ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪ್ರತಿಭಾವಂತ ಕಲಾವಿದರಿಗೆ ಅವಕಾಶ: ಎಂ.ಶಿವಶಂಕರಚಾರಿ

Last Updated 27 ಏಪ್ರಿಲ್ 2019, 13:52 IST
ಅಕ್ಷರ ಗಾತ್ರ

ಕನಕಪುರ: ಹೊಸ ತಲೆಮಾರಿನ ಕಲಾವಿದರಿಗೆ ಹಾಗೂ ಅವಕಾಶ ವಂಚಿತರಾಗಿ ತೆರೆಮರೆಯಲ್ಲಿರುವ ಪ್ರತಿಭಾನ್ವಿತರಿಗೆ ಅವಕಾಶ ಕಲ್ಪಿಸಿಕೊಡಲು ಕಲಾ ಪ್ರತಿಭಾನ್ವೇಷಣೆ ಸಂಸ್ಥೆಯು ಶ್ರಮಿಸುತ್ತಿದೆ ಎಂದು ಸಂಸ್ಥೆಯ ಸಂಸ್ಥಾಪಕ ಎಂ.ಶಿವಶಂಕರಚಾರಿ ತಿಳಿಸಿದರು.

ನಗರದ ಕೆಂಕೇರಮ್ಮ ದೇವಾಲಯದಲ್ಲಿ ಸಂಸ್ಥೆ ವತಿಯಿಂದ ನೂತನವಾಗಿ ನಿರ್ಮಿಸುತ್ತಿರುವ ಸಿನಿಮಾ 'ಆತ್ಮ'ದ ಮುಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ಇದಕ್ಕೆ ಬೇಕಾದ ಕಲಾವಿದರನ್ನು ಗ್ರಾಮೀಣ ಪ್ರದೇಶದಲ್ಲಿ ಹೊಸಬರಿಗೆ ಅವಕಾಶವನ್ನು ಕೊಡಲಾಗುತ್ತಿದೆ. ಇತ್ತೀಚೆಗೆ ಹೊಸ ಕಲಾವಿದರ ಹುಡುಕಾಟಕ್ಕಾಗಿ ದೇಗುಲ ಮಠದಲ್ಲಿ ಆಡಿಶನ್‌ ಮಾಡಲಾಯಿತು. ಅದರಲ್ಲಿ 86 ಮಂದಿಗೆ ಅವಕಾಶ ನೀಡಿದ್ದು ಅದರಲ್ಲಿ 54 ಮಂದಿ ಆಯ್ಕೆಯಾಗಿದ್ದಾರೆ ಎಂದರು.

ಸಂಸ್ಥೆ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಒಟ್ಟು 150 ಹೊಸ ಕಲಾವಿದರಿಗೆ ಅವಕಾಶ ಕೊಡಲು ತೀರ್ಮಾನಿಸಿದ್ದು ಉಳಿದಂತವರ ಆಯ್ಕೆಗೆ ಹುಡುಕಾಟ ನಡೆಸಿದ್ದೇವೆ ಎಂದು ತಿಳಿಸಿದರು.

ಕನಕಪುರದ ಟೆಂಟ್‌ ‌ರಾಮಣ್ಣ, ಹೊಸಕೋಟೆ ಶಿವಮಲ್ಯ, ಹೊಸ ಕಲಾವಿದರಾದ ಭೂಮಿಕ, ಪಲ್ಲವಿ, ವೇದಾವತಿ, ಅರುಣ, ಪ್ರಶಾಂತ್‌, ವೆಂಕಟೇಶ್‌, ಗಗನ್‌, ಜಯಲಕ್ಷ್ಮಿ, ಮಧು, ಶ್ರೀಧರ್‌, ರೋಹಿಣಿ, ತನುಜ, ರಶ್ಮಿ, ದೇವಿಕ, ಇಂಚರ, ಸೌಮ್ಯ, ಮಹಮ್ಮದ್‌, ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT