ಮಾಗಡಿ: ತಾಲ್ಲೂಕಿನ ಮುಳಕಟ್ಟಮ್ಮ ದೇವಿ ಬ್ರಹ್ಮ ರಥೋತ್ಸವವು ಅದ್ದೂರಿಯಾಗಿ ನಡೆಯಿತು.

ರಸಸಂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಜಿ.ಪರಮೇಶ್ವರ, ‘ಪೂರ್ವಜರು ಆರಾಧಿಸಿಕೊಂಡು ಬಂದ ಮುಳಕಟ್ಟಮ್ಮ ದೇವಿ ಸನ್ನಿಧಿಗೆ ಬರುವುದು ನಮ್ಮ ಬದುಕಿನ ಅವಿಭಾಜ್ಯ ಅಂಗ’ ಎಂದು ಭಾವುಕರಾದರು.

ಬಾಲ್ಯದ ದಿನಗಳನ್ನು ಸ್ಮರಿಸಿದ ಸಚಿವರು, ‘ಚಿಕ್ಕವರಿದ್ದಾಗ ಇಲ್ಲಿಗೆ ಬರಲು ರಸ್ತೆಗಳಿರಲಿಲ್ಲ. ಕುದೂರು ರಸ್ತೆಯಲ್ಲಿ ಬಸ್ನಿಂದ ಇಳಿದು ಅಲ್ಲಿಂದ ತಂದೆ-ತಾಯಿ ಜೊತೆ ಎತ್ತಿನಗಾಡಿಯಲ್ಲಿ ಈ ಕ್ಷೇತ್ರಕ್ಕೆ ಬರುತ್ತಿದ್ದೆವು. ಅಂದಿನಿಂದ ಇಂದಿನವರೆಗೆ ಈ ಕ್ಷೇತ್ರ ಬೆಳೆದು ಬಂದಿರುವ ರೀತಿ ಬೆರಗು ಮೂಡಿಸುತ್ತದೆ’ ಎಂದರು.

ದೇವಸ್ಥಾನಕ್ಕೆ ಬರುವುದು ಕೇವಲ ಸಾಧನೆಯಾಗಬಾರದು. ಭಕ್ತಿ ಮತ್ತು ಭಾವನೆ ಅಂತರಾತ್ಮದಲ್ಲಿ ಇರಬೇಕು. ನಿಷ್ಕಲ್ಮಶ ಭಕ್ತಿಯಿಂದ ತಾಯಿಯನ್ನು ಆರಾಧಿಸುತ್ತಾರೊ, ಅವರ ಕಷ್ಟಗಳನ್ನು ಆಕೆ ದೂರ ಮಾಡುತ್ತಾಳೆ ಎಂಬುದಕ್ಕೆ ನನ್ನ ಜೀವನದಲ್ಲೇ ಅನೇಕ ಉದಾಹರಣೆಗಳಿವೆ. ಪ್ರತಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಸಾವಿರಾರು ಭಕ್ತರು ಇಲ್ಲಿಗೆ ಬರುವುದು ಈ ದೇವಿಯ ಶಕ್ತಿಗೆ ಸಾಕ್ಷಿ’ ಎಂದು ಅವರು ಹೇಳಿದರು.

ಮೆರವಣಿಗೆ: ಜಾತ್ರೆ ಅಂಗವಾಗಿ ಮುಳಕಟ್ಟಮ್ಮ ದೇವಿಗೆ ಬೆಳ್ಳಿ ಕವಚಧಾರಣೆ ಮಾಡಿ ವಿಶೇಷ ಅಲಂಕಾರ ಮಾಡಲಾಗಿತ್ತು. ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದೇವಿಗೆ ಪೂಜೆ ಸಲ್ಲಿಸಿದರು. ಗೃಹ ಸಚಿವರ ಪತ್ನಿ ಕನ್ನಿಕಾ ಪರಮೇಶ್ವರಿ ಅವರು ದೇವಿಯ ಕಳಶ ಹೊತ್ತು ಸಾಗಿದರು. ಸಚಿವರು ಬಾಣ ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಂತೆ ಆಗಸದಲ್ಲಿ ಮೂಡಿದ ವಿವಿಧ ವರ್ಣರಂಜಿತ ಚಿತ್ತಾರಗಳು ನೋಡುಗರ ಗಮನ ಸೆಳೆದವು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಕೀಲು ಕುದುರೆ ಹಾಗೂ ಕರಡಿ ಮಜಲುಗಳ ಪ್ರದರ್ಶನ ಜಾತ್ರೆಗೆ ಕಳೆ ನೀಡಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ರಸಮಂಜರಿ ಮತ್ತು ಹಾಸ್ಯ ಕಾರ್ಯಕ್ರಮಗಳು ಸಾರ್ವಜನಿಕರನ್ನು ರಂಜಿಸಿದವು. ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ ವೇದಿಕೆ ಏರುತ್ತಿದ್ದಂತೆ ಯುವಜನತೆ ಉತ್ಸಾಹ ಮುಗಿಲು ಮುಟ್ಟಿತ್ತು. ನೆಚ್ಚಿನ ನಟನ ಜೊತೆ ಸೆಲ್ಫಿ ಪಡೆಯಲು ಅಭಿಮಾನಿಗಳು ಮುಗಿಬಿದ್ದರು.

ದೇವಾಲಯದ ಸುತ್ತಮುತ್ತಲ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದ ಉಸ್ತುವಾರಿಯನ್ನು ಬೆಸ್ಕಾಂ ಮಾಜಿ ನಿರ್ದೇಶಕ ಬಿ.ವಿ. ಜಯರಾಮ್ ನಿರ್ವಹಿಸಿದರು. ಶಾಸಕ ಎಚ್.ಸಿ. ಬಾಲಕೃಷ್ಣ, ಮಾಜಿ ಶಾಸಕ ಎ. ಮಂಜುನಾಥ್, ಲಕ್ಷ್ಮಿ ಎ. ಮಂಜುನಾಥ್, ವಿಜಯಕುಮಾರ್, ಬಿ.ಎಸ್. ಕುಮಾರ್, ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಮಾಗಡಿ ಡಿವೈಎಸ್ಪಿ ಕೆ.ಎಂ. ಪ್ರವೀಣ್ ಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್, ದೇವಾಲಯದ ಪ್ರಧಾನ ಅರ್ಚಕ ಮಹೇಶ್, ಗಂಗಾಧರಯ್ಯ, ರಾಜು ಹಾಗೂ ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.