ಭಾನುವಾರ, ಸೆಪ್ಟೆಂಬರ್ 26, 2021
28 °C
ಪುರುಷರಿಗೆ ಸಮಾನವಾಗಿ ಕಾಮಗಾರಿಗಳಲ್ಲಿ ಭಾಗಿ l ರಾಜ್ಯಕ್ಕೆ ಮಾದರಿಯಾದ ರಾಮನಗರ

ನರೇಗಾ ಕೂಲಿ: ಮಹಿಳೆಯರೂ ಮುಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ನರೇಗಾ ಕಾಮಗಾರಿಗಳ ಅನುಷ್ಠಾನದಲ್ಲಿ ಜಿಲ್ಲೆಯು ಮುಂದಿದ್ದು, ಅದರಲ್ಲೂ ಮಹಿಳೆಯರು ಪುರುಷರಿಗೆ ಸಮಾನರಾಗಿ ಪಾಲ್ಗೊಳ್ಳುವ ಮೂಲಕ ಸೈ ಎನಿಸಿಕೊಳ್ಳುತ್ತಿದ್ದಾರೆ.

ಪ್ರತಿ ಜಿಲ್ಲೆಯಲ್ಲಿ ನರೇಗಾ ಕಾಮಗಾರಿಯಲ್ಲಿ ಶೇ 33ರಷ್ಟು ಮಹಿಳೆಯರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪಾಲ್ಗೊಳ್ಳಬೇಕು ಎಂಬುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಶಯ. ಆದರೆ, ಜಿಲ್ಲೆಯಲ್ಲಿ ಈ ಪ್ರಮಾಣ ಶೇ 49.4ರಷ್ಟಿದೆ. ಸತತ ಮೂರು ವರ್ಷದಿಂದ ಈ ಸಾಧನೆ ಸಾಧ್ಯವಾಗಿದೆ.

ಸಮಾನ ಕೂಲಿ: ಅಸಂಘಟಿತ ವಲಯದಲ್ಲಿ ಮಹಿಳೆಯರಿಗೆ ಪುರುಷರಿಗಿಂತ ಕಡಿಮೆ ಕೂಲಿ ನೀಡಲಾಗುತ್ತಿದೆ. ಆದರೆ, ನರೇಗಾದಲ್ಲಿ ಸಮಾನ ಕೆಲಸಕ್ಕೆ ಸಮಾನ ಕೂಲಿ ಇದೆ. ದಿನಕ್ಕೆ 289 ಕೂಲಿ ಹಾಗೂ ₹ 10 ಸಲಕರಣೆ ವೆಚ್ಚ ನೀಡಲಾಗುತ್ತದೆ. ಪುರುಷರಿಗೆ ಹೊರಗೆ ಹೆಚ್ಚಿನ ಕೂಲಿ ಸಿಗುವ ಕಾರಣ ಅವರು ಅತ್ತ ಮನಸ್ಸು ಮಾಡುತ್ತಾರೆ. ಆದರೆ ಮಹಿಳೆಯರಿಗೆ ಉತ್ತಮ ಸಂಭಾವನೆ ಸಿಗುವ ಜೊತೆಗೆ ತಾವು ಇರುವ ಊರಿಗೆ ಸಮೀಪದಲ್ಲಿಯೇ ಉದ್ಯೋಗವೂ ಸಿಗುತ್ತಿದೆ. ಹೀಗಾಗಿ ಹೆಚ್ಚಿನವರು ನರೇಗಾ ಕೆಲಸಕ್ಕೆ ಮನಸ್ಸು ಮಾಡುತ್ತಿದ್ದಾರೆ.

ಕಾಯಕ ಮಿತ್ರ: ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ತಲಾ ಒಬ್ಬರು ಮಹಿಳೆಯರನ್ನು ಕಾಯಕ ಮಿತ್ರರನ್ನಾಗಿ ನೇಮಿಸಲಾಗುತ್ತಿದೆ. ಈವರೆಗೆ 74 ಕಾಯಕ ಮಿತ್ರರನ್ನು ನೇಮಿಸಲಾಗಿದೆ.

ಇವರು ಪ್ರತಿ ಮನೆ ಮನೆಗೂ ಭೇಟಿ ನೀಡಿ, ಉದ್ಯೋಗ ಖಾತ್ರಿ ಬಗ್ಗೆ ಮಾಹಿತಿ ನೀಡಲಿದ್ದಾರೆ. ಉದ್ಯೋಗ ಚೀಟಿ ಇಲ್ಲದವರಿಗೆ ಚೀಟಿ ಮಾಡಿಸಿಕೊಟ್ಟು ಕೆಲಸಕ್ಕೆ ಬರಲು ಪ್ರೇರೇಪಿಸುವ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಸ್ವಸಹಾಯ ಸಂಘಗಳ ಮೂಲಕವು ನರೇಗಾ ಕಾಮಗಾರಿಗಳು ನಡೆದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.