ಚನ್ನಪಟ್ಟಣ: ತಾಲ್ಲೂಕಿನ ನೀಲಸಂದ್ರ ಗ್ರಾಮದ ಬೋರೇದೇವರ ಜಾತ್ರಾಮಹೋತ್ಸವ ಹಾಗೂ ರಾಮನವಮಿ ಅಂಗವಾಗಿ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಚಂದ್ರಸಾಗರ್ ಅವರು ಶುಕ್ರವಾರ ಸುಮಾರು ಐದು ಸಾವಿರ ಮಂದಿ ಭಕ್ತರಿಗೆ ಕುಡಿಯುವ ನೀರು, ಮಜ್ಜಿಗೆಯನ್ನು ವಿತರಣೆ ಮಾಡಿದರು.

ಈ ವೇಳೆ ಮಾತನಾಢಿದ ಅವರು, ಬಹಳ ಹಿಂದಿನಿಂದಲೂ ನಮ್ಮ ಕುಟುಂಬ ಬೋರೇದೇವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಎಲ್ಲಾ ಭಕ್ತರಿಗೆ ಕುಡಿಯುವ ನೀರು, ಮಜ್ಜಿಗೆ, ಪಾನಕ ವಿತರಣೆ ಮಾಡಿಕೊಂಡು ಬರುವ ಪದ್ಧತಿ ಪಾಲಿಸಿಕೊಂಡು ಬರುತ್ತಿದ್ದಾರೆ. ಅದನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ತಿಳಿಸಿದರು.

ಗ್ರಾಮದಲ್ಲಿ ಸುಮಾರು ಐದು ದಿನಗಳ ಕಾಲ ಬೋರೆದೇವರ ಜಾತ್ರಾ ಮಹೋತ್ಸವ ನಡೆಯಲಿದ್ದು, ಪ್ರತಿದಿನವು ನಮ್ಮ ಕುಟುಂಬದಿಂದ ಕುಡಿಯುವ ನೀರು, ಮಜ್ಜಿಗೆಯನ್ನು ವಿತರಣೆ ಮಾಡುತ್ತೇವೆ. ಈ ವರ್ಷ ಬೇಸಿಗೆ ಶಾಖ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಭಕ್ತಾಧಿಗಳಿಗೆ ಕುಡಿಯುವ ನೀರು ಹಾಗೂ ಮಜ್ಜಿಗೆಯ ಅವಶ್ಯಕತೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ಇಲ್ಲಿಗೆ ಆಗಮಿಸುವ ಎಲ್ಲಾ ಭಕ್ತರಿಗೂ ಕುಡಿಯುವ ನೀರು, ಮಜ್ಜಿಗೆಯನ್ನು ವಿತರಣೆ ಮಾಡುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡರಾದ ಶಿವಕುಮಾರ್, ಜಗದೀಶ್, ರಾಜೇಶ್, ನೀಲಸಂದ್ರ ಮಹೇಶ್, ಸುದರ್ಶನ್, ಸುಮಂತ್, ಸುಫಿಸಾದ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.