ಮಾಗಡಿ: ತಾಲ್ಲೂಕಿನ ಮುಳಕಟ್ಟಮ್ಮನ ಪಾಳ್ಯದ ಕ್ಷೇತ್ರದಲ್ಲಿ ನೂತನ ರಥದ ಪ್ರತಿಷ್ಠಾಪನ ಮಹೋತ್ಸವ ಹಾಗೂ ಮುಳಕಟ್ಟಮ್ಮ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಗೃಹ ಸಚಿವ ಡಾ.ಜಿ. ಪರಮೇಶ್ವರ ಮತ್ತು ಅವರ ಪತ್ನಿ ಕನ್ನಿಕಾ ಪರಮೇಶ್ವರಿ ಚಾಲನೆ ನೀಡಿದರು.

ಮುಳಕಟ್ಟಮ್ಮ ಪರಮೇಶ್ವರ ಅವರ ವಂಶಸ್ಥರ ಮನೆದೇವತೆ. ಮಾರ್ಚ್ 26ರ ರಾತ್ರಿ 10ಕ್ಕೆ ಮಡೆ ಆರತಿ ಮಾರ್ಚ್ 27ರಂದು ಬೆಳಿಗ್ಗೆ 9ಕ್ಕೆ ಮುಳಕಟ್ಟಮ್ಮ ಬ್ರಹ್ಮರಥೋತ್ಸವ ನಡೆಯಲಿದ್ದು ಪರಮೇಶ್ವರ ಅವರು ಚಾಲನೆ ನೀಡುವರು. ಸಂಜೆ 6 ಗಂಟೆಯಿಂದ ಸಂಗೀತ ಸಂಜೆ ನಡೆಯಲಿದೆ. ರಾತ್ರಿ 12 ಗಂಟೆಗೆ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. 28ರಂದು ರಾತ್ರಿ 7ಕ್ಕೆ ಚೌಡೇಶ್ವರಿ ಮಹೋತ್ಸವಗಳು ನಡೆಯಲಿವೆ.

ಬ್ರಹ್ಮ ರಥೋತ್ಸವದ ಕಾರ್ಯಕ್ರಮದಲ್ಲಿ ತುಮಕೂರಿನ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ಜಿ.ಎಸ್. ಆನಂದ್, ಸಂಸದ ಡಿ.ಕೆ. ಸುರೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಶಾಸಕ ಎಚ್.ಸಿ. ಬಾಲಕೃಷ್ಣ, ಮಾಜಿ ಶಾಸಕ ಎ. ಮಂಜುನಾಥ್, ಇತರರು ಭಾಗವಹಿಸಲಿದ್ದಾರೆ.

ಬೆಸ್ಕಾಂ ಮಾಜಿ ನಿರ್ದೇಶಕ ಬಿ.ವಿ ಜಯರಾಮ, ಎಚ್.ಎಂ. ರಂಗಯ್ಯ, ಸಣ್ಣ ಹುಚ್ಚಮ್ಮ, ಪೂಜಾ ರಂಗಯ್ಯ, ತಿಮ್ಮಸಂದ್ರ ಚೌಡಯ್ಯ, ಪ್ರಧಾನ ಅರ್ಚಕ ಮಹೇಶ್, ಅರ್ಚಕರಾದ ಗಂಗಾಧರಯ್ಯ ರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.