ಮಂಗಳವಾರ, ನವೆಂಬರ್ 12, 2019
24 °C

ಡಿಕೆಶಿ ಬಿಡುಗಡೆಗೆ ಪ್ರಾರ್ಥಿಸಿ ಹೋಮ

Published:
Updated:
Prajavani

ಕನಕಪುರ: ನಗರದ ಬಸ್‌ ನಿಲ್ದಾಣದ ಪಕ್ಕದಲ್ಲಿರುವ ಶಕ್ತಿ ದೇವತೆ ಕಾಳಮ್ಮ ದೇವಿಯ ದೇವಸ್ಥಾನದಲ್ಲಿ ತಾಲ್ಲೂಕು ವಿಶ್ವಕರ್ಮ ಸಮಾಜದ ವತಿಯಿಂದ 'ವಿಶ್ವಕರ್ಮ ಜಯಂತಿ' ನಡೆಯಿತು.

ವಿಶ್ವಕರ್ಮ ಸಮಾಜದ ತಾಲ್ಲೂಕು ಅಧ್ಯಕ್ಷ ಶಿವರಾಮಚಾರ್‌ ಮಾತನಾಡಿ, ‘ರಾಜ್ಯದಲ್ಲಿ ನೆರೆ ಹಾವಳಿಯಿಂದ ಉತ್ತರ ಕರ್ನಾಟಕದ ಜನತೆ ಸಂಕಷ್ಟದಲ್ಲಿದ್ದಾರೆ. ಕ್ಷೇತ್ರದ ಶಾಸಕ ಡಿ.ಕೆ.ಶಿವಕುಮಾರ್‌ ಅವರು ಇ.ಡಿ ಬಂಧನದಲ್ಲಿದ್ದಾರೆ. ಇದು ಸಮಾಜದ ಜನರಿಗೆ ನೋವಿನ ಸಂದರ್ಭವಾಗಿದ್ದು ವಿಶ್ವಕರ್ಮ ಜಯಂತಿಯನ್ನು ಸರಳವಾಗಿ ಆಚರಿಸಿದ್ದೇವೆ. ಜತೆಗೆ ಶಿವಕುಮಾರ್‌ ಅವರು ಆದಷ್ಟು ಬೇಗ ಎಲ್ಲ ಸಂಕಷ್ಟಗಳಿಂದ ಹೊರಬರಬೇಕೆಂದು ಕಾಳಮ್ಮ ದೇವಾಲಯದಲ್ಲಿ ಹೋಮ ಮಾಡಿದ್ದೇವೆ’ ಎಂದು ತಿಳಿಸಿದರು.

ದೇವಾಲಯದಲ್ಲಿ ಜಯಂತಿ ಆಚರಣೆಯ ನಂತರ ಹೋಮ ನಡೆಸಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಸಮಾಜದ ಪ್ರಧಾನ ಕಾರ್ಯದರ್ಶಿ ಜಯರಾಮಚಾರಿ, ಆಡಳಿತ ಮಂಡಳಿಯ ನಿರ್ದೇಶಕರು, ಸಂಘದ ಸದಸ್ಯರು, ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)