ಶನಿವಾರ, ಸೆಪ್ಟೆಂಬರ್ 21, 2019
21 °C

ಸದಸ್ಯತ್ವ ಅಭಿಯಾನ ನಾಳೆಯಿಂದ

Published:
Updated:
Prajavani

ರಾಮನಗರ: ಕುರುಬರ ಸಂಘವನ್ನು ಮತ್ತಷ್ಟು ಬಲಗೊಳಿಸಲಾಗುವುದು ಎಂದು ಕುರುಬರ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ಚನ್ನಮಾನಹಳ್ಳಿ ನಾಗೇಶ್ ಹೇಳಿದರು.

ಇಲ್ಲಿನ ಕುಂಬಾಪುರ ಬಳಿಯಿರುವ ಕುರುಬರ ಸಂಘದ ಕಚೇರಿ ಆವರಣದಲ್ಲಿ ಭಾನುವಾರ ನಡೆದ ಸಂಘದ ಸದಸ್ಯತ್ವ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ 30 ಸಾವಿರಕ್ಕೂ ಹೆಚ್ಚು ಕುರುಬ ಸಮುದಾಯದ ಜನರಿದ್ದಾರೆ. ಸರ್ಕಾರದಿಂದ ಕುರುಬ ಸಮಾಜದವರಿಗೆ ಇರುವ ಸೌಲಭ್ಯ, ಯೋಜನೆಗಳ ಬಗ್ಗೆ ತಿಳಿಸಿಕೊಡಲಾಗುವುದು. ಇದೇ 10 ರಂದು ತಾಲ್ಲೂಕಿನಲ್ಲಿ ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ಬಸವರಾಜು, ಖಜಾಂಚಿ ಚನ್ನಮಾನಹಳ್ಳಿ ಉಮೇಶ್, ಸಂಘಟನಾ ಕಾರ್ಯದರ್ಶಿ ಅಂಜನಾಪುರ ರೇವಣ್ಣ, ನಿರ್ದೇಶಕರಾದ ಚಿಕ್ಕೇನಹಳ್ಳಿ ಚಂದ್ರಣ್ಣ, ಕುಂಬಾಪುರ ಹರಳಪ್ಪ, ಸಿದ್ದಪ್ಪ, ನಾರಾಯಣಪ್ಪ, ಬಿಡದಿ ಕಗ್ಗಲ್ಲಯ್ಯ, ಆರ್. ರೇಣುಕಪ್ಪ, ನಾಗರಾಜು, ದೊಳ್ಳಯ್ಯ, ರಾಜೇಶ್ ಇತರರು ಇದ್ದರು.

Post Comments (+)