ರಾಮನಗರ: ‘ಈ ದೇಶದ ಸಂವಿಧಾನದಿಂದ ಕೇವಲ ಶೋಷಿತ ಸಮುದಾಯದವರಿಗೆ ಮಾತ್ರ ಅನುಕೂಲವಾಗಿದೆ ಎಂಬ ಮಿಥ್ಯೆಯನ್ನು ಸಂವಿಧಾನ ಜಾರಿಯಾದ ದಿನದಿಂದಲೂ ವ್ಯವಸ್ಥಿತವಾಗಿ ಬಿತ್ತಲಾಗಿದೆ. ಸಂವಿಧಾನ ಈ ದೇಶದ ಪ್ರತಿಯೊಬ್ಬರಿಗೂ ಸೇರಿದ್ದು. ಎಲ್ಲರೂ ಅದರ ಫಲಾನುಭವಿಗಳೇ ಎಂಬ ಸಂವಿಧಾನ ಪ್ರಜ್ಞೆಯನ್ನು ದೇಶದ ಬಹುಜನರಲ್ಲಿ ಬಿತ್ತಬೇಕಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಜಾನಪದ ಲೋಕದ ದೊಡ್ಡಮನೆಯಲ್ಲಿ ಅಂಬೇಡ್ಕರ್ ಬ್ರಿಗೇಡ್– ಕರ್ನಾಟಕ ಹಮ್ಮಿಕೊಂಡಿದ್ದ ‘ಸಂವಿಧಾನವೇ ಬೆಳಕು- ಅಂಬೇಡ್ಕರರೇ ದಿಕ್ಕು’ ಕುರಿತ ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆಗಳ ಕುರಿತ ರಾಜ್ಯಮಟ್ಟದ ಎರಡು ದಿನಗಳ ಅಧ್ಯಯನ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಂವಿಧಾನದಿಂದ ದಲಿತೇತರರಿಗೆ ಇರುವ ಅನುಕೂಲಗಳು ಹಾಗೂ ಇದುವರೆಗೆ ಅವರು ಏನೆಲ್ಲಾ ಪಡೆದುಕೊಂಡು ಸಬಲರಾಗಿದ್ದಾರೆ ಎಂಬುದನ್ನು ಅಭಿಯಾನದ ರೂಪದಲ್ಲಿ ತಿಳಿ ಹೇಳಬೇಕು. ಬಹುಜನರು ಕಳೆದುಕೊಂಡಿರುವ ಅಧಿಕಾರವನ್ನು ಮರಳಿ ಪಡೆಯಲು ಅವರನ್ನೂ ಜೊತೆಯಾಗಿಸಿಕೊಳ್ಳಬೇಕು’ ಎಂದರು.

‘ಈ ದೇಶದ ಬಹುಸಂಖ್ಯಾತ ಸಮುದಾಯಗಳ ಸ್ವಾಮೀಜಿಗಳು, ಬುದ್ದಿಜೀವಿಗಳು ಹಾಗೂ ವಿದ್ಯಾರ್ಥಿಗಳಿಗೆ ಇಂತಹ ಶಿಬಿರ ಆಯೋಜಿಸಬೇಕು. ಎಲ್ಲರೂ ಪರಸ್ಪರ ಬೆರೆತಾಗ ಮಾತ್ರ, ನಮ್ಮ ನಡುವೆ ಇರುವ ಅಂತರ ತಗ್ಗಿ ಒಂದಾಗಿ ಹೋರಾಡಲು ಸಾಧ್ಯ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಸಂವಿಧಾನವೇ ದಿಕ್ಸೂಚಿ ಎಂಬುದನ್ನು ಮನವರಿಕೆ ಮಾಡಿ ಕೊಡಬೇಕು’ ಎಂದು ತಿಳಿಸಿದರು.

‘ನಮ್ಮ ಗುರಿ ಸಾಕಾರಾಗಿ ಸಾಂಸ್ಕೃತಿಕ ಚಳವಳಿಯನ್ನು ಕಟ್ಟಬೇಕು. ಯುವ ಮನಸ್ಸುಗಳಲ್ಲಿ ಅಂಬೇಡ್ಕರ್ ಚಿಂತನೆಗಳನ್ನು ಬೆಳೆಸಬೇಕು. ಕಾಲಕ್ಕೆ ತಕ್ಕಂತೆ ನಮ್ಮ ಆದ್ಯತೆಗಳನ್ನು ಬದಲಿಸಿಕೊಳ್ಳಬೇಕು. ಸರ್ಕಾರಿ ನೌಕರಿಗೆ ಅಂಟಿಕೊಳ್ಳದೆ ಉದ್ಯಮಶೀಲತೆ ಬೆಳೆಸಿಕೊಳ್ಳಬೇಕು. ಸಂವಿಧಾನದ ಲಾಭ ಪಡೆದವರು ಮರಳಿ ಸಮಾಜಕ್ಕೆ ಹಿಂದಿರುಗಿಸಬೇಕು’ ಎಂದು ಹೇಳಿದರು.

ಅಂಬೇಡ್ಕರ್ ಬ್ರಿಗೇಡ್ನ ಡಾ. ಕೂಡ್ಲೂರು ರವಿಕುಮಾರ್, ‘ಈ ಶಿಬಿರ ಒಂದು ದಿನಕ್ಕೆ ಸೀಮಿತವಲ್ಲ. ಇದು ನಿರಂತರ. ಅದನ್ನು ಮುಂದುವರಿಸಿಕೊಂಡು ಹೋಗಲು ಅಂಬೇಡ್ಕರ್ ಬ್ರಿಗೇಡ್ ಕಟ್ಟಿದೆವು. ಇಂದು ರಾಮನಗರದಲ್ಲಿ ನಡೆದಿರುವ ಶಿಬಿರ, ಮುಂದೆ ರಾಜ್ಯಕ್ಕೆ ವಿಸ್ತರಿಸಲಿದೆ’ ಎಂದರು.

ಡಾ. ಸುರೇಶ್ ಗೌತಮ್ ಮಾತನಾಡಿ, ‘ಎಲ್ಲರ ಮನದಲ್ಲಿ ಬುದ್ದ, ಬಸವ ಹಾಗೂ ಅಂಬೇಡ್ಕರ್ ಅವರನ್ನು ಬೆಳಗಿಸುವ ಆಶಯದೊಂದಿಗೆ ಅಂಬೇಡ್ಕರ್ ಬ್ರಿಗೇಡ್ ಅಸ್ತಿತ್ವಕ್ಕೆ ಬಂದಿದೆ. ಬಹುಜನರ ಜಾಗೃತಿಯೇ ಇದರ ಉದ್ದೇಶವಾಗಿದೆ. ಅದಕ್ಕಾಗಿ ಯುವಜನರಿಗೆ ಅಂಬೇಡ್ಕರ್ ಚಿಂತನೆಗಳನ್ನು ಪರಿಚಯಿಸಲಾಗುತ್ತಿದೆ’ ಎಂದು ತಿಳಿಸಿದರು.

ಕೆಪಿಟಿಸಿಎಲ್ ನಿವೃತ್ತ ನಿರ್ದೇಶಕ ಬಿ.ಕೆ. ಉದಯ್ ಕುಮಾರ್ ಹಾಗೂ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಶಂಕರಪ್ಪ ಮಾತನಾಡಿದರು. ಬ್ರಿಗೇಡ್ನ ಡಾ. ಶಿವ ಬಸವರಾಜು, ಶೇಷಾದ್ರಿ, ಸಮತಾ ಸೈನಿಕ ದಳದ ಡಾ. ಜಿ. ಗೋವಿಂದಯ್ಯ ಹಾಗೂ ಇತರರು ಇದ್ದರು.

‘ಶೇ 3ರಷ್ಟಿರುವವರಿಗೆ ಶೇ 10ರಷ್ಟು ಮೀಸಲಾತಿ!’

‘ಮೀಸಲಾತಿ ವಿರೋಧಿಸಿಕೊಂಡೇ ಬಂದ ಈ ದೇಶದ ಶೇ 3ರಷ್ಟಿರುವ ಜನರಿಗೆ ಆರ್ಥಿಕವಾಗಿ ಹಿಂದುಳಿದ ವರ್ಗ ಎಂದು ಶೇ 10ರಷ್ಟು ಮೀಸಲಾತಿ ನೀಡುವ ಮೂಲಕ ಮೀಸಲಾತಿ ಆಶಯಕ್ಕೆ ಧಕ್ಕೆ ತರಲಾಗಿದೆ. ಅದಕ್ಕಾಗಿ ಯಾವುದೇ ಹೋರಾಟ ನಡೆಯಲಿಲ್ಲ ಆಯೋಗ ರಚನೆಯಾಗಲಿಲ್ಲ. ಆದರೂ ಅವರಿಗೆ ತಮ್ಮ ಜನಸಂಖ್ಯೆ ಮೀರಿ ಮೂರು ಪಟ್ಟು ಮೀಸಲಾತಿ ಸಿಕ್ಕಿತು. ಮನುವಾದದ ಈ ರಾಜಕಾರಣವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಪ್ರತಿ ವ್ಯಕ್ತಿಯೊಳಗೂ ಅಂಬೇಡ್ಕರ್ ಅವರನ್ನು ಬೆಳೆಸಬೇಕಿದೆ’ ಎಂದು ಚಿಂತಕ ಡಾ. ಚಂದ್ರಶೇಖರ್ ರಾಮೇನಹಳ್ಳಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.