ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಾರಾಧಕ ಸಿದ್ಧರಾಜುಗೆ ನಾಟಕ ಅಕಾಡೆಮಿ ಪ್ರಶಸ್ತಿ

ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಜಿಲ್ಲೆಯ ಸಿದ್ಧರಾಜು, ಮೃತ್ಯುಂಜಯ ಆಯ್ಕೆ
Published : 9 ಆಗಸ್ಟ್ 2024, 4:44 IST
Last Updated : 9 ಆಗಸ್ಟ್ 2024, 4:44 IST
ಫಾಲೋ ಮಾಡಿ
Comments

ರಾಮನಗರ: ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಜಿಲ್ಲೆಯ ಬಹುಮುಖ ಪ್ರತಿಭೆಗಳಾದ ರಾಮನಗರದ ಎಸ್. ಸಿದ್ದರಾಜು ಮತ್ತು ಮಾಗಡಿಯ ಯ. ಮೃತ್ಯುಂಜಯ ಅವರು ಆಯ್ಕೆಯಾಗಿದ್ದಾರೆ. 2023–2024ನೇ ಸಾಲಿನ ಪ್ರಶಸ್ತಿಗೆ ಮೃತ್ಯುಂಜಯ ಹಾಗೂ 2024–2025ನೇ ಸಾಲಿನ ಪ್ರಶಸ್ತಿಗೆ ಸಿದ್ದರಾಜು ಪಾತ್ರರಾಗಿದ್ದಾರೆ.

ಜಾನಪದ ಕಲೆಗಳ ತವರಾದ ಜಿಲ್ಲೆಯ ಅಪ್ಪಟ ದೇಸಿ ಪ್ರತಿಭೆಗಳನ್ನು ಅಕಾಡೆಮಿ ಗುರುತಿಸಿ ಪ್ರಶಸ್ತಿ ಘೋಷಿಸಿರುವುದು ಜಿಲ್ಲೆಯ ಕೀರ್ತಿಗೆ ಮತ್ತೊಂದು ಗರಿ ಬಂದಂತಾಗಿದೆ.

ನಗರದ ವಿಜಯನಗರ ನಿವಾಸಿಯಾದ 73 ವರ್ಷದ ಸಿದ್ಧರಾಜು ಅವರು ರಂಗಭೂಮಿ ನಿರ್ದೇಶಕ, ನಟ, ಕೀಬೋರ್ಡ್ ಮತ್ತು ಹಾರ್ಮೋನಿಯಂ ವಾದಕ, ಗಾಯಕ, ನಾಟಕ ರಚನೆಕಾರರಾಗಿ ಕಲಾಸೇವೆಯಲ್ಲಿ ತೊಡಗಿಸಿಕೊಂಡವರು. ಹನ್ನೆರಡನೇ ವಯಸ್ಸಿಗೆ ನಟನೆಯಿಂದ ಶುರುವಾದ ಅವರ ಕಲಾ ಪಯಣ ನಂತರ ನಿರ್ದೇಶನ, ಗಾಯನ, ಗೀತರಚನೆ ಸೇರಿದಂತೆ ರಂಗಭೂಮಿಯ ವಿವಿಧ ವಿಭಾಗಗಳಲ್ಲಿ ದುಡಿದಿದ್ದಾರೆ. 

ತಂದೆಯೇ ಗುರು: ‘ಗುಬ್ಬಿ ವೀರಣ್ಣ ಅವರ ಸಮಕಾಲೀನರಾಗಿದ್ದ ತಂದೆ ಸಿದ್ಧಪ್ಪ ಅವರು ಸಂಗೀತ ವಿದ್ವಾಂಸ ಮತ್ತು ರಂಗಭೂಮಿ ನಿರ್ದೇಶಕರಾಗಿದ್ದರು. ತಾಯಿ ಬೋರಮ್ಮ ಕೂಡ ಗಾಯಕಿ. ತಂದೆ–ತಾಯಿಯೇ ನನ್ನ ಗುರು’ ಎಂದು ಸಿದ್ದರಾಜು ಅವರು ‘ಪ್ರಜಾವಾಣಿ’ಯೊಂದಿಗೆ ಪ್ರಶಸ್ತಿಯ ಸಂಭ್ರಮ ಹಂಚಿಕೊಂಡರು.

‘ಸಾಮಾಜಿಕ ನಾಟಕ, ಐತಿಹಾಸಿ, ಪೌರಾಣಿಕ ನಾಟಕಗಳಲ್ಲಿ ನನಗೆ ಹೆಚ್ಚು ಆಸಕ್ತಿ. ಕವಿಗಳು ರಚಿಸುತ್ತಿದ್ದ ಸಾಮಾಜಿಕ ನಾಟಕಗಳಲ್ಲಿ ಹಾಡು ಇರುತ್ತಿರಲಿಲ್ಲ. ಹಾಡಿಲ್ಲದೆ ನಾಟಕ ಪರಿಣಾಮಕಾರಿಯಾಗುವುದಿಲ್ಲ. ಹಾಗಾಗಿ, ಪ್ರದರ್ಶನ ಸಂದರ್ಭದಲ್ಲಿ ನಾಟಕಕ್ಕೆ ಪೂರಕವಾಗಿ ನಾನೇ ಹಾಡು ಬರೆದು ಪ್ರದರ್ಶನ ಮಾಡುತ್ತಿದ್ದೆ’ ಎಂದು ನೆನೆದರು.

ಸಿದ್ದರಾಜು ಅವರು ನಾಟಕದ ಮಾಸ್ಟರ್ ಕೂಡ ಹೌದು. ‘ಕುರುಕ್ಷೇತ್ರ’, ‘ಪ್ರಚಂಡ ರಾವಣ’, ‘ರಾಜ ಸುಯಾಗ’, ‘ಧಾನಶೂರ ಕರ್ಣ’ ಸೇರಿದಂತೆ ವಿವಿಧ ನಾಟಕಗಳನ್ನು ಕಲಿಸಿ ನೂರಾರು ಪ್ರದರ್ಶನ ಮಾಡಿದ್ದಾರೆ. ನಟರು ಆಗಿರುವ ಅವರು ನಾಟಕ ಸಂಗೀತ ನಿರ್ದೇಶನ, ಗಾಯಕರಾಗಿ ನೂರಾರು ನಾಟಕ ಪ್ರದರ್ಶನದ ಜೊತೆಗೆ ಇಂದಿಗೂ ರಂಗಗೀತೆಗಳ ಪಾಠ ಹೇಳಿ ಕೊಡುತ್ತಿದ್ದಾರೆ. ಅವರ ಕಲಾ ಸೇವೆಗೆ ವಿವಿಧ ಸಂಘ–ಸಂಸ್ಥೆಗಳು ಪ್ರಶಸ್ತಿ–ಪುರಸ್ಕಾರ ನೀಡಿ ಗೌರವಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT