುದ್ದೆ ಸವಿದು ಕೆಲ ಕಾಲ ನಿದ್ದೆಯ ಮೊರೆ ಹೋದರು. ಕನಕಪುರ ತಾಲ್ಲೂಕಿನ ಗಡಿಗ್ರಾಮ ಚಿಕ್ಕೇನಹಳ್ಳಿಯಲ್ಲಿ ದಿನದ ಪಾದಯಾತ್ರೆ ಮುಕ್ತಾಯ ಆಗುವ ಹೊತ್ತಿಗೆ ರಾತ್ರಿ 10 ಆಗಿತ್ತು. ದಣಿದು ಬಂದ ಸಾವಿರಾರು ಮಂದಿಗೆ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ಬುಧವಾರ ಇಲ್ಲಿಂದ ರಾಮನಗರ ಪಟ್ಟಣದವರೆಗೆ ಪಾದಯಾತ್ರೆ ಮುಂದುವರಿಯಲಿದೆ.

ಮೈಸೂರು ಭಾಗದ ಕಾಂಗ್ರೆಸ್ ಶಾಸಕರು, ಮುಖಂಡರು ಪಾದಯಾತ್ರೆಗೆ ಸಾಥ್‌ ನೀಡಿದರು. ಕಿಕ್ಕಿರಿದ ಜನರ ನಡುವೆ ಕೋವಿಡ್ ನಿಯಮ ಪಾಲನೆ ಮರೀಚಿಕೆಯಾಗಿಯೇ ಉಳಿದುಹೋಯಿತು. ಕಾರ್ಯಕರ್ತರು ಪಾದಯಾತ್ರೆಗೆ ಜೋಡೆತ್ತು, ಮೇಕೆಯನ್ನೂ ಕರೆ
ತಂದಿದ್ದರು. ಪಾದಯಾತ್ರೆಯಲ್ಲಿ ಶಾಲೆ–ಕಾಲೇಜು ವಿದ್ಯಾರ್ಥಿಗಳೂ ಕಾಣಿಸಿಕೊಂಡಿದ್ದು, ಡಿಕೆಶಿ ಜೊತೆ ಸೆಲ್ಫಿ ತೆಗೆಸಿಕೊಂಡರು. ಕನಕಪುರ–ರಾಮನಗರ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ ಆಗಿತ್ತು.

41 ಜನರ ವಿರುದ್ಧ ಎಫ್‌ಐಆರ್‌

ಎರಡನೇ ದಿನ ದೊಡ್ಡಾಲಹಳ್ಳಿಯಿಂದ ಕನಕಪುರ ಪಟ್ಟಣದವರೆಗೆ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡ 41 ಜನರ ವಿರುದ್ಧ ಸಾತನೂರು ಪೊಲೀಸರು 'ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ'ದ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್‌ ಅವರನ್ನು ಪ್ರಮುಖ ಆರೋಪಿಗಳನ್ನಾಗಿಸಲಾಗಿದೆ. ಉಳಿದಂತೆ ಕೃಷ್ಣ ಭೈರೇಗೌಡ, ಎಚ್‌. ಆಂಜನೇಯ, ನಾರಾಯಣಸ್ವಾಮಿ, ಮೋಟಮ್ಮ, ಪಿ.ಟಿ. ಪರಮೇಶ್ವರ ನಾಯ್ಕ, ಧ್ರುವನಾರಾಯಣ, ಆರ್. ನರೇಂದ್ರ ಸ್ವಾಮಿ, ಪುಟ್ಟರಂಗಶೆಟ್ಟಿ, ವೀಣಾ ಅಚ್ಚಯ್ಯ, ಲಕ್ಷ್ಮಿ ಹೆಬ್ಬಾಳ್ಕರ್, ಮಧು ಬಂಗಾರಪ್ಪ, ಪ್ರಿಯಾಕೃಷ್ಣ, ಎಂ.ಬಿ. ಪಾಟೀಲ, ಸಲೀಂ ಅಹಮ್ಮದ್, ಶರತ್ ಬಚ್ಚೇಗೌಡ, ಪ್ರಿಯಾಂಕ್‌ ಖರ್ಗೆ, ಉಮಾಶ್ರೀ, ಬಿ.ಕೆ. ಹರಿಪ್ರಸಾದ್, ಪದ್ಮಾವತಿ, ಎಚ್.ಡಿ. ರಂಗನಾಥ್, ಟಿ.ಬಿ. ಜಯಚಂದ್ರ ಮತ್ತಿತರ ಕಾಂಗ್ರೆಸ್ ಮುಖಂಡರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿಸಲಾಗಿದೆ.

ಕಾಂಗ್ರೆಸ್ ಇಡೀ ರಾಜ್ಯದ ಜನರನ್ನು ರಾಮನಗರಕ್ಕೆ ಕರೆತಂದು ಪಾದಯಾತ್ರೆ ಮೂಲಕ ಕೋವಿಡ್ ಹಂಚುತ್ತಿದೆ. ಇದು ಜಾಮೀನು ರಹಿತ ಅಪರಾಧವಾದರೂ ಕಾನೂನು ಸುವ್ಯವಸ್ಥೆ ಕಾರಣಕ್ಕೆ ಯಾರನ್ನೂ ಬಂಧಿಸಿಲ್ಲ. ಪರಿಸ್ಥಿತಿ ಕೈ ಮೀರಿದರೆ ಕಠಿಣ ಕ್ರಮ ಅನಿವಾರ್ಯ

- ಡಾ. ಸಿ.ಎನ್. ಅಶ್ವತ್ಥನಾರಾಯಣ,ಉನ್ನತ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT