ಶನಿವಾರ, 6 ಜೂನ್ 2026
×
ADVERTISEMENT

ನಿಖಿಲ್ ಕುಮಾರಸ್ವಾಮಿ ಜೊತೆ ಚರ್ಚೆಗೆ ನಾವು ಸಿದ್ಧ, ಸಮಯ ನಿಗದಿ ಮಾಡಿ: ಕಾಂಗ್ರೆಸ್

ನಿಖಿಲ್ ಜೊತೆ ಚರ್ಚೆಗೆ ಸ್ಥಳೀಯ ಮುಖಂಡರೇ ಸಾಕು ಎಂದ ‘ಕೈ’ ಮುಖಂಡ ದುಂತೂರು ವಿಶ್ವನಾಥ್ ಸವಾಲು
Published : 27 ಮೇ 2026, 10:30 IST
Last Updated : 27 ಮೇ 2026, 10:30 IST
ADVERTISEMENT
ಫಾಲೋ ಮಾಡಿ
Comments
ಬಿಡದಿ ಟೌನ್‌ಶಿಪ್‌ಗೆ ನೋಟಿಫಿಕೇಷನ್‌ ಮಾಡಿದ್ದ ಕುಮಾರಸ್ವಾಮಿ ಅವರು, ಎರಡನೇ ಸಲ ಸಿ.ಎಂ ಆದಾಗ ಯಾಕೆ ಡಿನೋಟಿಫಿಕೇಷನ್ ಮಾಡಲಿಲ್ಲ. ಹಾಗೆ ಮಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ಸುಮ್ಮನಿಸಿದ್ದರು
– ದುಂತೂರು ವಿಶ್ವನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಕೆಂಪು ವಲಯ ಯಾಕೆ ತೆಗೆಯಲಿಲ್ಲ?
‘ಉಪನಗರ ಯೋಜನೆ ಅನುಷ್ಠಾನಕ್ಕೆ ಶತಾಯಗತಾಯ ಪ್ರಯತ್ನಪಟ್ಟಿದ್ದ ಕುಮಾರಸ್ವಾಮಿ ಅವರು, ಯೋಜನೆ ಹೊಣೆಯನ್ನು ಡಿಎಲ್‌ಎಫ್‌ ಕಂಪನಿಗೆ ಕೊಟ್ಟು ₹400 ಕೋಟಿ ಯಾಕೆ ಪಡೆದರು? ಆ ಕಂಪನಿಯವರು ಯಾಕೆ ಕೈ ಚೆಲ್ಲಿ ಹಣ ಹಿಂಪಡೆದರು ಎಂಬುದನ್ನು ಜನರಿಗೆ ಉತ್ತರಿಸಲಿ. ಯೋಜನೆಗೆ ರೈತರು ವಿರೋಧಿಸಿದ್ದಕ್ಕಾಗಿ ಕೈ ಬಿಟ್ಟಿದ್ದಾಗಿ ಸುಳ್ಳು ಹೇಳುತ್ತಿರುವ ಅವರು, ಇಡೀ ಪ್ರದೇಶವನ್ನು ಯಾಕೆ ಕೆಂಪುವಲಯ ಎಂದು ಗುರುತಿಸಿದರು? ಎರಡನೇ ಸಲ ಸಿ.ಎಂ ಆದಾಗ ಯಾಕೆ ಕೆಂಪು ವಲಯ ನಿರ್ಬಂಧ ಯಾಕೆ ತೆಗೆಯಲಿಲ್ಲ ಅಥವಾ ಅಧಿಸೂಚನೆ ರದ್ದುಗೊಳಿಸಲಿಲ್ಲ? ಈಗ ಯೋಜನೆ ವಿರುದ್ಧ ಹೋರಾಟಕ್ಕಿಳಿಯುವ ಯಾವ ನೈತಿಕತೆ ಅವರಿಗಿದೆ?’ ಎಂದು ದುಂತೂರು ವಿಶ್ವನಾಥ್ ಪ್ರಶ್ನಿಸಿದರು.
ರಾಮನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದುಂತೂರು ವಿಶ್ವನಾಥ್ ಅವರು ‘ಪ್ರಜಾವಾಣಿ’ ಪತ್ರಿಕೆಯ ವರದಿ ಪ್ರದರ್ಶಿಸಿದರು.

ರಾಮನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದುಂತೂರು ವಿಶ್ವನಾಥ್ ಅವರು ‘ಪ್ರಜಾವಾಣಿ’ ಪತ್ರಿಕೆಯ ವರದಿ ಪ್ರದರ್ಶಿಸಿದರು.

ರುಡಾ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಗ್ಯಾರಂಟಿ ತಾಲ್ಲೂಕು ಅಧ್ಯಕ್ಷ ವಿ.ಎಚ್. ರಾಜು, ಲಿಂಗೇಶ್ ಕುಮಾರ್, ಸಿಎನ್ಆರ್ ವೆಂಕಟೇಶ್, ವಾಸಿಲ್ ಅಲಿಖಾನ್ ಹಾಗೂ ಇತರರು ಇದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT