ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷ ಸ್ಥಾನದಿಂದ ಅನರ್ಹತೆ ಆದೇಶಕ್ಕೆ ತಡೆ

ತಾಲ್ಲೂಕು ಸಹಕಾರ ಸಂಘಗಳ ನಿರೀಕ್ಷಕರಲ್ಲಿ ಸುಳ್ಳು ದೂರು ನೀಡಿದ ಆರೋಪ
Last Updated 20 ಏಪ್ರಿಲ್ 2019, 13:53 IST
ಅಕ್ಷರ ಗಾತ್ರ

ರಾಮನಗರ: ಬೈರಮಂಗಲ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಹಾಗೂ ಅಧ್ಯಕ್ಷ ಸ್ಥಾನದಿಂದ ಅನರ್ಹಗೊಳಿಸಿದ್ದ ರಾಮನಗರ ಉಪವಿಭಾಗದ ಸಹಾಕರ ಸಂಘಗಳ ಸಹಾಯಕ ನಿಬಂಧಕರ ಆದೇಶಕ್ಕೆ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ತಡೆಯಾಜ್ಞೆ ನೀಡಿದ್ದಾರೆ ಎಂದು ಸಂಘದ ಅಧ್ಯಕ್ಷ ಎಚ್.ಎಸ್ .ಸಿದ್ದರಾಜು ಹೇಳಿದರು.

ಇಲ್ಲಿನ ಭಾರತಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಸಂಘದ ಬೆಳವಣಿಗೆ ಹಾಗೂ ರೈತರಿಗೆ ಸಹಾಯ ಮಾಡುತ್ತಿರುವುದನ್ನು ಸಹಿಸದೆ ವೈಯಕ್ತಿಕ ದ್ವೇಷವಿದ್ದ ಕಾರಣ ಮುರಳಿ ಎಂಬುವರು ನನ್ನ ವಿರುದ್ಧ ರೈತರಿಂದ ಸಾಲದ ಹಣವನ್ನು ಅನಧಿಕೃತವಾಗಿ ಪಡೆಯುತ್ತಿದ್ದಾರೆಂದು ತಾಲ್ಲೂಕು ಸಹಕಾರ ಸಂಘಗಳ ನಿರೀಕ್ಷಕರಲ್ಲಿ ಸುಳ್ಳು ದೂರು ದಾಖಲಿಸಿದ್ದರು. ಆ ನಂತರ ಸಹಾಯಕ ನಿಬಂಧಕರು ನನ್ನನ್ನು ಸಂಘದ ನಿರ್ದೇಶಕ ಹಾಗೂ ಅಧ್ಯಕ್ಷ ಸ್ಥಾನದಿಂದ ಅನರ್ಹಗೊಳಿಸಿದ್ದರು’ ಎಂದು ತಿಳಿಸಿದರು.

ಸಂಘದ ರೈತ ಸದಸ್ಯರಿಗೆ ಸಾಲ ವಿತರಣೆ ಸಂದರ್ಭದಲ್ಲಿ ಬ್ಯಾಂಕಿಗೆ ಮೂಲ ದಾಖಲಾತಿಗಳನ್ನು ಅಂದರೆ ಪಾನ್ ಕಾರ್ಡ್ , ಬ್ಯಾಂಕಿನ ಪಾಸ್ ಪುಸ್ತಕ, ಪಹಣಿ, ಇಸಿ ಇತ್ಯಾದಿಗಳನ್ನು ಒದಗಿಸಬೇಕು. ಆದರೆ, ಕೆಲ ಸದಸ್ಯರು ದಾಖಲಾತಿ ನೀಡಲು ವಿಳಂಬ ಮಾಡುತ್ತಿದ್ದರು. ಅವಿದ್ಯಾವಂತ ಮತ್ತು ವಯಸ್ಕರಾದ ರೈತ ಸದಸ್ಯರು ತಾಲ್ಲೂಕು ಕಚೇರಿ, ಉಪ ನೋಂದಾಣಾಧಿಕಾರಿ ಕಚೇರಿ ಹಾಗೂ ಸಂಘಕ್ಕೆ ಹೋಗಿ ಬರಲು ಸಾಧ್ಯವಾಗುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಅಲ್ಲದೆ, ಅವರೇ ದಾಖಲಾತಿಗಳನ್ನು ಒದಗಿಸಲು ಯಾರನ್ನಾದರು ನಿಯೋಜನೆ ಮಾಡುವಂತೆ ಕೋರಿಕೊಂಡಿದ್ದರು’ ಎಂದರು.

ರೈತ ಸದಸ್ಯರ ನೆರವಿಗಾಗಿಯೇ ಸಂಘದ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಒಬ್ಬ ಗುಮಾಸ್ತನನ್ನು ನಿಯೋಜನೆ ಮಾಡಲಾಗಿತ್ತು. ಸಾಲ ಪಡೆಯಲು ರೈತರು ಒದಗಿಸಬೇಕಾದ ಅಗತ್ಯ ದಾಖಲೆಗಳನ್ನು ಆ ಗುಮಾಸ್ತ ಸಿದ್ಧಪಡಿಸಿ ಕೊಡುತ್ತಿದ್ದರು. ಇದಕ್ಕೆ ತಗಲುವ ಖರ್ಚು ವೆಚ್ಚಗಳನ್ನು ರೈತರೇ ಗುಮಾಸ್ತನಿಗೆ ನೀಡುತ್ತಿದ್ದರು. ಇದನ್ನು ಕೆಲವರು ತಪ್ಪಾಗಿ ಅರ್ಥ ಮಾಡಿಕೊಂಡು ಸಂಘದಲ್ಲಿ ಲಂಚ ಪಡೆಯಲಾಗುತ್ತಿದೆ ಎಂದು ಸುಳ್ಳು ಆರೋಪ ಮಾಡಿ ದೂರು ದಾಖಲಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸಂಘ ಹಾಗೂ ತನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವ ವ್ಯಕ್ತಿಗೆ ಕೃಷಿ ಬಗ್ಗೆ ಕನಿಷ್ಠ ಜ್ಙಾನವೂ ಇಲ್ಲ. ರೈತರಿಗೆ ಸಹಕಾರಿಯಾಗಿರುವ ಸಂಘದ ಉನ್ನತಿಯನ್ನು ಸಹಿಸದೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ವಿರುದ್ಧವೂ ಕಾನೂನು ಹೋರಾಟ ನಡೆಸುತ್ತೇನೆ ಎಂದು ತಿಳಿಸಿದರು.

ಹಿಂದಿನ ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರ 50 ಸಾವಿರ ಸಾಲ ಮನ್ನಾ ಮಾಡಿದಾಗ ಸಂಘದಿಂದ 786 ರೈತರಿಗೆ ₹3.20 ಕೋಟಿ ಸಾಲ ನೀಡಲಾಗಿತ್ತು. 50 ಸಾವಿರ ಸಾಲ ಮನ್ನಾವಾಗಲು ಕೆಲ ರೈತರು ಸುಸ್ತಿ ಹಣ ಪಾವತಿಸಬೇಕಾಗಿತ್ತು. ಅಷ್ಟೂ ಹಣವನ್ನು ಭರಿಸಲಾಗದೆ ರೈತರು ಆರ್ಥಿಕ ಸಂಕಷ್ಟದಲ್ಲಿದ್ದರು. ಆಗ ಸಂಘದಿಂದಲೇ ಸುಸ್ತಿ ಹಣ ಪಾವತಿಸಿ ಕೆಲ ರೈತರ ನೆರವಿಗೆ ಬಂದಿದ್ದೇವೆ. ಇದರಿಂದಲೇ ಸಂಘದ ಆಡಳಿತ ಮಂಡಳಿಯ ರೈತಪರ ಕಾಳಜಿ ತಿಳಿಯುತ್ತದೆ ಎಂದರು.

ಭಾರತಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ. ಚಂದ್ರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT