‘ಮೋದಿ ರಾಷ್ಟ್ರಪ್ರೇಮದ ಸಂಕೇತ’

ಶುಕ್ರವಾರ, ಏಪ್ರಿಲ್ 26, 2019
35 °C

‘ಮೋದಿ ರಾಷ್ಟ್ರಪ್ರೇಮದ ಸಂಕೇತ’

Published:
Updated:
Prajavani

ಮಾಗಡಿ: ‘ಯುವ ಕಾರ್ಯಕರ್ತರು ಸಂಘಟಿತರಾಗಿದ್ದು, ರಾಷ್ಟ್ರಪ್ರೇಮದ ಸಂಕೇತವಾಗಿರುವ ಎಂ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಲೇಬೇಕು ಎಂಬ ದೃಢಸಂಕಲ್ಪದೊಂದಿಗೆ ಪಕ್ಷದ ಅಭ್ಯರ್ಥಿ ಅಶ್ವಥನಾರಾಯಣ ಅವರ ಗೆಲುವಿಗೆ ಶ್ರಮಿಸುತ್ತಿದ್ದೇವೆ’ ಎಂದು ಪಕ್ಷದ ಯುವ ಪ್ರಕೋಷ್ಠದ ಮುಖಂಡ ಕನ್ನಡ ಕುಮಾರ್‌ ತಿಳಿಸಿದರು.

ಪ್ರಧಾನಿ ಮೋದಿ ಅವರ ಸರ್ಕಾರದ ಜನೋಪಯೋಗಿ ಕೆಲಸಗಳನ್ನು ಪ್ರತಿಬಿಂಬಿಸುವ ಬಿತ್ತಿಚಿತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ ಪಕ್ಷದವರು ಭಾರತದ ವಿರೋಧಿ ರಾಷ್ಟ್ರಗಳೊಂದಿಗೆ ಕೈಜೋಡಿಸಿದ್ದು, ವಿರೋಧ ಪಕ್ಷದವರಿಗೆ ದೇಶಕ್ಕಿಂತ ರಾಜಕೀಯ ಅಧಿಕಾರ ಮುಖ್ಯವಾಗಿದೆ. ಏಪ್ರಿಲ್‌ 18 ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತಹಾಕಿಸಲು ಬೂತ್‌ಮಟ್ಟದಲ್ಲಿ ಯುವಪಡೆ ಸಿದ್ದಗೊಳಿಸಲಾಗಿದೆ ಎಂದು ತಿಳಿಸಿದರು.

ದೇಶಭಕ್ತಿಯ ಯುವಚಿಂಚನವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಿ ಅಧಿಕಾರ ವಹಿಸಿಕೊಂಡು, ಪಾಕ್‌ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುವುದು ಖಚಿತ ಎಂದರು.

ರಾಜ್ಯದಲ್ಲಿ ಕನಿಷ್ಠ 23 ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅಧಿಕ ಮತಗಳಿಸಿ ಸಂಸದರಾಗಿ ಆಯ್ಕೆಯಾಗಿಲಿದ್ದಾರೆ ಎಂದರು. ಪ್ರತಿಯೊಂದು ಹಳ್ಳಿಯಲ್ಲೂ ಯುವಕರನ್ನು ಸಂಘಟಿಸಿ, ಬಿಜೆಪಿ ಪರ ಮತ ಚಲಾಯಿಸಿ, ದೇಶದ ಭವಿಷ್ಯದ ಬಗ್ಗೆ ಮತದಾರರಲ್ಲಿ ಮನವರಿಕೆ ಮಾಡಿಕೊಡಲಾಗುತ್ತಿದೆ. ಬಿಜೆಪಿ ಮುಖಂಡರು ಯುವಕರತ್ತ ಗಮನಹರಿಸಬೇಕಿದೆ ಎಂದರು. ಯುವಕರು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !