ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

Last Updated 14 ಆಗಸ್ಟ್ 2019, 14:40 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಹಾರೋಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿರುಪಾಕ್ಷಿಪುರ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹಲವು ವಿಭಾಗಗಳಲ್ಲಿ ಗೆಲುವು ಸಾಧಿಸುವ ಮೂಲಕ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ತಾಲ್ಲೂಕಿನ ಜೆ.ಬ್ಯಾಡರಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಶಾಲೆಯ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.

ಬಾಲಕರ ವಿಭಾಗದಲ್ಲಿ 100 ಮೀ, 200 ಮೀ. ಓಟ, ಟ್ರಿಪಲ್‌ ಜಂಪ್‌ನಲ್ಲಿ ರಾಕೇಶ್ ಪ್ರಥಮ ಸ್ಥಾನ, 400 ಮೀ. ಓಟದಲ್ಲಿ ಲಿಖಿತ್ ಪ್ರಥಮ, 200 ಮೀ. ಓಟದಲ್ಲಿ ವಿಕಾಸ್ ದ್ವಿತೀಯ, ಮುತ್ತರಾಜ್ ತೃತೀಯ, 1500 ಮೀ. ಓಟದಲ್ಲಿ ಲಿಖಿತ್ ದ್ವಿತೀಯ, 3000 ಮೀ. ಓಟದಲ್ಲಿ ನಿಖಿಲ್ ಗೌಡ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಉದ್ದ ಜಿಗಿತದಲ್ಲಿ ಪ್ರಮೋದ್ ದ್ವಿತೀಯ, ಜಾವಲಿನ್ ನಲ್ಲಿ ಯೋಗೇಶ್ ಗೌಡ ಪ್ರಥಮ, ಲಕ್ಷ್ಮಿ ನಂದನ್ ಗೌಡ ದ್ವಿತೀಯ, ಡಿಸ್ಕಸ್ ಥ್ರೋನಲ್ಲಿ ಲೋಕೇಶ್ ತೃತೀಯ ಸ್ಥಾನವನ್ನು ಗಳಿಸಿದ್ದಾರೆ. ಸಾಮೂಹಿಕ ವಿಭಾಗದ ಕೊಕ್ಕೋ ಮತ್ತು ರಿಲೇ ಪಂದ್ಯಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಬಾಲಕಿಯರ ವಿಭಾಗದಲ್ಲಿ 200 ಮೀ. ಓಟದಲ್ಲಿ ಭೂಮಿಕಾ ಪ್ರಥಮ, 400 ಮೀ. ಓಟದಲ್ಲಿ ಕೀರ್ತನಾ ಪ್ರಥಮ, ಸ್ಪಂದನ ದ್ವಿತೀಯ ಸ್ಥಾನ, 800 ಮೀ. ಓಟದಲ್ಲಿ ವಿದ್ಯಾಶ್ರೀ ಪ್ರಥಮ, ಪೂಜಾ ದ್ವಿತೀಯ. 1500 ಮೀ, 3000 ಮೀ. ಓಟದಲ್ಲಿ ಶಿಲ್ಪ ಪ್ರಥಮ, ವಿದ್ಯಾಶ್ರೀ ದ್ವಿತೀಯ ಸ್ಥಾನ, ಉದ್ದ ಜಿಗಿತದಲ್ಲಿ ಕೀರ್ತಿ ಪ್ರಥಮ, ಎತ್ತರ ಜಿಗಿತದಲ್ಲಿ ಭೂಮಿಕಾ ಪ್ರಥಮ, ಸಾಮೂಹಿಕ ವಿಭಾಗದಲ್ಲಿ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಕೊಕ್ಕೋ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿ ಸಾಧನೆ ಮಾಡಿದ್ದಾರೆ.

ತಾಲ್ಲೂಕು ಹಂತಕ್ಕೆ ಪ್ರವೇಶ ಪಡೆದಿರುವ ಈ ಎಲ್ಲ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯಶಿಕ್ಷಕಿ ವಿ.ಹೇಮಾವತಿ, ದೈಹಿಕ ಶಿಕ್ಷಣ ಶಿಕ್ಷಕಿ ಎಚ್.ಎಸ್. ಆಶಾ, ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಶಾಲೆಯ ಶಿಕ್ಷಕರು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT