ರಾಮನಗರ: ‘ಕೃಷಿ ಮೂಲದ ಹೆಣ್ಣನ್ನು ಮೂಲ ಮಾತೃಕೆಯರು ಎನ್ನಬೇಕು. ಈ ಸತ್ಯವನ್ನು ಮರೆಮಾಚಿ ಪುರುಷ ಪಾರಮ್ಯ ಮೆರೆಯುತ್ತಿರುವ ನಾವು ಇತಿಹಾಸವನ್ನೇ ಮರೆಯುತ್ತಿದ್ದೇವೆ. ಇತಿಹಾಸವನ್ನು ಮರೆತ ನಾವು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವೇ?’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಪ್ರಶ್ನಿಸಿದರು.

ತಾಲ್ಲೂಕಿನ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ತಾಲ್ಲೂಕಿನ ಕೆರೆಮೇಗಳದೊಡ್ಡಿಯಲ್ಲಿರುವ ಮುದ್ದುಶ್ರೀ ದಿಬ್ಬದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಎರಡು ದಿನಗಳ ‘ಕನ್ನಡ ಸಾಹಿತ್ಯ ಮತ್ತು ಬೇಸಾಯದ ಬದುಕು’ ಕುರಿತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವ್ಯವಸಾಯದ ವಿವರಗಳನ್ನು ಕುರಿತು ಹೇಳುವ ಶಿಬಿರ ಇದಲ್ಲ. ಬದಲಿಗೆ ಕನ್ನಡ ಸಾಹಿತ್ಯ ಪ್ರಂಪರೆಯಲ್ಲಿ ಬೇಸಾಯದ ಬದುಕು ಎಷ್ಟೊಂದು ಪ್ರಾಮುಖ್ಯತೆ ಪಡೆದಿತ್ತು ಎಂಬುದನ್ನು ಅರಿಯುವುದ ಈ ಶಿಬಿರದ ಉದ್ದೇಶ. ಪ್ರಾಚೀನರಿಂದ ಆಧುನಿಕರವರೆಗೆ ಇದ್ದ ಕಾವ್ಯದ ಸಾರವನ್ನು ವಿವರಿಸುತ್ತಾ, ಧರ್ಮವೇ ದೊಡ್ಡದು ಎಂಬ ಮಾತಿಗೆ ಮೀರಿ, ಕಾವ್ಯ ಧರ್ಮ ದೊಡ್ಡದು ಎಂಬ ಉಕ್ತಿಯಲ್ಲಿ ಹೆಚ್ಚು ನಂಬಿಕೆ ಇಡಬೇಕಾದ ಪರಿಸ್ಥಿತಿ ಉಂಟಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಡಾ. ಎಂ. ಬೈರೇಗೌಡ ಮಾತನಾಡಿ, ‘ಕಂಪನಿಯೊಂದರ ವಸ್ತುಗಳಿಗೆ ಹೇಗೆ ಬೆಲೆ ನಿರ್ಧರಿಸಿ ಮಾರಾಟ ಮಾಡುವರೋ, ಹಾಗೆಯೇ ರೈತ ಬೆಳೆದ ಬೆಳೆಗೂ ತಾನೇ ಬೆಲೆ ನಿಗದಿಪಡಿಸುವ ಕಾಲ ಬಂದೇ ಬರುತ್ತದೆ. ಬಹು ರಾಷ್ಟ್ರೀಯ ಕಂಪನಿಗಳ ವಿಷಪೂರಿತ ಔಷಧಿ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ತನ್ನ ಫಲವಂತಿಕೆಯನ್ನು ಕಳೆದುಕೊಳ್ಳುತ್ತಿದೆ’ ಎಂದರು.

‘ಅಮ್ಮ ಮಾಡುತ್ತಿದ್ದ ಉಪ್ಪೆಸರು ತನ್ನ ಸತ್ವ ಮತ್ತು ಸ್ವಾದ ಕಳೆದುಕೊಂಡಿದೆ. ಇಷ್ಟೆಲ್ಲ ಆತಂಕಗಳ ನಡುವೆ ಮತ್ತೆ ಮೊದಲಿನ ಸ್ಥಿತಿಗೆ ಭೂಮಿಯನ್ನು ಹದಗೊಳಿಸಿ, ಎಲ್ಲವನ್ನೂ ನಿಲ್ಲಿಸಿ ಪಾರಂಪರಿಕ ನೆಲೆಗೆ ತರಬೇಕಾದರೆ ಅದೆಷ್ಟು ವರ್ಷಗಳ ಸಮಯ ಹಿಡಿಯುವುದೋ ಗೊತ್ತಿಲ್ಲ’ ಎಂದು ಹೇಳಿದರು.

ಶಿಬಿರಾರ್ಥಿ ಏಜಾಸ್ ಪಾಷಾ ಅಭಿಪ್ರಾಯ ಹಂಚಿಕೊಂಡರು. ಸಮಾರೋಪ ಸಮಾರಂಭಕ್ಕೂ ಮೊದಲು ಚಿಂತಕ ಡಾ. ಮಂಜುನಾಥ ಅದ್ದೆ ಸಾಧಕ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಬೀಬಿಜಾನ್ ಮೌಲಾಸಾಬ್ ಹಳೆಮನಿ, ಡಾ. ಸ್ವಾಮಿ ಆನಂದ, ಪ್ರಸನ್ನ ಭಟ್, ಸಹನಾ ಕಾಂತಬೈಲು, ಚಂ.ಸು. ಪಾಟೀಲ, ದೋ.ಚಿ. ಗೌಡ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಶಿಬಿರ ನಿರ್ದೇಶಕ ಡಾ. ಚನ್ನಪ್ಪ ಅಂಗಡಿ, ಡಾ. ನೂರ್ ಸಮದ್ ಅಬ್ಬಲಗೆರೆ, ರೈತ ಹೋರಾಟಗಾರ್ತಿ ಅನುಸೂಯಮ್ಮ, ಅಕಾಡೆಮಿ ಸದಸ್ಯ ಸಂಚಾಲಕ ಡಾ. ರವಿಕುಮಾರ್ ಬಾಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.