ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಸ್‌ಎಸ್‌ ಶಿಬಿರ ಉದ್ಘಾಟನೆ

Last Updated 31 ಮಾರ್ಚ್ 2019, 13:20 IST
ಅಕ್ಷರ ಗಾತ್ರ

ಕುದೂರು(ಮಾಗಡಿ): ‘ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಓದುಬರಹ, ಚರ್ಚೆಗಳಲ್ಲಿ ತೊಡಗಿಸಿಕೊಳ್ಳಿ. ಬಿಡುವಿನ ವೇಳೆಯಲ್ಲಿ ಪೋಷಕರಿಗೆ ನೆರವಾಗುವ ಮೂಲಕ ಸೇವಾಭಾವನೆ ಬೆಳೆಸಿಕೊಳ್ಳಬೇಕು’ ಎಂದು ಹಿರಿಯ ವಕೀಲ ಜಿ.ಪಾಪಣ್ಣ ತಿಳಿಸಿದರು.

ನೀಲಮ್ಮ ಕೆ.ಎ.ಸತ್ಯನಾರಾಯಣಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಸುಗ್ಗನಹಳ್ಳಿಯಲ್ಲಿ ನಡೆಯುತ್ತಿರುವ ಎನ್‌ಎಸ್‌ಎಸ್‌ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯೆ ಸಾಧಕರ ಸ್ವತ್ತು ನಿಜ. ಸಾಧನೆಯ ಮೂಲಕ ಸೇವಾ ಪ್ರತಿನಿಧಿತ್ವ ಬೆಳೆಸಿಕೊಳ್ಳಲು ಎನ್‌ಎಸ್‌ಎಸ್‌ ಶಿಬಿರಗಳು ಸಹಾಯಕವಾಗಲಿವೆ. ಸಂವಿಧಾನದ ಆಶಯದಂತೆ ‘ಬಾಳು–ಬಾಳುಗೊಡು’ ಎಂಬುದನ್ನು ಸೇವೆಯ ಮೂಲಕ ದೃಡಪಡಿಸಬೇಕು’ ಎಂದರು.

ಕಣ್ಣೂರು ಗ್ರಾಮಪಂಚಾಯಿತಿ ಅಧ್ಯಕ್ಷ ಬೋಜಣ್ಣ, ಎನ್‌ಎಸ್‌ಎಸ್‌ ಅಧಿಕಾರಿ ದೇವರಾಜ್‌, ಉರಗಪ್ರೇಮಿ ಅರುಣ್‌ ಕುಮಾರ್‌, ಉಪನ್ಯಾಸಕ ರವೀಶ್‌ ಮಾತನಾಡಿದರು. ಸುಗ್ಗನಹಳ್ಳಿ ಸರ್ಕಾರಿ ಪಶುಆಸ್ಪತ್ರೆಯ ಆವರಣದಲ್ಲಿ ಸಸಿನೆಟ್ಟು ನೀರೆರೆಯಲಾಯಿತು. ಕಸಗುಡಿಸಿ ಸ್ವಚ್ಛತೆ ಸೇವೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT