ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಆರೋಪದಲ್ಲಿ ಹುರುಳಿಲ್ಲ

Last Updated 5 ಮೇ 2020, 17:06 IST
ಅಕ್ಷರ ಗಾತ್ರ

ಮಾಗಡಿ:ಬಸವನಪಾಳ್ಯದಲ್ಲಿ ನಡೆದ ಹಲ್ಲೆ ಯತ್ನ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಶಾಸಕರ ಆರೋ‍ಪದಲ್ಲಿ ಹುರುಳಿಲ್ಲ. ಹಾಲು ಉತ್ಪಾದಕರ ಸಹಕಾರ ಸಂಘ ಸೂಪರ್‌ ಸೀಡ್‌ ಆದ ಕುರಿತು ಅಲ್ಲಿನ ಯುವಕರು ಪ್ರಶ್ನಿಸಿದ್ದಾರೆಯೇ ಹೊರತು ಶಾಸಕರ ಅಭಿವೃದ್ಧಿ ಕಾಮಗಾರಿ ಬಗ್ಗೆ ಅಲ್ಲ ಎಂದು ಕಾಂಗ್ರೆಸ್‌ ಮುಖಂಡ ಎಚ್‌.ಸಿ.ಬಾಲಕೃಷ್ಣ ಹೇಳಿದರು.‌

ಬಾಚೇನಹಟ್ಟಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಉಚಿತ ಆಹಾರದ ಕಿಟ್‌ ವಿತರಿಸಿ ಅವರು ಮಾತನಾಡಿದ ಅವರು, ‘ಶಾಸಕನಾಗಿದ್ದಾಗ ಇಂತಹ ನೂರಾರು ಘಟನೆಗಳು ನಡೆದಿವೆ. ನಾನೆಂದೂ ಪೊಲೀಸರಿಗೆ ದೂರು ನೀಡಿಲ್ಲ. ಪರಿಸ್ಥಿತಿಯನ್ನು ಶಾಸಕ ಎ.ಮಂಜುನಾಥ್‌ ತಿಳಿಗೊಳಿಸುವ ಕೆಲಸ ಮಾಡಬೇಕಿತ್ತು’ ಎಂದು ಪ್ರತಿಕ್ರಿಯಿಸಿದರು.

‘20 ವರ್ಷದಿಂದ ಗ್ರಾಮದಲ್ಲಿ ರಸ್ತೆ ಆಗಿಲ್ಲ ಎಂದುಶಾಸಕರು ಆರೋಪಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ಅವರ ಕ್ಷೇತ್ರದಲ್ಲಿ ಇಂದಿಗೂ ಗುಂಡಿ ಬಿದ್ದ ರಸ್ತೆಗಳು ದುರಸ್ತಿ ಆಗಿಲ್ಲ. ಶಾಸಕರು ಮಾಡಿದ ಆರೋಪವನ್ನು ವಾಪಸ್‌ ಪಡೆಯಬೇಕು’ ಎಂದು ಆಗ್ರಹಿಸಿದರು.

ತಾಲ್ಲೂಕು ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿರತ್ನಮ್ಮ ಅಶೋಕ್‌, ಉಪಾಧ್ಯಕ್ಷ ಮರಿಯಪ್ಪ, ಸದಸ್ಯರಾದ ನಾಗೂಬಾಯಿ ಸೇವಾನಾಯ್ಕ್‌, ಅಶ್ವನಿಬಾಯಿ ಕೃಷ್ಣೋಜಿರಾವ್‌, ಪಾರ್ವತಿಬಾಯಿ ನಾರಾಯಣ ನಾಯ್ಕ್‌, ಸಹಕಾರ ಸಂಘದ ಅಧ್ಯಕ್ಷ ಬಾಳೇಗೌಡ, ಕಲ್ಲೂರು ರಂಗನಾಥ್‌, ನಂದಿ ವಾಹನ ಚಾಲನಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ನರಸಿಂಹಮೂರ್ತಿ, ಅಡಕಮಾರನಹಳ್ಳಿ ಪ್ರಕಾಶ್‌, ವೆಂಕಟೇಶ್‌, ವಿಜಯಕುಮಾರ್‌, ಪಿಡಿಒ ಕಾಂತರಾಜ್‌, ಗೋಕುಲ್‌ ಯಾದವ್‌ , ಆಶಾಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT