ಶುಕ್ರವಾರ, ನವೆಂಬರ್ 22, 2019
19 °C

ದಾಖಲೆ ಕೇಳಿದ ಪೊಲೀಸರು

Published:
Updated:

ರಾಮನಗರ: ಶಾಸಕ ಡಾ. ಜಿ. ಪರಮೇಶ್ವರ್‌ ಅವರ ಆಪ್ತ ಸಹಾಯಕ ರಮೇಶ್‌ ಆತ್ಮಹತ್ಯೆ ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು, ಅವರ ಕೈ ಬರಹ ದೃಢಪಡಿಸಿಕೊಳ್ಳಲು ಕುಟುಂಬ ಸದಸ್ಯರಿಂದ ದಾಖಲೆ ಕೇಳಿ ನೋಟಿಸ್ ನೀಡಿದ್ದಾರೆ.

ರಮೇಶ್‌ ಡೆಟ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ಥಳದಲ್ಲಿ ಸಿಕ್ಕಿರುವ ಡೆಟ್‌ನೋಟ್‌ ರಮೇಶ್‌ ಅವರದ್ದೋ ಇಲ್ಲವೋ ಎಂದು ಧೃಢಪಡಿಸಿಕೊಳ್ಳಲು ಜ್ಞಾನಭಾರತಿ ಠಾಣೆ ಪೊಲೀಸರು ರಮೇಶ್‌ ಪತ್ನಿ ಸೌಮ್ಯಾರಿಗೆ ನೋಟಿಸ್ ನೀಡಿದ್ದು, ರಮೇಶ್‌ರ ಕೈ ಬರಹದ ಯಾವುದಾದರೂ ದಾಖಲೆಗಳು ಇದ್ದರೆ ಒದಗಿಸುವಂತೆ ಸೂಚಿಸಿದ್ದಾರೆ.

ಪ್ರತಿಕ್ರಿಯಿಸಿ (+)