ಸೋಮವಾರ, ಸೆಪ್ಟೆಂಬರ್ 20, 2021
22 °C

ಬಿಲ್‌ ಹಣಕ್ಕೆ ಲಂಚ; ಪಿಡಿಒ ಸೇರಿ ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ನರೇಗಾ ಕಾಮಗಾರಿಯ ಬಿಲ್‌ ಪಾವತಿಸಲು ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಮುದಗೆರೆ ಗ್ರಾಮ ಪಂಚಾಯಿತಿ ಪಿಡಿಒ ಡಿ. ಮಂಜುಳಾ ಹಾಗೂ ಕೋಲೂರು ಗ್ರಾ.ಪಂ. ಸದಸ್ಯ ಕೆ.ಎಂ. ಮಹೇಶ್‌ ಎಂಬುವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮಂಗಳವಾರ ಬಂಧಿಸಿದರು.

ಮಾಕಳಿ ನಿವಾಸಿಯೊಬ್ಬರು ಮುದಗೆರೆ ಗ್ರಾ.ಪಂ. ವತಿಯಿಂದ ನರೇಗಾ ಅಡಿ ಬೆಳಕೆರೆ ಗ್ರಾಮದ ಪೈಪ್‌ಲೈನ್‌ ಕಾಮಗಾರಿ ನಿರ್ವಹಿಸಿದ್ದರು. ಈ ಕಾಮಗಾರಿಯ ಬಿಲ್ ₹65 ಸಾವಿರ ಆಗಿತ್ತು. ಈ ಹಣ ಬಿಡುಗಡೆ ಮಾಡಲು ಪಿಡಿಒ ಅವರು ಗ್ರಾ.ಪಂ. ಸದಸ್ಯ ಪಾಂಡು ಎಂಬುವರ ಮೂಲಕ ಶೇ 17ರಂತೆ ಒಟ್ಟು 11ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಗುತ್ತಿಗೆದಾರರು ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದರು. ಪಿಡಿಒ ಮಂಜುಳಾ ಪರವಾಗಿ ಕೋಲೂರು ಗ್ರಾ.ಪಂ. ಸದಸ್ಯ ಮಹೇಶ್‌ ಎಂಬುವರು ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ಮಾಡಿ ಹಣ ವಶಪಡಿಸಿಕೊಂಡು ಆರೋಪಿಗಳಿಬ್ಬರನ್ನು ಬಂಧಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು