ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪತ್ರಿಕೆ ಓದುವ ಅಭ್ಯಾಸ ಅಗತ್ಯ’

ಶಾಲಾ ಮಕ್ಕಳಿಗೆ ಪ್ರಜಾವಾಣಿ ವಿತರಣೆ ಕಾರ್ಯಕ್ರಮ
Last Updated 28 ಜೂನ್ 2019, 13:47 IST
ಅಕ್ಷರ ಗಾತ್ರ

ಬಿಡದಿ: ‘ಪತ್ರಿಕೆ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು’ ಎಂದುಪಾರ್ವತಿ ಸೂಪರ್ ಪ್ಯೂಯಲ್ ಸ್ಟೇಷನ್ ಮಾಲೀಕರಾದ ಕೋಮಲಾ ಕಿರಣ್‌ ಕುಮಾರ್‌ ಹೇಳಿದರು.

‘ಇಂಡಿಯನ್ ಆಯಿಲ್ ಕಾರ್ಪೊರೇಷನ್‌ ಲಿಮಿಟೆಡ್’ನ ಸಾಮಾಜಿಕ ಹೊಣೆಗಾರಿಕೆ ನಿಧಿ ಅಡಿ, ‘ಪಾರ್ವತಿ ಸೂಪರ್ ಫ್ಯೂಯಲ್ ಸ್ಟೇಷನ್’ ಹಾಗೂ ‘ಪ್ರಜಾವಾಣಿ’ ದಿನಪತ್ರಿಕೆ ಸಹಯೋಗದಲ್ಲಿ ಬಿಡದಿಯ ಬಿಜಿಎಸ್ ಹೈಸ್ಕೂಲ್ ಮತ್ತು ಬಾನಂದೂರು ತ್ಯಾಗರಾಜು ಶಾಲೆ ಮಕ್ಕಳಿಗೆ ‘ಪ್ರಜಾವಾಣಿ’, ‘ಪ್ರಜಾವಾಣಿ –ಸಹಪಾಠಿ’ ದಿನಪತ್ರಿಕೆ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಾರ್ವತಿ ಸೂಪರ್ ಪ್ಯೂಯಲ್ ಸ್ಟೇಷನ್‌ನ ಅರುಣ್ ಕುಮಾರ್ ಅವರು ಮಾತನಾಡಿ, ‘ವಿದ್ಯಾರ್ಥಿಗಳು ಸಮಾಜದಲ್ಲಿ ನಡೆಯುವ ಸುತ್ತಮುತ್ತಲಿನ ಪ್ರತಿಯೊಂದು ಆಗು ಹೋಗುಗಳ ಬಗ್ಗೆ ತಿಳಿಯುವುದು ಅಗತ್ಯ. ಈ ತಿಳಿವಳಿಕೆಗಾಗಿ ಪ್ರಜಾವಾಣಿ ದಿನ ಪತ್ರಿಕೆಯನ್ನು ನೀಡುತ್ತಿರುವುದು ನಮಗೆ ಹೆಮ್ಮೆ ಎನಿಸುತ್ತಿದೆ. ಜೊತೆಗೆ ಕನ್ನಡವನ್ನು ಓದಿ ಮನೆಗಳಿಗೆ ತಿಳಿಸುವುದು ನಿಮ್ಮೆಲ್ಲರ ಹೊಣೆಯಾಗಿರುತ್ತದೆ’ ಎಂದರು.

‘ದಿನಪತ್ರಿಕೆಯನ್ನು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಓದುವುದನ್ನು ನಾವು ದಿನನಿತ್ಯ ರೂಢಿಸಿಕೊಳ್ಳಬೇಕು. ಮೊದಲು ದಿನ ಪ್ರತಿಕೆಯಿಂದ ಪ್ರಯೋಜವೇನು ಎಂಬುದನ್ನು ತಿಳಿಯಬೇಕು. ಪ್ರಜಾವಾಣಿ ವಿತರಣೆಗಾಗಿ ನಾವು ನಾಲ್ಕು ಶಾಲೆಗಳನ್ನು ದತ್ತುತೆಗೆದುಕೊಂಡಿದ್ದೇವೆ’ ಎಂದರು.

ಪ್ರಜಾವಾಣಿ ಪ್ರಸರಣ ವಿಭಾಗದ ಜನರಲ್ ಮ್ಯಾನೇಜರ್ ಆಲಿವರ್‌ ಲೆಸ್ಲಿ, ‘ದಿನಪತ್ರಿಕೆಯಿಂದ ಪ್ರಯೋಜನವೇನೆಂದರೆ 7 ದಿನಗಳಲ್ಲಿ ಪ್ರಜಾವಾಣಿ ದಿನಪತ್ರಿಕೆಯು ವಿಭಿನ್ನರೀತಿಯಾಗಿ ಮುದ್ರಿಸುತ್ತಿರುವುದು ಕಾಣಬಹುದಾಗಿದೆ. ನಾವು ಏನು ಆಗಬೇಕು ಎಂಬುದನ್ನು ಕ್ರೀಡೆ, ವಿಜ್ಞಾನಿ, ನೃತ್ಯ, ಆಧುನಿಕ ಕೃಷಿ, ಹಾಗೂ ಇನ್ನೂ ಹೆಚ್ಚಿನ ವಿವಿಧ ರೀತಿಯ ಅವಕಾಶವಿದೆ ಎಂದು ದಿನಪತ್ರಿಕೆಯಿಂದ ತಿಳಿಯಬಹುದು’ ಎಂದರು.

ಪ್ರಜಾವಾಣಿ ಪ್ರಸರಣ ವಿಭಾಗದ ಎಜಿಎಂ ಜಗನ್ನಾಥ್ ಜೋಯಿಸ್‌ ಮಾತನಾಡಿ, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಹಾಗೂ ಪಾರ್ವತಿ ಸೂಪರ್ ಪ್ಯೂಯೆಲ್ ಸ್ಟೇಷನ್ ಮಾಲೀಕರಾದ ಕೋಮಲ್ ಕಿರಣ್ ಕುಮಾರ್ ನಾಲ್ಕು ಪ್ರೌಢಶಾಲೆಗಳಿಗೆ ಸುಮಾರು 600 ಪ್ರಜಾವಾಣಿ ದಿನಪತ್ರಿಕೆಗಳನ್ನು ವಿತರಣೆ ಮಾಡುತ್ತಿರುವುದು ನಿಜವಾಗಿಯು ತುಂಬಾ ಒಳ್ಳೆಯ ಕೆಲಸ. ದಿನಪತ್ರಿಕೆ ಓದಿದ ನಂತರ ನಿಮ್ಮ ಮನೆಯವರು ಓದಲು ಹೇಳಿ ದಿನಪತ್ರಿಕೆಯಲ್ಲಿ ವಿದ್ಯಾಬ್ಯಾಸಕ್ಕೆ ಹಾಗೂ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಉಪಯೋಗವಾಗುತ್ತದೆ ಎಂದರು.

ಬಿಡದಿ ಸರ್ಕಾರಿ ಶಾಲೆ ಮುಖ್ಯೋಪಾಧ್ಯಾಯ ರಾಜು ಅವರು ಮಾತನಾಡಿ,‘ಎಸ್ಎಸ್ಎಲ್ ಸಿ ಯ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆಯನ್ನು ಪ್ರಕಟಿಸಿರುವುದು ಓದಿದಾಗ ಹೆಚ್ಚು ಅಂಕಗಳು ಪಡೆಯಲು ಅನುಕೂಲವಾಗಿದೆ’ ಎಂದರು.

ಇಂಡಿಯನ್ ಆಯಿಲ್ ಸೇಲ್ಸ್ ಆಫೀಸರ್ ಸಿದ್ದಾರ್ಥ ಶುಕ್ಲಾ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳಿಸಲು ಮುಂದಿನ ಭವಿಷ್ಯಕ್ಕೆ ಉತ್ತಮವಾದ ದಿನಪತ್ರಿಕೆಯನ್ನು ಓದಲು ಉತ್ತಮ ಅವಕಾಶವಾಗಿದೆ. ಈ ಅವಕಾಶ ಸದುಪಯೋಪಡಿಸಿಕೊಂಡು ಮುಂದಿನ ಮುಖ್ಯವಾಹಿನಿಗೆ ಬರಲು ಬಹಳ ಅನುಕೂಲವಾಗುತ್ತದೆ’ ಎಂದರು.

ತ್ಯಾಗರಾಜು ಶಾಲೆಯ ಸಿಇಒ ಸಂದೀಪ್ ಮಾತನಾಡಿ, ದಿನಪತ್ರಿಕೆಯಿಂದ ವಿದ್ಯಾರ್ಥಿಗಳ ಭವಿಷ್ಯವು ಕೂಡ ವೃದ್ಧಿಯಾಗುತ್ತದೆ. ದೇಶವನ್ನು ಮುನ್ನಡೆಸುವ ಜವಾಬ್ದಾರಿಗೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತ್ಯಾಗರಾಜು ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕೋಮಲ ಮಾತನಾಡಿ, ‘ವಾರದ 7 ದಿನಗಳಲ್ಲಿ ಕ್ರೀಡೆ, ಕೃಷಿ, ಸಿನಿಮಾ ರಂಜನೆ, ಹಾಗೂ ವಿಭಿನ್ನ ರೀತಿಯ ಸುದ್ದಿಗಳನ್ನು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಮುದ್ರಣವಾಗುತ್ತಿದೆ ನಾವು ದೇಶದ ಸಮಾಚಾರ ಒಂದೇ ಅಲ್ಲದೇ ಇತರೆ ಸಮಾಚಾರವನ್ನು ನಾವು ಈ ಪತ್ರಿಯಲ್ಲಿ ತಿಳಿದುಕೊಳ್ಳಬಹುದು ಎಂದರು.

ಇದೇ ಸಂದರ್ಭದಲ್ಲಿ ಕೋಮಲ ಕಿರಣ್ ಕುಮಾರ್ ಅವರನ್ನು ಪ್ರಜಾವಾಣಿ ಹಾಗೂ ತ್ಯಾಗರಾಜು ಶಾಲೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ತ್ಯಾಗರಾಜು ಶಾಲೆಯ ಕಾರ್ಯದರ್ಶಿ ಸರ್ವೇಶ್ ಹಾಗೂ ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT