ಸೂರ್ಯನಿಗೆ ತಡವಾಗಿ ಹುಟ್ಟಲು ಹೇಳಿದ್ದು ನಾನೇ!

ಸೋಮವಾರ, ಜೂಲೈ 22, 2019
27 °C
ವಿಡಿಯೊ ಮೂಲಕ ಮತ್ತೆ ಸುದ್ದಿಯಾದ ನಿತ್ಯಾನಂದ ಸ್ವಾಮೀಜಿ

ಸೂರ್ಯನಿಗೆ ತಡವಾಗಿ ಹುಟ್ಟಲು ಹೇಳಿದ್ದು ನಾನೇ!

Published:
Updated:
Prajavani

ರಾಮನಗರ: ‘ನಾನು ಹೇಳಿದ್ದರಿಂದಲೇ ಸೂರ್ಯ ಇಂದು 40 ನಿಮಿಷ ತಡವಾಗಿ ಉದಯಿಸಿದ್ದಾನೆ’ ಎನ್ನುವ ಮೂಲಕ ಬಿಡದಿ ನಿತ್ಯಾನಂದ ಪೀಠದ ನಿತ್ಯಾನಂದ ಸ್ವಾಮೀಜಿ ಮತ್ತೆ ಸುದ್ದಿಯಾಗಿದ್ದಾರೆ.

ಬಿಡದಿ ಪೀಠದಲ್ಲಿ ನೆರೆದ ಸಾವಿರಾರು ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡಿರುವ ಈ ವಿಡಿಯೊ ವೈರಲ್‌ ಆಗುತ್ತಿದೆ. ‘ಇಂದು ಎಷ್ಟು ಜನ ಸೂರ್ಯೋದಯ ಆದ ವೇಳೆಯನ್ನು ಗಮನಿಸಿದ್ದೀರಿ ಗೊತ್ತಿಲ್ಲ. ನಾನು ಬೆಳಿಗ್ಗೆ 6.45ರಿಂದ 7ರ ಒಳಗೆ ಧ್ವಜಾರೋಹಣ ಮಾಡಬೇಕಿತ್ತು. ಆದರೆ ಆಶ್ರಮದಲ್ಲಿ ಧ್ವಜಾರೋಹಣ ಮಾಡುವುದು ತಡವಾಯಿತು. ಧ್ವಜಾರೋಹಣ ಮಾಡುವವರೆಗೂ ಬರಬೇಡ ಎಂದು ಸೂರ್ಯನಿಗೆ ಹೇಳಿದ್ದೆ. ಧ್ವಜಾರೋಹಣ ಮುಗಿಸಿದ ಮೇಲೆಯೇ ಆತ ಉದಯಿಸಿದ. ಹೀಗಾಗಿಯೇ ಇಂದು ಬಿಡದಿಯಲ್ಲಿ 40 ನಿಮಿಷ ತಡವಾಗಿ ಸೂರ್ಯೋದಯವಾಗಿದೆ. ಬೇಕಿದ್ದರೆ ಗೂಗಲ್‌ನಲ್ಲಿ ಇಂದಿನ ಸೂರ್ಯೋದಯದ ಸಮಯ ನೋಡಿ’ ಎನ್ನುತ್ತಾರೆ ನಿತ್ಯಾನಂದ. ಇದಕ್ಕೆ ಭಕ್ತರೂ ತಲೆದೂಗುತ್ತಾರೆ.

ನಿತ್ಯಾನಂದರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್‌ ಆಗುತ್ತಿದೆ.

ಬರಹ ಇಷ್ಟವಾಯಿತೆ?

 • 4

  Happy
 • 15

  Amused
 • 2

  Sad
 • 1

  Frustrated
 • 18

  Angry

Comments:

0 comments

Write the first review for this !