ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹನುಮೇಗೌಡ ಸೇರಿ ಮೂವರಿಗೆ ಸಚಿವ ಅಭಿನಂದನೆ ಪತ್ರ

ಭೂ ಮಾಪನ ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಣೆ, ಪ್ರಗತಿಗೆ ಮೆಚ್ಚುಗೆ
Published : 28 ಸೆಪ್ಟೆಂಬರ್ 2024, 7:08 IST
Last Updated : 28 ಸೆಪ್ಟೆಂಬರ್ 2024, 7:08 IST
ಫಾಲೋ ಮಾಡಿ
Comments

ರಾಮನಗರ: ಭೂ ಮಾಪನ ಇಲಾಖೆಯಲ್ಲಿ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಒದಗಿಸಿ, ತಮ್ಮ ವ್ಯಾಪ್ತಿಯಲ್ಲಿ ಉತ್ತಮ ಪ್ರಗತಿ ಸಾಧಿಸಿದ ಜಿಲ್ಲೆಯ ಭೂ ದಾಖಲೆಗಳ ಉಪ ನಿರ್ದೇಶಕ ಹನುಮೇಗೌಡ ಬಿ.ಆರ್., ಚನ್ನಪಟ್ಟಣದ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿಯ ಪರವಾನಗಿ ಭೂ ಮಾಪಕ ಮಲ್ಲೇಶ್ ಹಾಗೂ ರಾಮನಗರದ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿಯ ಪಿ. ರಕ್ಷಿತ್ ಅವರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಭಿನಂದನಾ ಪತ್ರ ನೀಡಿದರು.

ಬೆಂಗಳೂರಿನ ವಿಕಾಸ ಸೌಧದಲ್ಲಿ ಶುಕ್ರವಾರ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಹಾಗೂ ಅಭಿನಂದನಾ ಸಭೆಯಲ್ಲಿ ಅಭಿನಂದನಾ ಪತ್ರ ನೀಡಿದ ಸಚಿವರು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲಾಖೆಯ ಕಾರ್ಯಚಟುವಟಿಕೆಗಳ ಪೈಕಿ ಮೋಜಿಣಿ ತಂತ್ರಾಂಶದಲ್ಲಿ ವಿಲೆಯಾದ ಪ್ರಗತಿ, ಆಕಾರಬಂದ್ ಗಣಕೀಕರಣ, ದಾಖಲೆಗಳ ಪುನರ್‌ನಿರ್ಮಾಣ ಹಾಗೂ ಕೆರೆ, ರಾಜಕಾಲುವೆ, ಅರಣ್ಯ ಭೂಮಿ, ಸರ್ಕಾರಿ ಜಮೀನಿನ ಅಳತೆ, ರೆವಿನ್ಯೂ ಕೋರ್ಟ್‌ ಕೇಸ್‌ ಮಾನಿಟರಿಂಗ್‌ ಸಿಸ್ಟಮ್‌ನಲ್ಲಿ (ಆರ್‌ಸಿಸಿಎಂಎಸ್‌) ಜಿಲ್ಲೆಯಲ್ಲಿ ಆಗಿರುವ ಪ್ರಗತಿಯನ್ನು ಮಾನದಂಡವಾಗಿ ಇಟ್ಟುಕೊಂಡು ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿಯನ್ನು ಅಳೆದು ಅಭಿನಂದನೆಗೆ ಆಯ್ಕೆ ಮಾಡಲಾಗಿತ್ತು.

ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರಗತಿ ಸಾಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಹೆಸರನ್ನು ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರು ಗುರುತಿಸಿ, ಸಚಿವರಿಂದ ಅಭಿನಂದನೆಗೆ ಹೆಸರು ಶಿಫಾರಸು ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT